SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ವಿಶ್ವಸಂಸ್ಥೆಯಲ್ಲೂ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆ


27 pm-narendra-modi-unga-speech-imran-khan-india-pakistan
ಭಯೋತ್ಪಾದನೆ, ತಾಪಮಾನ ಏರಿಕೆ ವಿರುದ್ಧ ಸಂಯುಕ್ತ ಸಮರ: ಪ್ರಧಾನಿ ಮೋದಿ ಕರೆ

ನ್ಯೂಯಾರ್ಕ್: ವಿಶ್ವಸಂಸ್ಥೆಯ ೭೪ನೇ ಮಹಾ ಅಧಿವೇಶನವನ್ನು ಉದ್ದೇಶಿಸಿ 2019 ಸೆಪ್ಟೆಂಬರ್ 27ರ ಶುಕ್ರವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆಯನ್ನು ಮೊಳಗಿಸಿ, ಭಯೋತ್ಪಾದನೆ, ಜಾಗತಿಕ ತಾಪಮಾನ ಏರಿಕೆ ವಿರುದ್ಧ ’ಸಂಯುಕ್ತ ಸಮರ’ಕ್ಕೆ ಕರೆ ನೀಡಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆಯು  ತಮ್ಮ ಸರ್ಕಾರದ ಸ್ಫೂರ್ತಿ ಮಂತ್ರವಾಗಿದ್ದು, ಭಾರತದ ಅಭಿವೃದ್ಧಿಯು ಇತರ ರಾಷ್ಟ್ರಗಳಿಗೂ ಸ್ಫೂರ್ತಿ ನೀಡಬಲ್ಲುದು’ ಎಂದು ಪ್ರಧಾನಿ ಹಿಂದಿಯಲ್ಲಿ ಮಾತನಾಡುತ್ತಾ ಹೇಳಿದರು.

ಜನರ ಪಾಲ್ಗೊಳ್ಳುವಿಕೆಯೊಂದಿಗೆ ಜನ ಕಲ್ಯಾಣವು ನಮ್ಮ ಮಂತ್ರವಾಗಿದೆ. ನೂತನ ಭಾರತವು ಜಾಗತಿಕ ಆಶಯಗಳನ್ನು ಹೊಂದಿದೆ’ ಎಂದು ಅವರು ನುಡಿದರು.

‘ನಾನು ಇಲ್ಲಿಗೆ ಬಂದಾಗ ವಿಶ್ವಸಂಸ್ಥೆಯ ಗೋಡೆಯಲ್ಲಿ ’ಪ್ಲಾಸ್ಟಿಕ್ ಬಳಕೆ ಇನ್ನಿಲ್ಲ’ ಎಂಬ ಬರಹ ಬರೆದಿರುವುದನ್ನು ಓದಿದೆ. ಭಾರತವು ಬಳಸಿ ಬಿಸಾಡುವಂತಹ (ಏಕ ಬಳಕೆಯ) ಪ್ಲಾಸ್ಟಿಕ್‌ನಿಂದ ರಾಷ್ಟ್ರವನ್ನು ಮುಕ್ತಗೊಳಿಸಲು ಬೃಹತ್ ಪ್ರಚಾರಾಭಿಯಾನವನ್ನು ನಡೆಸುತ್ತಿದೆ ಎಂದು ನಿಮಗೆ ತಿಳಿಸಲು ನನಗೆ ಸಂತಸವಾಗುತ್ತಿದೆ’ ಎಂದು ಪ್ರಧಾನಿ  ಭಾರೀ ಕರತಾಡನದ ಮಧ್ಯೆ ಹೇಳಿದರು.

‘ವಿಶ್ವದ ಅತಿದೊಡ್ಡ ಸ್ವಚ್ಛತಾ ಕಾರ್ಯಕ್ರಮವನ್ನು ಭಾರತವು ಕೇವಲ ೫ ತಿಂಗಳಲ್ಲಿ ಪೂರ್ಣಗೊಳಿಸಿದೆ ಮತ್ತು ರಾಷ್ಟ್ರದಲ್ಲಿ ೧೧ ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ’ ಎಂದು ಮೋದಿ ವಿವರಿಸಿದರು.

ತಮ್ಮ ಸರ್ಕಾರದ ’ಆಯುಷ್ಮಾನ್ ಭಾರತ’ ಯೋಜನೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ’ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೊಂದು ಯಶಸ್ವಿಯಾಗಿ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಿ, ೫೦೦ ಮಿಲಿಯನ್ (೫೦೦ ಕೋಟಿ) ಜನರಿಗೆ ವರ್ಷಕ್ಕೆ ೫ ಲಕ್ಷ ರೂಪಾಯಿಗಳವರೆಗಿನ ಉಚಿತ ಚಿಕಿತ್ಸೆಗಾಗಿ ಆರೋಗ್ಯ ರಕ್ಷೆಯ ಸವಲತ್ತನ್ನು ಒದಗಿಸಿರುವಾಗ ಈ ಯೋಜನೆಯ  ಸಾಧನೆಗಳು ಮತ್ತು ಸ್ಪಂದನ ವ್ಯವಸ್ಥೆಗಳು  ಜಗತ್ತಿಗೆ ಹೊಸ ದಾರಿಯನ್ನು ತೋರಿಸಬಲ್ಲವು’ ಎಂದು ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಿಸಲಾದ ’ಆಯುಷ್ಮಾನ್ ಭಾರತ’ ಯೋಜನೆಯು ೧೦ ಕೋಟಿಗೂ ಹೆಚ್ಚಿನ ಅತ್ಯಂದ ದುರ್ಬಲ ಕುಟುಂಬಗಳಿಗೆ ಅಥವಾ ಅಂದಾಜು ೫೦ ಕೋಟಿ ಜನರಿಗೆ ವೈದ್ಯಕೀಯ ಸವಲತ್ತನ್ನು ಒದಗಿಸುವ ಗುರಿ ಹೊಂದಿದೆ. ಯೋಜನೆಯ ಅಡಿಯಲ್ಲಿ ಫಲಾನುಭವಿ ಕುಟುಂಬಕ್ಕೆ ವರ್ಷಕ್ಕೆ ೫ ಲಕ್ಷ ರೂಪಾಯಿಗಳ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.

ಭಯೋತ್ಪಾದನೆಯ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವು ಒಟ್ಟಾಗಿ ನಿಲ್ಲಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಪ್ರಧಾನಿ ಮೋದಿ, ವಿಶ್ವದ ಅತ್ಯಂತ ದೊಡ್ಡ ಸವಾಲುಗಳಲ್ಲಿ ಒಂದಾಗಿರುವ ಭಯೋತ್ಪಾದನೆಯನ್ನು ಯಾವುದೇ ಒಂದು ರಾಷ್ಟ್ರ ಏಕಾಂಗಿಯಾಗಿ ಎದುರಿಸುವುದು ಕಷ್ಟ ಎಂದು ಹೇಳಿದರು.

ಭಯೋತ್ಪಾದನೆಯ ವಿಷಯದಲ್ಲಿ ಸದಸ್ಯ ರಾಷ್ಟ್ರಗಳಲ್ಲಿ ಸಹಮತ ಇಲ್ಲ ಎಂದು ಟೀಕಿಸಿದ ಪ್ರಧಾನಿ ಇದು ವಿಶ್ವಸಂಸ್ಥೆ ಸೃಷ್ಟಿಯ ಅಡಿಗಟ್ಟಿನ ತತ್ವಗಳನ್ನೇ ಮೂಲೆಪಾಲು ಮಾಡುತ್ತದೆ ಎಂದು ಹೇಳಿದರು. ’ಇದು ಒಂದು ರಾಷ್ಟ್ರಕ್ಕೆ ಅಲ್ಲ, ಇಡೀ ವಿಶ್ವಕ್ಕೆ ಮತ್ತು ಮಾನವತೆಗೆ ಅತ್ಯಂದ ದೊಡ್ಡ ಸವಾಲುಗಳಲ್ಲಿ ಒಂದು ಎಂದು ನಾವು ನಂಬಿದ್ದೇವೆ’ ಎಂದು ಪ್ರಧಾನಿ ನುಡಿದರು.

ಭಾರತವು ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ ತನ್ನ ಕಾಣಿಕೆಯನ್ನು ನೀಡಿದೆ. ನಾವು ಅಧಿಕಾರಯುತವಾಗಿ ಭಯೋತ್ಪಾದನೆಯ ವಿರುದ್ಧ ಜಗತ್ತಿಗೆ ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ಮೋದಿ ನುಡಿದರು.

ಜಾಗತಿಕ ತಾಪಮಾನ ಏರಿಕೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಜಾಗತಿಕ ತಾಪಮಾನ ಏರಿಕೆಯಿಂದ ಹಲವಾರು ಭೀಕರ ನೈಸರ್ಗಿಕ ದುರಂತಗಳು ಸಂಭವಿಸುತ್ತಿವೆ ಎಂದು ಹೇಳಿದರು.

ಹಸಿರುಮನೆ ಅನಿಲ ಹಾವಳಿಗೆ ತನ್ನ ಕಾಣಿಕೆಯನ್ನು ಅತ್ಯಂತ ಅಲ್ಪ ಪ್ರಮಾಣದಲ್ಲಿ ನೀಡುತ್ತಿದ್ದರೂ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುತ್ತಿರುವ ಮುಂಚೂಣಿಯ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ ಎಂದು ಹೇಳಿದ ಮೋದಿ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕಾಗಿ ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

’ಒಂದಡೆಯಲ್ಲಿ ನಾವು ೪೫೦ ಗಿಗಾವ್ಯಾಟ್‌ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿಸಾಧನೆಗೆ ಯತ್ನಿಸುತ್ತಿದ್ದೇವೆ, ಮತ್ತೊಂದೆಡಯಲ್ಲಿ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ರಚನೆಯ ಉಪಕ್ರಮಕ್ಕೆ ಕೈಹಾಕಿದ್ದೇವೆ ಎಂದು ಅವರು ಹೇಳಿದರು.

ಮುಂಬರುವ ೫ ವರ್ಷಗಳಲ್ಲಿ ನಾವು೧೫ ಕೋಟಿ ಜನರನ್ನು ನಿರಂತರ ನೀರು ಸರಬರಾಜು ವ್ಯವಸ್ಥೆಗೆ ಜೋಡಿಸಲಿದ್ದೆವೆ. ೧.೧೫ ಲಕ್ಷ ಕಿಮೀ ಹೆಚ್ಚುವರಿ ರಸ್ತೆಗಳನ್ನು ನಿರ್ಮಿಸಲಿದ್ದೇವೆ. ೨೦೨೨ರಲ್ಲಿ ಭಾರತವು ಸ್ವಾತಂತ್ರ್ಯದ ೭೫ ವರ್ಷಗಳನ್ನು ಪೂರ್ಣಗೊಳಿಸಲಿದ್ದು, ಆ ವೇಳಗೆ ಬಡವರಿಗಾಗಿ ನಾವು ೨ ಕೋಟಿ ಮನೆಗಳನ್ನು ನಿರ್ಮಿಸಲಿದ್ದೇವೆ. ೨೦೨೫ರ ವೇಳೆಗೆ ಭಾರತವನ್ನ ಕ್ಷಯಮುಕ್ತ ರಾಷ್ಟ್ರವನ್ನಾಗಿ ಮಾಡಲು ಕೂಡಾ ನಾವು ಉದ್ದೇಶಿಸಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದರು.

ತಮ್ಮ ಭಾಷಣದಲ್ಲಿ ತಮಿಳು ತತ್ವಜ್ಞಾನಿ ಕಣಿಯನ್ ಪುಂಗುಂದ್ರನಾರ್ ಮತ್ತು ಸ್ವಾಮಿ ವಿವೇಕಾನಂದ ಅವರ ಮಾತುಗಳನ್ನು ಉಲ್ಲೇಖಿಸಿದ ಪ್ರಧಾನಿ ’ಛಿದ್ರ ಜಗತ್ತು ಯಾರಿಗೂ ಒಳ್ಳೆಯದಲ್ಲ’ ಎಂದು ಹೇಳಿದರು. ಆಧುನಿಕ ತಂತ್ರಜ್ಞಾನವು ಬದುಕಿನ ಪ್ರತಿಯೊಂದು ಕ್ಷೇತ್ರದಲ್ಲೂ ಅಗಾಧ ಬದಲಾವಣೆಗಳನ್ನು ತರುತ್ತಿದೆ ಎಂದು ನುಡಿದರು. ಅಂತಾರಾಷ್ಟ್ರೀಯ ಸಮುದಾಯವು ಬಹುರಾಷ್ಟ್ರೀಯತೆಗೆ ಹೊಸ ದಿಕ್ಕು ನೀಡಬೇಕು ಎಂದು ಅವರು ಒತ್ತಿ ಹೇಳಿದರು.

ಜಗತ್ತು ಹೊಸ ಯುಗದತ್ತ ಸಾಗುತ್ತಿದೆ. ರಾಷ್ಟ್ರಗಳು ತಮ್ಮ ಗಡಿಗಳ ಒಳಗೆ ಮಾತ್ರ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳಬಾರದು ಎಂದು ಮೋದಿ ಹೇಳಿದರು.

ಎಲೋನ್ ಮಸ್ಕ್ ಮತ್ತು ಜ್ಯಾಕ್ ಮಾ ರಂತಹ ತಾಂತ್ರಿಕ ಕೋಟ್ಯಧೀಶರು ಕೃತಕ ಬುದ್ಧಿ ಮತ್ತೆಗೆ ಒತ್ತು ನೀಡಿದ ಸಂದರ್ಭದಲ್ಲಿ ಈ ಮಾತು ಹೇಳಿದ ಪ್ರಧಾನಿ, ಆಧುನಿಕ ತಂತ್ರಜ್ಞಾನವು ಜನರ ಬದುಕಿನ ಮಾರ್ಗವನ್ನು ಅನಿವಾರ್‍ಯವಾಗಿ ಹಿಂದೆಂದೂ ಕಾಣದಂತೆ ಬದಲಿಸಲಿದೆ ಎಂದು ಎಚ್ಚರಿಸಿದರು.

ತಮ್ಮ ಭಾಷಣದಲ್ಲಿ ಪ್ರಧಾನಿ ಭಯೋತ್ಪಾದನೆಯ ವಿರುದ್ಧ ಪ್ರಸ್ತಾಪಿಸಿದರೂ. ಪರೋಕ್ಷವಾಗಿ ಕೂಡಾ ಪಾಕಿಸ್ತಾನವನ್ನು ಪ್ರಸ್ತಾಪಿಸಲಿಲ್ಲ.

September 27, 2019 - Posted by | ನರೇಂದ್ರ ಮೋದಿ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸೌರ ವ್ಯವಸ್ಥೆ, Flash News, General Knowledge, Health, India, Nation, News, Prime Minister, Spardha, Terror, Water Conservation, World | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ