SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

H.Y.Mahesh, Your memory remains forever

H.Y.Mahesh, Your memory remains forever 


Mr. H.Y. Mahesh who has been fighting corruption in BBMP for the past threeYears through intense use of RTI and Lokayukta died in an accident this Monday (20th December 2010) Morning. Mahesh was fatally hit from behind by a BMTC bus while he was on hisScooter and he succumbed to injuries before he arrived at the Victoria Hospital.

He was on his way to Lokayukta office to file a complaint against BBMP OfficersAnd Revenue Department officials.

Mahesh had waged an intense war against corruption at BBMP and for the pastThree years, he along with me and Dr. Shankara Prasad had worked under the banner of Sachidananda Nagara Nyayapara Andolana (SNNA) (www.nyayapara-andolana.org) and had used RTI and Lokayukta to solve the problem of Khata issual at BBMP.

Most recently, Mahesh was called one of the “Khata Warriors” of Bangalore and he along with others was successful in convincing Lokayukta Justice Santosh Hegde to issue a directive to BBMP Commissioner to issue Khata to all Sachidananda Nagar site owners, according to the Supreme Court order.


His hard work of more than three years had benefited more than 900 Bangalore residents toget their BBMP Khatas without paying bribe.

After obtaining his B.Com degree, Mahesh has been in the Banking industry.

He had been working with State Bank of India for the past 32 years with manyresponsibilities. His passion had been to fight against injustice since hisCollege days.

He had taken keen interest in understanding government processesAnd in intricately working towards trapping people involved in corrupt practices in government.


His mission after retirement was to educate citizens of theirRights and duties. He is survived by his wife Harini , two daughters Namitha and Namratha apart from his aged mother and brothers.

“Losing such a dedicated activist who wanted to clean up the corrupt governmentSystem, is a great loss to Bangaloreans and to Sachidananda Nagara NyayaparaAndolana” said Dr. Shankara Prasad, who was a partner and coordinator of the Andolana.

Now Mahesh, remained a memory to all of us. But his commitment, inspiring words and compassion to friends and family members will inspire all of us in forwarding the movement he committed and fulfill the task unfulfilled.

Please click the images here to read the press reports appeared in various news papers in Kannada as well as English, like The Hindu, Indian Express, Times of India, Deccan Chronicle, DNA, Kannada Prabha, Udayavani, Vijaya Karnataka, Prajavani etc along with the PDF of some condolence messages we received.

Nethrakere Udaya Shankara

December 23, 2010 Posted by | Education, General Knowledge, Journalism, Memory, Nenapu, News, Spardha, Uncategorized | , , , , | Leave a comment

ಗೊತ್ತಾ ಈ ಮಹಾಂತೇಶ ‘ನಮ್ಮ ಮನೆ ಹುಡುಗ’ ಆಗಿದ್ದ..!

ಗೊತ್ತಾ ಈ ಮಹಾಂತೇಶ  ‘ನಮ್ಮ ಮನೆ ಹುಡುಗ’ ಆಗಿದ್ದ..!
ದಕ್ಷಿಣ ಕನ್ನಡ ಎಲ್ಲಿ? ಬೈಲ ಹೊಂಗಲ ಎಲ್ಲಿ? ಅಪ್ಪನ ದೇಹಛೇದನ ಮಾಡಿದ ವಿಶ್ವದ ಮೊದಲ ವ್ಯಕ್ತಿ ಎಂಬ ಎಂಬ ಹೆಗ್ಗಳಿಕೆಗೆ ಪಾತ್ರನಾದ ಡಾ. ಮಹಾಂತೇಶ ರಾಮಣ್ಣನವರ ಬಗ್ಗೆ ಬಹಳ ಮಂದಿಗೆ ಗೊತ್ತಿಲ್ಲದ ಸಂಗತಿ ಇಲ್ಲುಂಟು. ನೆನಪಿಡಿ ಇದು ಯಾವುದೇ ಪತ್ರಿಕೆಯಲ್ಲಿ ಅಥವಾ ಟಿವಿ ಚಾನೆಲ್ಲುಗಳಲ್ಲಿ ಬಂದಿಲ್ಲ. ಕುತೂಹಲ ತಣಿಯಬೇಕು ಎಂದರೆ ಮುಂದಕ್ಕೆ ಓದಿ…

ಇದು ಸುಮಾರು 13 ವರ್ಷಗಳ ಹಿಂದಿನ ಕಥೆ. ಹುಬ್ಬಳ್ಳಿಯಲ್ಲಿ ನಾನು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ದಿನ  ಈ ಹುಡುಗ ಬಂದಿದ್ದ. ಆಯುರ್ವೇದ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಪತ್ರಿಕೆಯಲ್ಲಿ ಸುದ್ದಿ ಪ್ರಕಟಣೆ ಸಲುವಾಗಿ ನೀಡುವುದು ಆತನ ಉದ್ಧೇಶವಾಗಿತ್ತು. ಆ ಆಮಂತ್ರಣ ಪತ್ರಿಕೆಯಲ್ಲಿ ಇದ್ದ ಒಂದು ಪುಟ್ಟ ಸಾಲು ನನ್ನ ಗಮನ ಸೆಳೆಯಿತು. ಬಿ.ಎಸ್. ರಾಮಣ್ಣವರ ಅವರಿಂದ ಉಚಿತ ದಂತ ಚಿಕಿತ್ಸಾ ಶಿಬಿರ! ಈ ಬಗ್ಗೆ ಹುಡುಗನ ಬಳಿ ವಿಚಾರಿಸಿದ್ದೆ.

‘ಶಿಬಿರದಲ್ಲಿ ಬಿ.ಎಸ್. ರಾಮಣ್ಣವರ ಅರಿವಳಿಕೆಯನ್ನೇ ನೀಡದೆ, ಒಂದಿಷ್ಟೂ ನೋವು ಆಗದಂತೆ ಚಕ ಚಕನೆ ಹಲ್ಲು ಕೀಳುತ್ತಾರೆ ಎಂಬ ಉತ್ತರ ಬಂತು. ನನ್ನ ಕುತೂಹಲ ಇನ್ನಷ್ಟು ಹೆಚ್ಚಿತ್ತು…. ಈ ರಾಮಣ್ಣವರ ಎಂಬ ವೈದ್ಯರನ್ನು ಮಾತನಾಡಿಸಬೇಕು ಎನ್ನಿಸಿತು.

ಆಮಂತ್ರಣ ಪತ್ರಿಕೆ ತಂದಿದ್ದ ಹುಡುಗನ ಅಕ್ಕನ ಮನೆ ಹುಬ್ಬಳ್ಳಿಯ ಉಣಕಲ್ ಸಮೀಪ ಇತ್ತು. ಅಲ್ಲಿಗೆ ಬರುವುದಾಗಿ ಹೇಳಿದೆ. ಆ ಹುಡುಗನ ಜೊತೆಗೇ ಅಲ್ಲಿಗೆ ಹೋದೆ. ವಯೋವೃದ್ಧ ರಾಮಣ್ಣನವರ ಜೊತೆಗೆ ಮಾತನಾಡಿದೆ. ಅರಿವಳಿಕೆ ನೀಡದೆ ಹಲ್ಲು ಕೀಳುವ ಅವರ ವಿಶೇಷ ವಿದ್ಯೆ ಬಗ್ಗೆ ಪ್ರಶ್ನಿಸಿದೆ. ಅವರಿಂದ ಅದರ ಬಗ್ಗೆ ವಿಸ್ತೃತ ವಿವರಣೆ ಲಭಿಸಿತು.

ಈ ಬಗ್ಗೆ ಬರೆದ ವಿಶೇಷ ಲೇಖನ ‘ಸುಧಾ’ ವಾರಪತ್ರಿಕೆಯಲ್ಲಿ (16 ನವೆಂಬರ್ 1997) ಪ್ರಕಟವಾಯಿತು. ಇದೇ ಲೇಖನ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲೂ ಪ್ರಕಟಗೊಂಡಿತು. ಸುಧಾ ಪತ್ರಿಕೆಯಲ್ಲಿ ಬಂದ ಲೇಖನವನ್ನು ಇಲ್ಲಿರುವ ಸಂದರ್ಶನ ನಡೆಸುತ್ತಿರುವ ಚಿತ್ರವನ್ನು ಕ್ಲಿಕ್ಕಿಸಿ ಓದಬಹುದು.

ಹೀಗೆ ಪರಿಚಿತನಾದ ಈ ಹುಡುಗ ಆಗ ಹುಬ್ಬಳ್ಳಿಯ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ವೈದ್ಯ ಪದ್ಧತಿ ಕಲಿಯುತ್ತಿದ್ದ. ಕ್ರಮೇಣ ಆತನ ಜೊತೆಗಿನ ಆತ್ಮೀಯತೆಯನ್ನೂ ಹೆಚ್ಚಿಸಿತು. ಇದೇ ವೇಳೆಗೆ ನಮ್ಮ ಮನೆಯಲ್ಲೇ ಇದ್ದ ನನ್ನ ಪತ್ನಿಯ ತಂಗಿಯ ಮಗ ಮನುವಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ನನಗೆ ಆಯುರ್ವೇದ ಆಸ್ಪತ್ರೆಗೆ ಅಡ್ಡಾಡಬೇಕಾಗಿತ್ತು.

ಆಯುರ್ವೇದ ಕಾಲೇಜಿನ ಈ ಹುಡುಗ ನಮ್ಮ ಮನೆಗೆ ಬಂದು ಆಸ್ಪತ್ರೆಗೆ ಹುಡುಗನನ್ನು ಕರೆದೊಯ್ಯಲು ನೆರವಾಗುತ್ತಿದ್ದ. ತನ್ನ ದ್ವಿಚಕ್ರವಾಹನದಲ್ಲೇ ಈ ಬಾಲಕನ್ನು ಕರೆದೊಯ್ಯುತ್ತಿದ್ದ. ಆತನ ಗುರು ಆಯುರ್ವೇದ ಕಾಲೇಜಿನ ಡಾ. ಪ್ರಶಾಂತ ಅವರ ಬಳಿಗೆ ಕರೆದೊಯ್ದು ವೈದ್ಯೋಪಚಾರ ಮಾಡಿಸುತ್ತಿದ್ದ.

ಮನೆಗೆ ಬಂದಾತ ನಮ್ಮ ಮಕ್ಕಳ ಜೊತೆಗೆ ನಿತ್ಯ ಮಕ್ಕಳಾಟ ಆಡುತ್ತಿದ್ದ, ನಗೆ ಚಾಟಿಕೆ ಹಾರಿಸುತ್ತಿದ್ದ. ಯಾವ ಸಂಕೋಚವೂ ಇಲ್ಲದೆ ಮನೆ ಮಂದಿಯಂತೆಯೇ ಬೆರೆತು ಊಟಕ್ಕೆ, ತಿಂಡಿಗೆ ಕಾಡುತ್ತಿದ್ದ. ಅವರೊಂದಿಗೆ ‘ಫೊಟೋ’ ಹೊಡೆಸಿಕೊಂಡಿದ್ದ.

ಕೆಲವೊಮ್ಮೆ ಕಾಲೇಜಿನಲ್ಲಿ ಯಾವುದೋ ಕೆಲಸದಿಂದ ಬರುವುದು ತಡವಾಯಿತೆಂದು ರಾತ್ರಿ ಕಚೇರಿಗೆ ಬಂದು ನನ್ನೊಂದಿಗೇ ಮನೆಗೆ ಬಂದು ನನ್ನ ಊಟದಲ್ಲೇ ತನಗೂ ಪಾಲು ಪಡೆದು ಖುಷಿಯಾಗಿ ಉಂಡು ನಂತರ ಅಕ್ಕನ ಮನೆಗೆ ಹೋಗುತ್ತಿದ್ದ.

ಒಂದು ದಿನ ನನ್ನನ್ನೂ ನನ್ನ ಮನೆಯ ಪಕ್ಕದ ಮನೆಯಲ್ಲೇ ಇದ್ದ ಸಹೋದ್ಯೋಗಿ ಮದಕರಿ ನಾಯ್ಕ್ ಅವರನ್ನೂ ಒತ್ತಾಯಪೂರ್ವಕವಾಗಿ ‘ಸಿದ್ಧ ಸಮಾಧಿ’ಯೋಗದ ಪರಿಚಯ ಕಾರ್ಯಕ್ರಮಕ್ಕೆ ಕರೆದೊಯ್ದಿದ್ದ. ನಮ್ಮಿಬ್ಬರನ್ನೂ ‘ಸಿದ್ಧ ಸಮಾಧಿ ಶಿಬಿರ’ದಲ್ಲಿ ಪಾಲ್ಗೊಳ್ಳುವಂತೆ ಮಾಡಿ ನನ್ನ ಜೀವಮಾನದಲ್ಲಿ ಬಹುತೇಕ ಅಪರಿಚಿತವಾಗಿದ್ದ ‘ಯೋಗ ವಿದ್ಯೆಯ’ ಪರಿಚಯ ಮಾಡಿಸಿಕೊಟ್ಟಿದ್ದ.

ತಾನು ಸಿದ್ಧ ಸಮಾಧಿ ಯೋಗದ ಮೂಲಕ ಯೋಗ ವಿದ್ಯೆ ಕಲಿತಿದ್ದರೂ ಅದಕ್ಕೆ ವಿಶ್ವ ವಿದ್ಯಾಲಯದ ಮಾನ್ಯತೆ ಬೇಕೆಂದು ಧಾರವಾಡ ವಿಶ್ವ ವಿದ್ಯಾಲಯದಲ್ಲಿ ಯೋಗ ಕೋರ್ಸ್ ಸೇರಿ ‘ಅಧಿಕೃತವಾಗಿ ಯೋಗಿ’ ಆಗಿದ್ದ!

ಮತ್ತೊಂದು ಸಲ ಬೈಲಹೊಂಗಲದಲ್ಲಿ ಇರುವ ತಮ್ಮ ಮನೆಗೆ ಕುಟುಂಬ ಸಮೇತವಾಗಿ ನಮ್ಮನ್ನು ಕರೆದೊಯ್ದಿದ್ದ. ಬೈಲ ಹೊಂಗಲ ಸಮೀಪದ ಪ್ರೇಕ್ಷಣೀಯ ಸ್ಥಳ ಸೊಗಲ ಕ್ಷೇತ್ರದ ದೇವಸ್ಥಾನಗಳಿಗೆ ಕರೆದೊಯ್ದು ಪರಿಚಯಿಸಿದ್ದ.

ರಾಣಿ ಚೆನ್ನಮ್ಮನ ಸಮಾಧಿಯ ದರ್ಶನವನ್ನೂ ಮಾಡಿಸಿದ್ದ.

ನಮ್ಮ ಊರು ದಕ್ಷಿಣ ಕನ್ನಡದ ವಿಟ್ಟಕ್ಕೂ ಬಂದು ದಕ್ಷಿಣ ಕನ್ನಡದ ಪ್ರಾಕೃತಿಕ ಸೊಬಗನ್ನು ಕಂಡು ಖುಷಿ ಪಟ್ಟಿದ್ದ. ಕೆರೆ, ತೋಡುಗಳಲ್ಲಿ ಮೇಲ್ಮಟ್ಟದಲ್ಲೇ ಹರಿಯುತ್ತಿದ್ದ ನೀರು, ಎಲ್ಲೆಂದರಲ್ಲೂ ಕಾಣುತ್ತಿದ್ದ ಹಚ್ಚ ಹಸಿರಿಗೆ ಮಾರು ಹೋಗಿದ್ದ. ದರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ನಮ್ಮೊಂದಿಗೆ ಅಡ್ಡಾಡಿದ್ದ.

ನಾವು ವರ್ಗವಾಗಿ ಬೆಂಗಳೂರಿಗೆ ಬಂದ ಬಳಿಕ ಈ ಹುಡುಗ ಮತ್ತೆ ಕಾಣಲು ಸಿಕ್ಕಿರಲಿಲ್ಲ. ಈ ವಾರ ದೂರದರ್ಶನ ಚಾನೆಲ್ಲುಗಳಲ್ಲಿ ಪತ್ರಿಕೆಗಳಲ್ಲಿ ಇದೇ ಹುಡುಗನ ಚಿತ್ರ, ಸಂದರ್ಶನಗಳು ಬಂದಾಗ ಈ ಹುಡುಗನ ಬಗ್ಗೆ ಹೆಮ್ಮೆ ಎನಿಸಿತು.ಜಗತ್ತಿನ ವೈದ್ಯಕೀಯ ಇತಿಹಾಸದಲ್ಲಿ ತನ್ನ ಹೆಸರು ದಾಖಲಿಸಿದ ಹುಡುಗ ನಮ್ಮ ಮನೆ ಹುಡುಗನಂತೆ ಓಡಾಡಿದ್ದನಲ್ಲ ಎಂಬ ಖುಷಿ ನಮ್ಮ ಮನೆ, ಬಂಧುಗಳ ಮನೆಯಲ್ಲಿ ವಿಜೃಂಭಿಸಿತು. ಫೋನುಗಳು ರಿಂಗಣಿಸಿ ಸಂಭ್ರಮ ಪಟ್ಟವು.

ಓಹ್… ಈ ಹುಡುಗ ಯಾರೆಂದು ಹೇಳಲೇ ಇಲ್ಲವಲ್ಲ?

ಈ ಹುಡುಗನೇ ಡಾ. ಮಹಾಂತೇಶ ರಾಮಣ್ಣವರ. 2010ರ ನವೆಂಬರ್ 13ರ ಶನಿವಾರ ತನ್ನ ತಂದೆಯ ಎರಡನೇ ಪುಣ್ಯತಿಥಿಯ ದಿನ ತಂದೆಯ ದೇಹಛೇದನ ಮಾಡಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ‘ತಂದೆಯ ದೇಹಛೇದನ ಮಾಡಿದ ವಿಶ್ವದ ಮೊದಲಿಗ’ ಎಂಬ ಹೆಗ್ಗಳಿಕೆಗೆ ಪಾತ್ರನಾದ ಬೆಳಗಾವಿಯ ವೈದ್ಯ

ಹೌದು. ವೈದ್ಯಕೀಯ ಇತಿಹಾಸದಲ್ಲಿ ಬಂಧುಗಳ ದೇಹಛೇದನ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿರುವುದು ವಿಲಿಯಂ ಹಾರ್ವೆ. ಈತ ಸಹೋದರಿಯ ದೇಹಛೇದನ ಮಾಡಿದ್ದ. ಆದರೆ ಮಗನೇ ತನ್ನ ತಂದೆಯ ದೇಹಛೇದನ ಮಾಡಿದ ಉದಾಹರಣೆ ಇಲ್ಲ. ಹೀಗಾಗಿಯೇ ಬಿಬಿಸಿಯಂತಹ ವಿಶ್ವದ ಖ್ಯಾತ ಸುದ್ದಿ ಚಾನೆಲ್ ಈ ಸುದ್ದಿಯನ್ನು ಜಗತ್ತಿಗೆ ಬಿತ್ತರಿಸಲು ಬೆಳಗಾವಿಗೆ ತನ್ನ ಪ್ರತಿನಿಧಿಗಳನ್ನೂ ಕಳುಹಿಸಿತ್ತು.

ನೆನಪಿನ ಅಕ್ಷರಗಳ ಪುಟ್ಟ ಬರಹದ ಮೂಲಕವಾದರೂ ‘ನಮ್ಮ ಮನೆ ಹುಡುಗ’ನ ಈ ಸತ್ಕಾರ್ಯಕ್ಕೆ ಹಾಗೂ ಬೆಂಬಲವಾಗಿ ನಿಂತ ತಾಯಿ, ಪತ್ನಿ ಮತ್ತು ಇತರ ಕುಟುಂಬ ಸದಸ್ಯರಿಗೆ ಅಭಿನಂದನೆ ಹೇಳಬೇಕಾದ್ದು ಕರ್ತವ್ಯ ಎನ್ನಿಸಿತು. ಅದಕ್ಕಾಗಿ ಈ ಪುಟ್ಟ ಲೇಖನ.

ಈ ಬರಹದ ಜೊತೆಗೆ ಇರುವ ಚಿತ್ರಗಳನ್ನು ದಯವಿಟ್ಟು ಕ್ಲಿಕ್ಕಿಸಿ. ಡಾ. ಮಹಾಂತೇಶ ರಾಮಣ್ಣವರ ಅವರು ಬರೆದ ‘ಚಾರಿತ್ರಿಕ ದಾಖಲೆ’ಯ ವರದಿಗಳು, ಟಿವಿಗಳಲ್ಲಿ ಬಂದ ವರದಿಗಳ ವಿಡಿಯೋಗಳು, ಜೊತೆಗೆ 13 ವರ್ಷಗಳ ಹಿಂದೆ ‘ಸುಧಾ’ದಲ್ಲಿ ಪ್ರಕಟವಾಗಿದ್ದ ಅವರ ತಂದೆ ಬಿ.ಎಸ್. ರಾಮಣ್ಣವರ ಅವರ ಅಸಾಧಾರಣ ಪ್ರತಿಭೆ ಕುರಿತ ಲೇಖನವನ್ನೂ ಓದಬಹುದು.

ಕ್ಷಮಿಸಿ. ‘ಡೆಕ್ಕನ್ ಹೆರಾಲ್ಡ್’ನಲ್ಲಿ ಬಂದಿದ್ದ ಲೇಖನ ಹಳೆಯ ಪತ್ರಿಕೆಗಳ ಕಡತಗಳ ಒಳಗೆಲ್ಲೋ ಅವಿತಿದೆ..! ತತ್ ಕ್ಷಣಕ್ಕೆ ಹುಡುಕಿ ಇಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲ. ವೆಲ್ ಡನ್ ಮಹಂತೇಶ, ಅಭಿನಂದನೆಗಳು.

ನೆತ್ರಕೆರೆ ಉದಯಶಂಕರ

November 14, 2010 Posted by | Education, General Knowledge, Health, Journalism, Nenapu, News, Science, Spardha | , , , , , | Leave a comment

Ganesha came Again..!

Ganesha came Again..!

Ganesha-Festival original

Ganesha Festival came again. Inspite of  problems like price rise,  draught in some places and heavy rains in some other places, Swine Flu, Dengue Fever, Chikun Gunya etc people got ready to welcome Ganesha with all preparations. Here is an article published in Sudha Magazine in the year 2001.  Do you see any change regarding the celebration of Ganesha Festival?

Click the image to read the article”.

Nethrakere Udaya Shankara

August 23, 2009 Posted by | culture, Festival, Memory, Nenapu | , , , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ