SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಮೆರಿಕ ಪಯಣಕ್ಕೆ ತನ್ನ ವಾಯುಪ್ರದೇಶ ಬಳಕೆ: ಪ್ರಧಾನಿ ಮೋದಿಗೆ ಪಾಕ್ ನಕಾರ


18 modi pak airspace
ನವದೆಹಲಿ:
 ಅಮೆರಿಕ ಪ್ರವಾಸಕ್ಕೆ ತನ್ನ ವಾಯುಪ್ರದೇಶವನ್ನು ಬಳಸಿಕೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನವು 2019 ಸೆಪ್ಟೆಂಬರ್ 18 ಬುಧವಾರ ಪ್ರಕಟಿಸಿತು.

ಪಾಕಿಸ್ತಾನವು ಮೋದಿ ಅವರಿಗೆ ಪಾಕಿಸ್ತಾನದ ವಾಯುಮಾರ್ಗ ಬಳಸಿಕೊಳ್ಳಲು ಅವಕಾಶ ನಿರಾಕರಿಸಿದೆ ಎದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ  ಈದಿನ  ಖಚಿತ ಪಡಿಸಿದರು.

’ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಮಾನಯಾನಕ್ಕೆ ನಮ್ಮ ಆಗಸವನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂಬುದಾಗಿ ನಾವು ಭಾರತೀಯ ಹೈಕಮೀಷನ್‌ಗೆ ತಿಳಿಸಿದ್ದೇವೆ’ ಎಂದು ಶಾ ಮೆಹಮೂದ್ ಖುರೇಶಿ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಪಾಕಿಸ್ತಾನದ ಆಕಾಶವನ್ನು ಮೋದಿ ಅವರ ವಿಮಾನಪಯಣಕ್ಕೆ ಬಳಸಲು ಅವಕಾಶ ನೀಡುವಂತೆ ಭಾರತವು ಪಾಕಿಸ್ತಾನಿ ಅಧಿಕಾರಿಗಳಿಗೆ ಔಪಚಾರಿಕ ಮನವಿ ಮಾಡಿರುವುದಾಗಿ ಪಾಕಿಸ್ತಾನಿ ಮಾಧ್ಯಮಗಳು  ಇದಕ್ಕೆ ಮುನ್ನ  ವರದಿ ಮಾಡಿದ್ದವು.

ಸೆಪ್ಟೆಂಬರ್ ೨೧-೨೭ರ ಅಮೆರಿಕ ಭೇಟಿ ಸಲುವಾಗಿ ಮೋದಿ ಅವರು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ವಿಮಾನಯಾನ ಮೂಲಕ ಹೋಗುವ ಕಾರ್‍ಯಕ್ರಮ ನಿಗದಿಯಾಗಿತ್ತು.

ಇದಕ್ಕೆ ಮುನ್ನ ಈ ತಿಂಗಳ ಆದಿಯಲ್ಲಿ ಪಾಕಿಸ್ತಾನವು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ತನ್ನ ಆಗಸದ ಮೂಲಕವಾಗಿ ಐಸ್ಲೆಂಡ್ ಅಧಿಕೃತ ಪ್ರವಾಸಕ್ಕೆ ಅನುಮತಿ ನಿರಾಕರಿಸಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಆಗಸ್ಟ್ ೫ರ ಕ್ರಮದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಣ ಪ್ರಕ್ಷುಬ್ಧತೆ ಹೆಚ್ಚಿದೆ.

ಭಾರತದ ಕ್ರಮವನ್ನು ವಿರೋಧಿಸಿ ಪಾಕಿಸ್ತಾನವು ಈಗಾಗಲೇ ತನ್ನ ರಾಜತಾಂತ್ರಿಕ ಬಾಂಧವ್ಯಗಳನ್ನು ಕಡಿದುಕೊಂಡದ್ದಲ್ಲದೆ ತನ್ನ ನೆಲದಿಂದ ಭಾರತದ ರಾಯಭಾರಿಯನ್ನು ಉಚ್ಚಾಟನೆ ಮಾಡಿದೆ.

ಜಮ್ಮು-ಕಾಶ್ಮೀರದ ನಿಷೇಧಾಜ್ಞೆಗಳು ರದ್ದಾಗುವವರೆಗೆ ಭಾರತದ ಜೊತೆ ದ್ವಿಪಕ್ಷೀಯ ಮಾತುಕತೆ ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಬೆಳಗ್ಗೆ ಹೇಳಿದ್ದರು.

September 18, 2019 - Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಮಾನ, Flash News, General Knowledge, India, Nation, News, Pakistan, Politics, Prime Minister, Space, Spardha, Terror, World | , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ