SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ವಿಶ್ವದ ಅತಿದೊಡ್ಡ ಅರಮ್ಕೋ ತೈಲ ಸಂಸ್ಕರಣಾಗಾರದ ಮೇಲೆ ಡ್ರೋಣ್ ದಾಳಿ


This slideshow requires JavaScript.

ಸೌದಿ ಅರೇಬಿಯಾದಲ್ಲಿ ಇರಾನ್ ಬೆಂಬಲಿತ ಯೆಮಿನಿ ಬಂಡುಕೋರರ ಕೃತ್ಯ

ರಿಯಾದ್: ಸೌದಿ ಅರೇಬಿಯಾದ ಎರಡು ಅರಮ್ಕೋ ತೈಲ ನಿಕ್ಷೇಪಗಳ ಮೇಲೆ ಇರಾನ್ ಬೆಂಬಲಿತ ಯೆಮಿನಿ ಬಂಡುಕೋರರು  2019 ಸೆಪ್ಟೆಂಬರ್  14ರ ಶನಿವಾರ ಬೆಳಗ್ಗೆ ಡ್ರೋನ್ ದಾಳಿ ನಡೆಸಿದ್ದು, ವಿಶ್ವದ ಅತಿದೊಡ್ಡ ’ಅರಮ್ಕೋ’ ತೈಲ ಸಂಸ್ಕರಣಾ ಘಟಕವು ಭಾರೀ ಪ್ರಮಾಣದಲ್ಲಿ ಧಗ ಧಗನೆ ಹೊತ್ತಿಕೊಂಡು ಉರಿಯುತ್ತಿದೆ ಎಂದು ವರದಿಗಳು ತಿಳಿಸಿದವು.

ಖುರೈಸ್ ಮತ್ತು ಬುಖ್ಯಾಖ್ ತೈಲ ಘಟಕಗಳ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆದಿದ್ದು, ಯೆಮಿನಿ ಬಂಡುಕೋರರು ದಾಳಿಯ ಹೊಣೆ ಹೊತ್ತುಕೊಂಡರು.

ಕಳೆದ ಮೇ ಮತ್ತು ಆಗಸ್ಟ್ ತಿಂಗಳಲ್ಲಿ ಕೂಡಾ ಯೆಮೆನ್ ಮೂಲದ ಹೌತಿ ಬಂಡುಕೋರರು ಇದೇ ರೀತಿಯ ಡ್ರೋನ್ ದಾಳಿ ನಡೆಸಿದ್ದರು.

ಅರಮ್ಕೋ ವಿಶ್ವದ ಅತೀ ತೊಡ್ಡ ತೈಲ ಸಂಸ್ಕರಣಾ ಘಟಕವಾಗಿದ್ದು, ಸೌದಿ ಅರಮ್ಕೋ ನಡೆಸುತ್ತಿರುವ ಬುಖ್ವಾಕ್ ಮತ್ತು ಖುರೈಸ್ ತೈಲ ನಿಕ್ಷೇಪಗಳ ಸಮೀಪದಲ್ಲೇ ಈ ತೈಲ ಸಂಸ್ಕರಣಾ ಘಟಕ ಇದೆ.

ದಾಳಿಯಿಂದ ಸಾವು ನೋವುಗಳಾಗಿರುವ ಬಗ್ಗೆ ತತ್ ಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲ ಅಥವಾ ಈ ದಾಳಿಯಿಂದ ಸೌದಿ ಅರೇಬಿಯಾದ ತೈಲ ಉತ್ಪಾದನೆ ಮೇಲೆ ಎಂತಹ ದುಷ್ಪರಿಣಾಮವಾಗಿದೆ ಎಂಬುದೂ ತತ್ ಕ್ಷಣಕ್ಕೆ ಗೊತ್ತಾಗಿಲ್ಲ.

ಯೆಮೆನ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯಾ ಜೊತೆಗೆ ಸಮರ ನಡೆಸುತ್ತಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಅರಮ್ಕೋ ತೈಲ ಸಂಸ್ಕರಣಾಗಾರ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಭವಿಷ್ಯದಲ್ಳು ಇಂತಹ ದಾಳಿಗಳನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಯೆಮೆನ್ ಸೇನಾ ವಕ್ತಾರ ಯಾಹಿಯಾ ಸರೀ ಅವರು ಹೌತಿಯ ಅಲ್ ಮಸೀರಾಹ್ ಉಪಗ್ರಹ ಸುದ್ದಿ ಚಾನೆಲ್ ಮೂಲಕ ಪ್ರಸಾರವಾದ ಸಂಕ್ಷಿಪ್ತ ಭಾಷಣದಲ್ಲಿ ಬಂಡುಕೋರರ ತಂಡವು ತೈಲ ನಿಕ್ಷೇಪಗಳ ಮೇಲೆ ೧೦ ಡ್ರೋಣ್‌ಗಳ ಮೂಲಕ ಸಮನ್ವಯಿತ ದಾಳಿ ನಡೆಸಿದೆ ಎಂದು ಪ್ರತಿಪಾದಿಸಿದರು.

‘ಸೌದಿಗೆ ಇರುವ ಏಕೈಕ ಆಯ್ಕೆಯೆಂದರೆ ನಮ್ಮ ಮೇಲಿನ ದಾಳಿಯನ್ನು ಕೊನೆಗೊಳಿಸುವುದು’ ಎಂದು ಅವರು ನುಡಿದರು.

ಸೌದಿಯ ಸರ್ಕಾರಿ ಟೆಲಿವಿಷನ್ ದಟ್ಟಹೊಗೆ ಆಕಾಶದಲ್ಲಿ ವ್ಯಾಪಿಸಿದ್ದನ್ನು ಪ್ರಸಾರ ಮಾಡಿತು.

ಸೌದಿ ಅಧಿಕಾರಿಗಳು ದಾಳಿಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ.  ಸುದ್ದಿ ಸಂಸ್ಥೆಗಳ ಪ್ರಶ್ನೆಗಳಿಗೆ ಸೌದಿ ಅರಮ್ಕೋ ಯಾವುದೇ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.

ತೈಲ ಸಂಸ್ಕರಣಾ ಘಟಕವು ಬೆರಕೆ ಕಚ್ಚಾ ತೈಲವನ್ನು ಪರಿಶುದ್ಧ ಕಚ್ಚಾ ತೈಲವಾಗಿ ಸಂಸ್ಕರಿಸುತ್ತದೆ ಮತ್ತು ಬಳಿಕ ಅದನ್ನು ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರಕ್ಕೆ ರವಾನಿಸಲಾಗುತ್ತದೆ.  ತೈಲ ಸಂಸ್ಕರಣಾ ಘಟಕವು ದಿನಕ್ಕೆ ೭ ಮಿಲಿಯನ್ (೭೦ ಲಕ್ಷ) ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುತ್ತದೆ.

ಖುರೈಸ್ ತೈಲ ಕ್ಷೇತ್ರವು ದಿನಕ್ಕೆ ೧ ಮಿಲಿಯನ್ (೧೦ ಲಕ್ಷ) ಬ್ಯಾರೆಲ್‌ಗೂ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುತ್ತದೆ. ತೈಲ ಸಂಸ್ಕರಣಾ ಘಟಕದಲ್ಲಿ ೨೦ ಬಿಲಿಯನ್ ಗೂ (೨೦೦೦ ಕೋಟಿ) ಹೆಚ್ಚಿನ ತೈಲ ಬ್ಯಾರೆಲ್‌ಗಳ ದಾಸ್ತಾನು ಇತ್ತು ಎಂದು ನಂಬಲಾಗಿದೆ ಎಂದು ಅರಮ್ಕೋ ಹೇಳಿದೆ.

ಉಗ್ರಗಾಮಿಗಳು ಈ ಹಿಂದೆಯೂ ಘಟಕವನ್ನು ದಾಳಿಗೆ ಗುರಿಯಾಗಿಸಿಕೊಂಡಿದ್ದವು. ೨೦೦೬ರ ಫೆಬ್ರುವರಿಯಲ್ಲಿ ತೈಲ ಸಮುಚ್ಚಯದ ಮೇಲೆ ಅಲ್ ಖೈದಾ ಆತ್ಮಹತ್ಯಾ ದಾಳಿಕೋರರು ದಾಳಿಗೆ ವಿಫಲ ಯತ್ನ ನಡೆಸಿದ್ದರು.

ಸೌದಿ ನೇತೃತ್ವದ ಮೈತ್ರಿಕೂಟವು ೨೦೧೫ರ ಮಾರ್ಚ್ ತಿಂಗಳಿಂದ ಬಂಡುಕೋರರ ಜೊತೆಗೆ ಹೋರಾಡುತ್ತಿದೆ. ಇರಾನ್ ಬೆಂಬಲಿತ ಹೌತಿಗಳು ಯಮೆನ್ ರಾಜಧಾನಿ ಸನಾ ಮತ್ತು ಅರಬ್ ಜಗತ್ತಿನ ಅತ್ಯಂತ ಬಡದೇಶವಾದ ಯೆಮೆನ್‌ನ ಇತರ ಪ್ರದೇಶವನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ.

ಸೌದಿ-ಹೌತಿಗಳ ಸಮರವು ವಿಶ್ವದ ಅತ್ಯಂತ ಭೀಕರ ಮಾನವ ಬಿಕ್ಕಟ್ಟಾಗಿದೆ. ಹಿಂಸಾಚಾರವು ಯೆಮೆನ್‌ನ್ನು ಬರಗಾಲದ ಅಂಚಿಗೆ ತಳ್ಳಿದ್ದು, ೨೦೧೫ರಿಂದ ೯೦,೦೦೦ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

September 14, 2019 - Posted by | ಭಯೋತ್ಪಾದಕ, ವಿಶ್ವ/ ಜಗತ್ತು, Consumer Issues, Flash News, General Knowledge, News, Spardha, Terror, World | , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ