SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಹ್ಯೂಸ್ಟನ್‌ ನ ʼಹೌಡಿ ಮೋದಿ; ಕಾರ್ಯಕ್ರಮಕ್ಕೆ ಟ್ರಂಪ್‌ ಅತಿಥಿ


16 modi-trump
ವಾಷಿಂಗ್ಟನ್:‌
ಅಮೆರಿಕಾದ ಹ್ಯೂಸ್ಟನ್‌ ನಲ್ಲಿ 2019ರ ಸೆಪ್ಟೆಂಬರ್ 22ರಂದು ನಡೆಯಲಿರುವ ಬಹುನಿರೀಕ್ಷಿತ ʼಹೌಡಿ ಮೋದಿʼ ಕಾರ್ಯಕ್ರಮಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ಮಾಹಿತಿಯನ್ನು ಶ್ವೇತಭವನ ಅಧಿಕಾರಿಗಳು 2019 ಸೆಪ್ಟೆಂಬರ್ 16ರ ಸೋಮವಾರ ದೃಢಪಡಿಸಿದರು.

ಭಾರತೀಯ ಅಮೇರಿಕನ್ನರು ಆಯೋಜಿಸಿರುವ ಈಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ , ಅಮೇರಿಕದಲ್ಲಿ ನೆಲೆಸಿರುವ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕ ಮತ್ತು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಮುಖ ಸಹಭಾಗಿತ್ವದ ಮಾತುಕತೆಗೆ ಟೆಕ್ಸಾಸ್ ಮತ್ತು ಓಹಿಯೋದ ವಾಪಕೊನೆಟಾಕ್ಕೆ ಪ್ರಯಾಣಿಸಲಿದ್ದಾರೆ.

ಹ್ಯೂಸ್ಟನ್​ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸಲಿದ್ದಾರೆ”ಎಂದು ಶ್ವೇತಭವನದ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದರು.

ಹೂಸ್ಟನ್‌ನ ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ 50 ಸಾವಿರಕ್ಕೂ ಹೆಚ್ಚು ಅಮೇರಿಕನ್‌ ಭಾರತೀಯರು ನರೇಂದ್ರ ಮೋದಿಯವರ ಭಾಷಣ ಆಲಿಸಲಿದ್ದಾರೆ.

September 16, 2019 - Posted by | ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Prime Minister, Spardha, World | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ