SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಗ್ರಾಮಾಂತರ Rural

ರೈಲ್ವೆ ಹಳಿಗಳ ಮೇಲೆ ಭೂ ಕುಸಿತ,
ರೈಲು ಸಂಚಾರ ವ್ಯತ್ಯಯ

07 Landslide
ಬೆಳಗಾವಿ:
ದೂಧಸಾಗರ ಮತ್ತು ಸೋನಾಲಿಯಂ ಮಧ್ಯೆ ರೈಲ್ವೆ ಹಳಿಗಳ ಮೇಲೆ  ೨೦೧೯ ಸೆಪ್ಟೆಂಬರ್ ೦೭ರ ಶನಿವಾರ ಗುಡ್ಡ ಕುಸಿದ ಪರಿಣಾಮವಾಗಿ  ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಯಿತು.

ಸಂಜೆ ೫ ಗಂಟೆ ವೇಳೆಗೆ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ವಾಸ್ಕೋಡ ಗಾಮಾ -ಹಜರತ್ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿನ ಮಾರ್ಗ ಬದಲಿಸಿ ಮಡಗಾಂವ್ಸ ರೋಹಾ, ಪನವೇಲ್, ಕಲ್ಯಾಣ, ಮನಮಾಡ್ ಮೂಲಕ ಓಡಿಸಲಾಯಿತು..

ಹುಬ್ಬಳ್ಳಿ  -ಲೋಂಡಾ/ ನಿಜಾಮುದ್ದೀನ್ ಲಿಂಕ್ ಎಕ್ಸಪ್ರೆಸ್  ರೈಲುಗಾಡಿಯನ್ನು ಧಾರವಾಡದಲ್ಲಿ ನಿಲ್ಲಿಸಲಾಯಿತು.. ವಾಸ್ಕೋಡಗಾಮಾ -ಬೆಳಗಾವಿ ಪ್ಯಾಸೆಂಜರ್ ರೈಲನ್ನು ಕುಲೆಂ ನಲ್ಲಿ ನಿಲ್ಲಿಸಲಾಯಿತು.. ವಾಸ್ಕೋಡಗಾಮಾ -ಕೆಎಸ್ ಆರ್ ಬೆಂಗಳೂರು ಸ್ಲೀಪರ್ ಕೋಚ್ ರೈಲನ್ನು ಮಡಗಾಂವ್ ನಲ್ಲಿ ನಿಲ್ಲಿಸಲಾಯಿತು.

ರೈಲ್ವೆ ಹಳಿ ಮೇಲಿನ ಮಣ್ಣನ್ನು ಸ್ವಚ್ಚಗೊಳಿಸುವ ಕಾರ್ಯ ನಡೆಯುತ್ತಿದೆ.  ಇಂದು ರಾತ್ರಿ ಅಥವಾ ನಾಳೆ ಮಾರ್ಗ ಸುಗಮವಾಗಬಹುದೆಂದು ರೈಲ್ವೆ ಇಲಾಖೆ ನಿರೀಕ್ಷಿಸಿದೆ.

———————————————————————————————————————–

ದ.ಕ. ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅಧಿಕಾರ ಸ್ವೀಕಾರ

07 sindh b roopesh

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಿಂಧು ಬಿ. ರೂಪೇಶ್ ಅವರು 2019 ಸೆಪ್ಟೆಂಬರ್ 7ರ  ಶನಿವಾರ ಮಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ರೂಪಾ ನೂತನ ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿದರು. ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್, ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.

ಸಿಂಧು ಅವರು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿಯಾಗಿದ್ದಾರೆ.

ಈ ಹಿಂದೆ, 1989 ರಲ್ಲಿ ರಂಜನಿ ಶ್ರೀಕುಮಾರ್ ಅವರು ಅವಿಭಜಿತ ದ.ಕ. ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿದ್ದರು. ಸಿಂದು ಬಿ. ರೂಪೇಶ್ ಅವರು ದ.ಕ. ಜಿಲ್ಲೆಯ 129 ನೇ ಜಿಲ್ಲಾಧಿಕಾರಿ. ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳೆರಡೂ ಹುದ್ದೆಗಳಲ್ಲಿ ಮಹಿಳೆಯರಿರುವುದು ವಿಶೇಷ.

1 Comment »


Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ