SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಜಾಗತಿಕ ಭಯೋತ್ಪಾದಕ ಹಫೀಜ್ ಸಯೀದ್  ‘ಜೀವನ ವೆಚ್ಚ’ಕ್ಕೆ ಕಾಸು ಬೇಕಂತೆ..!


26 hafeez sayeed

ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪಾಕ್ ಮೊರೆ

ನವದೆಹಲಿ:  ‘ಅತ್ಯಗತ್ಯವಾದ ಮೂಲಭೂತ ಜೀವನ ವೆಚ್ಚ’ಗಳಿಗಾಗಿ  ಹಣವನ್ನು ಹಿಂಪಡೆಯಲು  ಲಷ್ಕರ್-ಇ—ತೊಯ್ಬಾ  ಮುಖ್ಯಸ್ಥ ಹಫೀಜ್ ಸಯೀದ್ ಗೆ  ಅವಕಾಶ ನೀಡುವಂತೆ ಕೋರಿ ಪಾಕಿಸ್ತಾನವು 2019 ಸೆಪ್ಟೆಂಬರ್ 26ರ ಗುರುವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮನವಿ ಮಾಡಿದೆ.

2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ವಿಶ್ವಸಂಸ್ಥೆಯ ‘ನಿಯೋಜಿತ ಭಯೋತ್ಪಾದಕ ಸಂಘಟನೆ’ ಮುಖ್ಯಸ್ಥ ಜಮಾತ್ –ಉದ್ – ದವಾ ಸಂಘಟನೆಯ ಮುಖ್ಯಸ್ಥ ಸಯೀದ್ ಮೇಲೂ  ವಿಶ್ವಸಂಸ್ಥೆ ಭದ್ರತಾ ಮಂಡಳಿಯು ನಿಷೇಧ ವಿಧಿಸಿದೆ.  2008ರ ನವೆಂಬರ್ 26ರಂದು ನಡೆದ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ೧೬೬ ಜನರು ಸಾವನ್ನಪ್ಪಿದ್ದರು.

ನಾಲ್ಕು ವರ್ಷಗಳ ನಂತರ, ಅಮೆರಿಕವು ಸಯೀದನನ್ನು ಬಂಧಿಸಿದವರಿಗೆ  1 ಕೋಟಿ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಿತ್ತು.  ಹಫೀಜ್ ಸಯೀದ್ ಈ ವರ್ಷದ ಆರಂಭದಲ್ಲಿ ವಿಶ್ವಸಂಸ್ಥೇಯ ಭಯೋತ್ಪಾದನಾ ಪಟ್ಟಿಯಿಂದ ಹೊರಬಲು ಯತ್ನಿಸಿದ್ದ. ಆದರೆ ಅದು ಫಲಿಸಿರಲಿಲ್ಲ.

೨೬/೧೧ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರನಂತಹ ಭಯೋತ್ಪಾದಕರ ವಿರುದ್ಧ ನಿರ್ಬಂಧಗಳನ್ನು ಜಾರಿಗೊಳಿಸುವುದರ  ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತನ್ನ ಮನವಿಯನ್ನು ಮಾಡಿರುವ ಪಾಕಿಸ್ತಾನವು ‘ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಆದೇಶದ ಮೇರೆಗೆ ಸ್ಥಗಿತಗೊಂಡಿರುವ ಸಯೀದ್ ಬ್ಯಾಂಕ್ ಖಾತೆಗಳಲ್ಲಿ ಪಿಂಚಣಿ ಖಾತೆಯೂ ಸೇರಿದೆ ಎಂದು ತಿಳಿಸಿದೆ.

ಪೂರ್ವಣಾವಧಿಯ ಭಯೋತ್ಪಾದನೆ ಚಟುವಟಿಕೆಗೆ ಇಳಿಯುವ ಮುನ್ನ  ಸಯೀದ್  ಕಾಲೇಜು ಪ್ರಾಧ್ಯಾಪಕನಾಗಿದ್ದು, ಆತನ ಪಿಂಚಣಿ ಹಣವನ್ನೂ ಪಾಕಿಸ್ತಾನ ಸರ್ಕಾರವು ಠೇವಣಿ ಮಾಡಿತ್ತು.

“ವಿಶ್ವಸಂಸ್ಥೆ ಭದ್ರತಾ ಮಂಡಳಿಯ  ನಿರ್ಣಯ ೧೨೬೭ ರ ಅನುಸಾರ ಪಾಕಿಸ್ತಾನ ಸರ್ಕಾರವು ಸಯೀದ್ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಿದೆ, ಸ್ಥಗಿತಗೊಂಡಿರುವ ೧.೫ ಲಕ್ಷ ರೂ. ಹಣವನ್ನು ಹಿಂಪಡೆಯಲು ಆಸ್ತಿ ಸ್ಥಗಿತ  ವಿನಾಯಿತಿ ಕೋರಿದ ಸರ್ಕಾರ ಸಯೀದನಿಗೆ ಸ್ವಂತಕ್ಕೆ ಮತ್ತು ಕುಟುಂಬಕ್ಕೆ  ಮೂಲಭೂತ ಜೀವನ ವೆಚ್ಚಗಳನ್ನು ಭರಿಸಲು ಅನುಕೂಲ ಕಲ್ಪಿಸಲು ಕೋರಿಕೆ ಮಂಡಿಸಿದೆ.

ಪಾಕಿಸ್ತಾನವು ಸಲ್ಲ್ಲಿಸಿದ  ಮನವಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಸ್ವೀಕರಿಸಿದೆ.

ಭಯೋತ್ಪಾದನೆಗೆ ಹಣಕಾಸು ಒದಗಿಸಿದ್ದಕ್ಕಾಗಿ ಲಷ್ಕರ್ ಸಂಸ್ಥಾಪಕನನ್ನು ವಶಕ್ಕೆ ತೆಗೆದುಕೊಂಡ ಕೇವಲ ಒಂದು ತಿಂಗಳ ಬಳಿಕ,  ಪ್ರಾಸಂಗಿಕವಾಗಿ, ಮೂಲಭೂತ ಖರ್ಚಿಗೆ ಹಣ ಬೇಕು ಎಂಬ ಹಫೀಜ್ ಸಯೀದ್ ಅವರ ಹೇಳಿಕೆಯನ್ನು ಬೆಂಬಲಿಸಿ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಈ  ಕೋರಿಕೆ  ಸಲ್ಲಿಸಿದೆ!

September 26, 2019 - Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Politics, Spardha, Terror, World | , , ,

1 Comment »

  1. […] ನೀಡುವಂತೆ ಪಾಕಿಸ್ತಾನವು ಮಾಡಿದ ಮನವಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯು  2019 […]

    Pingback by ಕುಟುಂಬ ವೆಚ್ಚಕ್ಕಾಗಿ ಹಣ ಹಿಂಪಡೆಯಲು ಹಫೀಜ್ ಸಯೀದ್‌ಗೆ ಅನುಮತಿ « SPARDHA | September 26, 2019 | Reply


Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ