SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಒಸಾಮಾ ಪುತ್ರ ಹಮ್ಜಾ ಬಿನ್ ಲಾಡೆನ್ ಸಾವು


14 hamza-bin-laden
ಕಡೆಗೂ ದೃಢ ಪಡಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಲ್ ಖೈದಾ ಉಗ್ರ ಸಂಘಟನೆಯ ಸ್ಥಾಪಕ ಒಸಾಮಾ ಬಿನ್ ಲಾಡೆನ್‌ನ ಪುತ್ರ ಹಮ್ಜಾ ಬಿನ್ ಲಾಡೆನ್ ಆಫ್ಘಾನಿಸ್ಥಾನ- ಪಾಕಿಸ್ತಾನ ಗಡಿಯಲ್ಲಿ ನಡೆಸಲಾದ ಭಯೋತ್ಪಾದನೆ ನಿಗ್ರಹ ಕಾರ್‍ಯಾಚರಣೆಯಲಿ ಅಸು ನೀಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  2019 ಸೆಪ್ಟೆಂಬರ್ 14ರ ಶನಿವಾರ ದೃಢ ಪಡಿಸಿದರು.

ಅಲ್ ಖೈದಾ ಸಂಘಟನೆಯ ಮುಂದಿನ ನಾಯಕ ಎಂಬುದಾಗಿ ಹಮ್ಜಾ ಪರಿಗಣಿತನಾಗಿದ್ದ. ಒಸಾಮಾ ಬಿನ್ ಲಾಡೆನ್‌ನ ೨೦ ಮಕ್ಕಳ ಪೈಕಿ ೧೫ನೆಯವನಾದ ಹಮ್ಜಾ ಲಾಡೆನ್ ಒಸಾಮಾನಿಗೆ ಮೂರನೇ ಪತ್ನಿಯಿಂದ ಜನಿಸಿದ್ದ. ಈತನ ವಯಸ್ಸು ಅಂದಾಜು ೩೦ ವರ್ಷ ಎಂಬುದಾಗಿ ಹೇಳಲಾಗಿತ್ತು.

‘ಹಮ್ಜಾ ಸಾವು ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ದೊಡ್ಡ ನಷ್ಟವಾಗಿದ್ದು, ಅದು ನಾಯಕತ್ವ ಗುಣದ ಮಹತ್ವದ ವ್ಯಕ್ತಿಯಿಂದ ವಂಚಿತವಾಗಿದೆ’ ಎಂದು ಶ್ವೇತ ಭವನವು ಬಿಡುಗಡೆ ಮಾಡಿದ ಟ್ರಂಪ್ ಅವರ ಹೇಳಿಕೆ ತಿಳಿಸಿತು.

ಹಮ್ಜಾ ಶಂಕಿತ ಸಾವಿನ ಬಗ್ಗೆ ಅಮೆರಿಕದ ಮಾಧ್ಯಮಗಳು ಆಗಸ್ಟ್ ಆದಿಯಲ್ಲೇ ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದವು. ರಕ್ಷಣಾ ಕಾರ್‍ಯದರ್ಶಿ ಮಾರ್ಕ್ ಎಸ್ಪೆರ್ ಕಳೆದ ತಿಂಗಳ ಕೊನೆಗೆ ಹಮ್ಜಾ ಸಾವಿನ ಸುದ್ದಿಯನ್ನು ದೃಢ ಪಡಿಸಿದ್ದರು. ಆದರೆ ಟ್ರಂಪ್ ಮತ್ತು ಇತರ ಹಿರಿಯ ಅಧಿಕಾರಿಗಳು ಬಹಿರಂಗವಾಗಿ ಈ ಸುದ್ದಿಯನ್ನು ದೃಢ ಪಡಿಸಿರಲಿಲ್ಲ.

ಅಮೆರಿಕದ ವಿದೇಶಾಂಗ ಇಲಾಖೆಯು ೨೦೧೯ರ ಫೆಬ್ರುವರಿಯಲ್ಲಿ ಹಮ್ಜಾ ತಲೆಗೆ ೧ ಮಿಲಿಯನ್ (೧೦ ಲಕ್ಷ) ಡಾಲರ್ ಬಹುಮಾನ ಘೋಷಿಸಿತ್ತು.

September 14, 2019 - Posted by | ಪಾಕಿಸ್ತಾನ, ಭಯೋತ್ಪಾದಕ, Flash News, General Knowledge, News, Pakistan, Spardha, Terror | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ