SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಆಫ್ಘನ್ ಚುನಾವಣಾ  ಸಭೆಯಲ್ಲಿ ಸ್ಫೋಟ: ಅಧ್ಯಕ್ಷ ಅಶ್ರಫ್ ಘನಿ ಪಾರು


17 Afghan_prez- ghani
48 ಜನರ ಸಾವು,  42 ಮಂದಿಗೆ ಗಾಯ

ಕಾಬೂಲ್: ಆಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಪಾಲ್ಗೊಂಡಿದ್ದ ಚುನಾವಣಾ ಸಭೆಯೊಂದರ  ಸಮೀಪ 2019 ಸೆಪ್ಟೆಂಬರ್  17ರ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ 48ಮಂದಿ ಸಾವನ್ನಪ್ಪಿ ಇತರ 42 ಮಂದಿ ಗಾಯಗೊಂಡರು.  ಅಶ್ರಫ್ ಘನಿ ಅವರು ಘಟನೆಯಲ್ಲಿ ಗಾಯಗೊಳ್ಳದೆ ಪಾರಾಗಿದ್ದಾರೆ ಎಂದು ನಿಕಟವರ್ತಿಯೊಬ್ಬರು ತಿಳಿಸಿದರು.

ಶಂಕಿತ ಉಗ್ರಗಾಮಿ ದಾಳಿ ಸಂಭವಿಸಿದ ವೇಳೆಯಲ್ಲಿ ಕಾಬೂಲಿನ ಉತ್ತರಕ್ಕೆ ಇರುವ ಪರ್‍ವಾನ್ ಪ್ರಾಂತ್ಯದ ರಾಜಧಾನಿ ಚರಿಕರ್‌ನಲ್ಲಿ ನಡೆದಿದ್ದ ಚುನಾವಣಾ  ಸಭೆಯನ್ನು ಉದ್ದೇಶಿಸಿ ಘನಿ ಅವರು ಭಾಷಣ ಮಾಡುತ್ತಿದ್ದರು.

ಮೃತರಾದವರಲ್ಲಿ ಬಹುತೇಕ ಮಂದಿ ಮಹಿಳೆಯರು ಮತ್ತು ಮಕ್ಕಳಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆಗಳಿವೆ ಎಂದು ಪ್ರಾಂತೀಯ ಆಸ್ಪತ್ರೆಯ ಮುಖ್ಯಸ್ಥ ಅಬ್ದುಲ್ ಖಾಸಿಮ್ ಸಂಗಿನ್ ಹೇಳಿದರು.

ಆತ್ಮಹತ್ಯಾ ಬಾಂಬರ್ ಈ ದಾಳಿಯನ್ನು ನಡೆಸಿದ್ದಾನೆ ಎಂದು ಸ್ಥಳೀಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದರು.

‘ಅಧ್ಯಕ್ಷರಿಗೆ ಯಾವುದೇ ಗಾಯಗಳಾಗಿಲ್ಲ’ ಎಂದು ಘನಿ ಅವರ ನಿಕಟವರ್ತಿ ತಿಳಿಸಿದರು.

ಯಾವುದೇ ಉಗ್ರಗಾಮಿ ಗುಂಪು ಸ್ಫೋಟದ ಹೊಣೆಗಾರಿಕೆ ಹೊತ್ತಿಲ್ಲ ಎಂದು ವರದಿಗಳು ಹೇಳಿದವು.

ಕಾಬೂಲ್ ಕೇಂದ್ರದಲ್ಲಿ ಸಂಭವಿಸಿದ ಇನ್ನೊಂದು ಸ್ಫೋಟ ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು. ಅಫ್ಘನ್ ಪಡೆಗಳು ಘಟನಾ ಸ್ಥಳಕ್ಕೆ ಧಾವಿಸಿವೆ ಎಂದು ಅಧಿಕಾರಿಗಳು ನುಡಿದರು.

ಸೆಪ್ಟೆಂಬರ್ ೨೮ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಜನರು ಮತದಾನದಿಂದ ದೂರ ಉಳಿಯುವಂತೆ ಮಾಡುವ ಸಲುವಾಗಿ ಆಫ್ಘಾನಿಸ್ಥಾನದಲ್ಲಿ ಘರ್ಷಣೆಗಳನ್ನು ಹುಟ್ಟು ಹಾಕಲು ತಾಲಿಬಾನ್ ಕಮಾಂಡರ್‌ಗಳು ಮತ್ತು ವಿದೇಶೀ ಶಕ್ತಿಗಳು ಶಪಥಗೈದಿವೆ.. ಈ ಚುನಾವಣೆಯಲ್ಲಿ ಐದು ವರ್ಷಗಳ ಎರಡನೇ ಅವಧಿಗಾಗಿ ಆಶ್ರಫ್ ಘನಿ ಅವರು ಸ್ಪರ್ಧಿಸುತ್ತಿದ್ದಾರೆ.

ಚುನಾವಣಾ ಸಭೆಗಳು ಮತ್ತು ಮತದಾನ ಕೇಂದ್ರಗಳ ಮೇಲೆ ದಾಳಿ ಮಾಡುವುದಾಗಿ ತಾಲಿಬಾನ್ ಒಡ್ಡಿರುವ ಬೆದರಿಕೆಗಳನ್ನು ಅನುಸರಿಸಿ  ಸಭೆಗಳಿಗೆ  ಭದ್ರತೆಯನ್ನು ಹೆಚ್ಚಿಸಲಾಗಿದೆ.

ಅಮೆರಿಕ ಮತ್ತು ತಾಲಿಬಾನ್ ನಡುವಣ ಶಾಂತಿ ಮಾತುಕತೆ ಕಳೆದ ವಾರ ಕುಸಿದು ಬಿದ್ದಿತ್ತು. ಬಂಡುಕೋರರಿಂದ ಭದ್ರತಾ ಖಾತರಿ ಪಡೆಯುವ ಸಲುವಾಗಿ ಆಫ್ಘಾನಿಸ್ಥಾನದಲ್ಲಿ ಇರುವ ಸಹಸ್ರಾರು ಸಂಖ್ಯೆಯ ಅಮೆರಿಕನ್ ಪಡೆಗಳ ವಾಪಸಾತಿ ವಿಚಾರದಲ್ಲಿ ಒಪ್ಪಂದಕ್ಕೆ ಬರುವ ಉದ್ದೇಶದಿಂದ ಈ ಮಾತುಕತೆಗಳನ್ನು ನಡೆಸಲಾಗಿತ್ತು.

ಆಫ್ಘಾನಿಸ್ಥಾನದಲ್ಲಿನ ೪೦ಕ್ಕೂ ಹೆಚ್ಚು ವರ್ಷಗಳ ಸಮರಕ್ಕೆ ಮಂಗಳ ಹಾಡುವ ಉದ್ದೇಶದೊಂದಿಗೆ ವ್ಯಾಪಕ ಮಾತುಕತೆಗಳಿಗೆ ಪೂರ್ವಭಾವಿಯಾಗಿ ನಡೆದಿದ್ದ ಈ ಮಾತುಕತೆಗಳಲ್ಲಿ ಆಫ್ಘನ್ ಸರ್ಕಾರ ಪಾಲ್ಗೊಂಡಿರಲಿಲ್ಲ.

September 17, 2019 - Posted by | ಭಯೋತ್ಪಾದಕ, ವಿಶ್ವ/ ಜಗತ್ತು, Flash News, General Knowledge, News, Spardha, Terror, World | , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ