SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಏರ್ ಮಾರ್ಶಲ್ ಆರ್‌ಕೆಎಸ್ ಭದೌರಿಯಾ ಮುಂದಿನ ವಾಯುಪಡೆ ಮುಖ್ಯಸ್ಥ


19 RKS-Bhadauria-new air chief
ನವದೆಹಲಿ
: ವಾಯು ಸಿಬ್ಬಂದಿಯ ಉಪ ಮುಖ್ಯಸ್ಥ ಏರ್ ಮಾರ್ಶಲ್ ಆರ್‌ಕೆಎಸ್ ಭದೌರಿಯಾ ಅವರು ಭಾರತದ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯವು 2019 ಸೆಪ್ಟೆಂಬರ್ 19ರ ಗುರುವಾರ ಪ್ರಕಟಿಸಿತು.

ಏರ್ ಮಾರ್ಶಲ್ ಆರ್‌ಕೆಎಸ್ ಭದೌರಿಯಾ ಅವರು ಫ್ರಾನ್ಸ್ ಜೊತೆಗೆ ರಫೇಲ್ ವಿಮಾನ ವಹಿವಾಟಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದ ತಂಡದ ನೇತೃತ್ವ ವಹಿಸಿದ್ದರು. ಭದೌರಿಯಾ ಅವರು ಸೆಪ್ಟೆಂಬರ್ ೩೦ರಂದು ನಿವೃತ್ತರಾಗಲಿರುವ ಏರ್ ಚೀಫ್ ಮಾರ್ಶಲ್ ಬಿಎಸ್ ಧನೋವಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡರು.

ಭದೌರಿಯಾ ನೇಮಕಾತಿ ವಿಚಾರವನ್ನು ರಕ್ಷಣ ಸಚಿವಾಲಯದ ಮುಖ್ಯ ವಕ್ತಾರರು ಟ್ವೀಟ್ ಮಾಡಿದರು.

೧೯೮೦ರಲ್ಲಿ ವಾಯುಪಡೆಯ ಸಮರತಂಡಕ್ಕೆ ಸೇರ್ಪಡೆಯಾಗಿದ್ದ ಭದೌರಿಯಾ ಅವರು ತಮ್ಮ ಅರ್ಹತೆಗಾಗಿ ಪ್ರತಿಷ್ಠಿತ ’ಗೌರವ ಖಡ್ಗ’ (ಸ್ವೋರ್ಡ್ ಆಫ್ ಆನರ್) ಪುರಸ್ಕಾರ ಪಡೆದಿದ್ದರು.

September 19, 2019 - Posted by | ಭಾರತ, ರಾಷ್ಟ್ರೀಯ, ವಿಮಾನ, General Knowledge, India, Nation, News, Spardha |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ