SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೂಕಂಪ, ಉತ್ತರ ಭಾರತದಲ್ಲೂ ಕಂಪನ


24 6.3-Magnitude-Earthquake-Hit-POK
ಪಿಒಕೆಯಲ್ಲಿ 26 ಸಾವು, 300ಕ್ಕೂ ಹೆಚ್ಚು  ಮಂದಿಗೆ ಗಾಯ

ನವದೆಹಲಿ: ಪಾಕಿಸ್ತಾನ ಭಾರತ ಗಡಿ ಪ್ರದೇಶದಲ್ಲಿ 2019 ಸೆಪ್ಟೆಂಬರ್ 24ರ ಮಂಗಳವಾರ ಸಂಜೆ ೪.೩೧ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ ೬.೩ ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಪಾಕಿಸ್ತಾನದಲ್ಲಿ ೧೯ ಮಂದಿ ಸಾವನ್ನಪ್ಪಿ, ೩೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕ್ ಆಕ್ರಮಿಕ ಕಾಶ್ಮೀರದಿಂದ ಬಂದ ವರದಿ ತಿಳಿಸಿದೆ.

ಸುಮಾರು ೮-೧೦ ಸೆಕೆಂಡ್ ಕಾಲದ ಭೂಕಂಪದ ಪರಿಣಾಮವಾಗಿ ಭಾರತದ ರಾಜಧಾನಿ ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ (ನ್ಯಾಷನಲ್ ಕ್ಯಾಪಿಟಲ್ ರೀಜನ್- ಎನ್‌ಸಿಆರ್) ಪಂಜಾಬ್, ಹರಿಯಾಣದಲ್ಲಿ  ಭೂಮಿ ಕಂಪಿಸಿತು ಎಂದು ಭೂಕಂಪಶಾಸ್ತ್ರ ಇಲಾಖೆ ಅಧಿಕಾರಿಗಳು ಹೇಳಿದರು.

ಇಸ್ಲಾಮಾಬಾದ್, ಪೇಶಾವರ, ರಾವಲ್ಪಿಂಡಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಭೂಕಂಪ ಸಂಭವಿಸಿತು ಎಂದು ಪಾಕಿಸ್ತಾನದ ’ಡಾನ್ ನ್ಯೂಸ್’ ವರದಿ ಮಾಡಿತು.

ಭೂಕಂಪದ ಪರಿಣಾಮವಾಗಿ ಭಾರತದಲ್ಲಿ ಸಾವು ನೋವು ಸಂಭವಿಸಿರುವ ಬಗ್ಗೆ ತತ್ ಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲ. ಭೂಕಂಪನದಿಂದಾಗಿ ಭೂಮಿ ೪೦ ಕಿಮಿ ಆಳದವರೆಗೆ ಭೂಮಿ ಕಂಪಿಸಿತು. ಪ್ರಾಥಮಿಕ ವರದಿಗಳ ಪ್ರಕಾರ ಇಸ್ಲಾಮಾಬಾದಿನಲ್ಲಿ ಭೂಕಂಪನಕ್ಕೆ ಕಟ್ಟಡವೊಂದು ಕುಸಿದು ಬಿದ್ದು ಕನಿಷ್ಠ ೧೯ ಮಂದಿ ಮೃತರಾಗಿ ೩೦೦ಕ್ಕೂ ಹೆಚ್ಚು ಮಂದಿ  ಗಾಯಗೊಂಡರು ಎಂದು ವರದಿ ತಿಳಿಸಿದೆ.

ಭೂಕಂಪನದ ಕೇಂದ್ರ ಬಿಂದು ಭಾರತ-ಪಾಕಿಸ್ತಾನ ಗಡಿಗೆ ಸಮೀಪದಲ್ಲಿತ್ತು ಮತ್ತು ಭೂಕಂಪನದ ಕೇಂದ್ರ ಬಿಂದುವಿಗೆ ಅತ್ಯಂತ ಸಮೀಪದಲ್ಲಿದ್ದ ದೊಡ್ಡ ನಗರ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿನ ರಾವಲ್ಪಿಂಡಿ’ ಎಂದು  ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇದ್ರದ ಕಾರ್‍ಯಾಚರಣೆಗಳ ಮುಖ್ಯಸ್ಥ ಜೆಎಲ್ ಗೌತಮ್ ಹೇಳಿದರು.

’ನಾನು ಮಲಗಿದ್ದುದರಿಂದ ನಿಜವಾಗಿಯೂ ಭಯಂಕರ ಅನುಭವವಾಯಿತು’ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪ ಶಾಸ್ತ್ರ ಕೇಂದ್ರದ ವೆಬ್ ಸೈಟಿನಲ್ಲಿ ವ್ಯಕ್ತಿಯೊಬ್ಬರು ಬರೆದಿದ್ದಾರೆ. ಕೇಂದ್ರವು ಜನರಿಗೆ ತಮ್ಮ ಅನುಭವಗಳನ್ನು ವರದಿ ಮಾಡುವಂತೆ ವೆಬ್ ಸೈಟ್ ಸೂಚಿಸಿತ್ತು.

ಪಾಕಿಸ್ತಾನದ ಟೆಲಿವಿಷನ್ ಜಾಲಗಳು ಮೀರ್ ಪುರದಲ್ಲಿ ರಸ್ತೆಗಳು ಭೂಕಂಪದ ಪರಿಣಾಮವಾಗಿ ತೀವ್ರವಾಗಿ ಹಾನಿಗೊಂಡಿರುವ ಹಾಗೂ ವಾಹನಗಳು ಉರುಳಿ ಬಿದ್ದಿರುವ ವಿಡಿಯೋಗಳನ್ನು ಪ್ರಸಾರ ಮಾಡಿವೆ.

ಪೇಶಾವರ, ರಾವಲ್ಪಿಂಡಿ, ಲಾಹೋರ್, ಸ್ಕರಡು, ಕೊಹಟ್, ಛರ್ಸಡ್ಡ, ಕಸೌರ್, ಫೈಸಲಾಬಾದ್, ಗುಜರಾತ್, ಸಿಯಾಲ್ ಕೋಟ್, ಅಬೊಟ್ಟಾಬಾದ್, ಮನ್ಶೇರಾ, ಚಿತ್ರಾಲ್, ಮಲಕಂಡ್, ಮುಲ್ತಾನ್, ಶಾಂಗ್ಲಾ, ಒಕಾರ, ನೌಶೇರಾ, ಅಟ್ಟೋಕ್ ಮತ್ತು ಝಾಂಗ್‌ನಲ್ಲಿ ಕಂಪನದ ಅನುಭವವಾಗಿರುವ ಬಗ್ಗೆ ಟಿವಿಗಳು ವರದಿ ಮಾಡಿವೆ. ಅಮೆರಿಕ ಭೂಗರ್ಭ ಸಮೀಕ್ಷೆ (ಯುಎಸ್ ಜಿಎಸ್) ಪ್ರಕಾರ ಪಾಕ್ ಆಕ್ರಮಿತ ಕಾಶ್ಮೀರದ ಅತ್ಯಂತ ದೊಡ್ಡ ನಗರವಾಗಿರುವ ಮೀರ್‌ಪುರ ಜಿಲ್ಲೆಯ ನೂತನ ಮೀರ್‌ಪುರ ನಗರದಿಂದ ೩ ಕಿಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಎನ್ನಲಾಗಿದೆ.

೨೦೦೫ರ ಅಕ್ಟೋಬರ್ ತಿಂಗಳಲ್ಲಿ ಕಾಶ್ಮೀರದಲ್ಲಿ ರಿಕ್ಟರ್ ಮಾಪಕದಲ್ಲಿ ೭.೬ ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಭೂಕಂಪನದ ಕೇಂದ್ರ ಬಿಂದು ಕೂಡಾ ಪಾಕ್ ಆಕ್ರಮಿತ ಕಾಶ್ಮೀರದಲ್ಲೇ (ಪಿಒಕೆ) ಇತ್ತು. ಭೂಕಂಪದ ಪರಿಣಾಮವಾಗಿ ಗಡಿ ನಿಯಂತ್ರಣ ರೇಖೆಯ ಉಭಯ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು.

ಭೂಕಂಪದಲ್ಲಿ ೭೩,೦೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ೬೯,೦೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ೩೫ ಲಕ್ಷಕ್ಕೂ ಹೆಚ್ಚು ಮಂದಿ ಮನೆ ಮಾರು ಕಳೆದುಕೊಂಡು ನಿರ್ವಸಿತರಾಗಿದ್ದರು.

September 24, 2019 - Posted by | ಪಾಕಿಸ್ತಾನ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, News, Pakistan, Spardha, World | , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ