SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಆರೇ ಕಾಲೋನಿ: ಮುಂಬೈ ಮೆಟ್ರೋ ಕಡಿದಾಗಿದೆ 2,141 ಮರ..!


07 aarey-2
ಇಷ್ಟರಲ್ಲೇ ಶುರು ತೆರವು ಜಾಗದಲ್ಲಿ ನಿರ್ಮಾಣ ಚಟುವಟಿಕೆ

ಮುಂಬೈ:  ನಗರದ ’ಹಸಿರು ಶ್ವಾಸಕೋಶ’ದಲ್ಲಿ ಹೆಚ್ಚಿನ ಮರಗಳನ್ನು ಕಡಿಯುವುದನ್ನು ಸುಪ್ರೀಂ ಕೋರ್ಟ್ ತಡೆಹಿಡಿದ ಕೆಲವೇ ಗಂಟೆಗಳ ನಂತರ, ಉತ್ತರ ಮುಂಬೈನ ಆರೇ ಕಾಲೋನಿಯಲ್ಲಿ ೨,೧೪೧ ಮರಗಳನ್ನು ಕಾರ್ ಶೆಡ್ ನಿರ್ಮಾಣಕ್ಕಾಗಿ ಈಗಾಗಲೇ ಕತ್ತರಿಸಲಾಗಿದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ (ಎಂಎಂಆರ್ ಸಿ)  2019 ಅಕ್ಟೋಬರ್ 07ರ ಸೋಮವಾರ ಪ್ರಕಟಿಸಿತು .

ಸುಪ್ರೀಂ ಕೋರ್ಟ್ ಯಾವುದೇ ಹೆಚ್ಚಿನ ನಿರ್ದೇಶನಗಳನ್ನು ನೀಡುವವರೆಗೂ ಈ ಸ್ಥಳದಲ್ಲಿ ಭವಿಷ್ಯದ ಮರ ಕಡಿಯುವಿಕೆಯನ್ನು ಕೈಗೊಳ್ಳಲಾಗುವುದಿಲ್ಲ . ಆದರೆ ಮರವನ್ನು ತೆರವುಗೊಳಿಸಿದ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು ಎಂದು ಎಂಎಂಆರ್ ಸಿ ಪ್ರಕಟಣೆ ತಿಳಿಸಿತು.

ಎಂಎಂಆರ್ ಸಿ  ಹೇಳಿಕೆಯು “ಯಥಾಸ್ಥಿತಿ (ಉಳಿಸಿಕೊಳ್ಳಬೇಕು) … ಎಂಬ ಸುಪ್ರೀಂಕೋರ್ಟ್ ಆದೇಶವು  ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ಮಾತ್ರ” ಎಂಬುದಾಗಿ ರಾಜ್ಯ ಸರ್ಕಾರವು ವ್ಯಕ್ತ ಪಡಿಸಿದ  ಅಭಿಪ್ರಾಯಕ್ಕೆ ಅನುಗುಣವಾಗಿರುವುದನ್ನು ದೃಢಪಡಿಸಿತು.

ಈದಿನದ  ವಿಚಾರಣೆಯ ಸಮಯದಲ್ಲಿ, ಮರಗಳನ್ನು ಕಡಿಯುವುದರ ವಿರುದ್ಧದ ಅರ್ಜಿಯನ್ನು ಆಲಿಸಿದ ವಿಶೇಷ ಸುಪ್ರೀಂ ಕೋರ್ಟ್ ಪೀಠವು ಆರೇ ಪ್ರದೇಶವು “ಯಾವುದೇ   ಅಭಿವೃದ್ಧಿ ರಹಿತ ವಲಯ”  ಎಂದು  ಹೇಳಿತ್ತು. ಅರ್ಜಿದಾರರು ಹೇಳಿದಂತೆ  ಪರಿಸರ ಸೂಕ್ಷ್ಮ ವಲಯವಲ್ಲ ಎಂದು ಅದು ಅಭಿಪ್ರಾಯಪಟ್ಟಿತ್ತು. ’ಯಾವುದೇ ಅಭಿವೃದ್ಧಿ ರಹಿತ  ವಲಯ’ದಲ್ಲಿ ನಿರ್ಮಾಣ ಚಟುವಟಿಕೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ.

ಮೂಲ ಯೋಜನೆ ಪ್ರಕಾರ ೨,೬೪೬ ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು.  ಆದರೆ ಈದಿನ, ಮಹಾರಾಷ್ಟ್ರ ಸರ್ಕಾರವು  “ಕತ್ತರಿಸಬೇಕಾದದ್ದನ್ನು ಈಗಾಗಲೇ ಮಾಡಲಾಗಿದೆ”,  ಈಗಾಗಲೇ ತೆರವುಗೊಳಿಸಿದ ಪ್ರದೇಶದಲ್ಲಿ ಶೆಡ್ ಅನ್ನು ನಿರ್ಮಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಆರೇ  ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಎಂಎಂಆರ್ ಸಿ ಎಲ್  ಮರಗಳನ್ನು ಕಡಿಯಲು ಪ್ರಾರಂಭಿಸಿತ್ತು ಮತ್ತು  ಪರಿಸರ ಕಾರ್ಯಕರ್ತರ  ಮತ್ತು ಸ್ಥಳೀಯ ನಿವಾಸಿಗಳ ತೀವ್ರ ವಿರೋಧದ ನಡುವೆಯೂ ಹಸಿರು ವಲಯದಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡುವ ಮುಂಬೈ ಮಹಾನಗರ ಪಾಲಿಕೆಯ ನಿರ್ಧಾರವನ್ನು ರದ್ದುಗೊಳಿಸಲು ನಿರಾಕರಿಸಿತು.

ಎಂಎಂಆರ್ ಸಿ ಎಲ್  ನಡೆಸಿದ ನಡುರಾತ್ರಿಯ  ಕಾರ್ಯಾಚರಣೆಯು ತೀವ್ರ ಕೋಪತಾಪದ ಪ್ರತಿಭಟನೆಗೆ ಕಾರಣವಾಯಿತು. ಮರಗಳನ್ನು ಕಡಿಯುವಾಗ ಪೊಲೀಸ್ ಸಿಬ್ಬಂದಿಗೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಆರೋಪದಲ್ಲಿ  ೨೯ ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು.

ಈಗಾಗಲೇ ೨೩,೮೪೬ ಮರಗಳನ್ನು ನೆಟ್ಟಿದೆ ಮತ್ತು ಹೆಚ್ಚುವರಿಯಾಗಿ ೨೫,೦೦೦ ಸಸಿಗಳನ್ನು ತನ್ನ ಹಸಿರು ಉಪಕ್ರಮಗಳ ಭಾಗವಾಗಿ ವಿತರಿಸಿದೆ ಎಂದು  ತನ್ನ ಕಾರ್ಯಾಚರಣೆಗೆ ಸಮರ್ಥನೆಯಾಗಿ ಎಂಎಂಆರ್ ಸಿಎಲ್   ಪ್ರತಿಪಾದಿಸಿದೆ.

ಕಾನೂನು ಮತ್ತು ಇತರ ಅಡೆತಡೆಗಳ ಕಾರಣದಿಂದಾಗಿ ಈಗಾಗಲೇ ೬ ತಿಂಗಳಿಗಿಂತ ಹೆಚ್ಚು ವಿಳಂಬವಾಗಿದೆ. ಆದರೂ ಗಡುವಿನ ಒಳಗಾಗಿ ಕೆಲಸವನ್ನು ಪೂರೈಸುವ ನಿರೀಕ್ಷೆ ನಮ್ಮದು’ ಎಂದು  ಎಂಎಂಆರ್ ಎಲ್  ಹೇಳಿಕೆ ತಿಳಿಸಿದೆ.

October 7, 2019 - Posted by | ಆರ್ಥಿಕ, ತಂತ್ರಜ್ಞಾನ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, environment /endangered species, Flash News, General Knowledge, Health, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Politics, Spardha, supreme court, Technology | , , , , , , , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ