SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮಹಾಭಾರತದ ‘ದ್ರೌಪದಿ’ ಆಗಲಿದ್ದಾರೆ ದೀಪಿಕಾ ಪಡುಕೋಣೆ..!

25 deepika-padukone spardha web1ಇದು ದ್ರೌಪದಿ ದೃಷ್ಟಿಕೋನದ ‘ಮಹಾಭಾರತ’

ಮುಂಬೈ: ದ್ರೌಪದಿಯ ದೃಷ್ಟಿಕೋನದಿಂದ ‘ಮಹಾಭಾರತ’ ನಿರ್ಮಾಣವಾಗಲಿದ್ದು, ನಟಿ ದೀಪಿಕಾ ಪಡುಕೋಣೆ ಕೇಂದ್ರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ನಿರ್ಮಾಪಕ ಮಧು ಮಂತೇನಾ ಅವರೊಂದಿಗೆ ಕೈಜೋಡಿಸಿದ್ದಾರೆ ಮತ್ತು ಚಿತ್ರವನ್ನು ಸಹ ನಿರ್ಮಿಸಲಿದ್ದಾರೆ.

ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ಜೀವನದಿಂದ ಪ್ರೇರಿತವಾದ “ಛಪಾಕ್” ಚಿತ್ರದೊಂದಿಗೆ ದೀಪಿಕಾ ನಿರ್ಮಾಪಕರಾಗಿದ್ದಾರೆ. ಅವರ ಎರಡನೆಯ ನಿರ್ಮಾಣವಾದ “ಮಹಾಭಾರತ” ದ್ರೌಪದಿಯ ಕಣ್ಣುಗಳ ಮೂಲಕ ಕಾಣಿಸಲಿದ್ದು, ಇದು ಪೌರಾಣಿಕ ಕಥೆಯನ್ನು ಹೊಸದಾಗಿ ತೆರೆಯಲಿದೆ.

“ದ್ರೌಪದಿಯ ಪಾತ್ರವನ್ನು ವಹಿಸುವುದಕ್ಕಾಗಿ ನಾನು ರೋಮಾಂಚನಗೊಂಡಿದ್ದೇನೆ ಮತ್ತು ಗೌರವಿಸಲ್ಪಟ್ಟಿದ್ದೇನೆ. ನಿಜವಾಗಿಯೂ  ಇದು ಜೀವಮಾನದ ಪಾತ್ರ ಎಂದು ನಾನು ನಂಬುತ್ತೇನೆ. ‘ಮಹಾಭಾರತ’ ಪೌರಾಣಿಕ ಕಥೆಗಳು ಮತ್ತು ಸಾಂಸ್ಕೃತಿಕ ಪ್ರಭಾವದ ಹಿನ್ನೆಲೆಯಲ್ಲಿ  ಜನಪ್ರಿಯವಾಗಿದೆ, ಜೀವನದ ಅನೇಕ ಪಾಠಗಳು ಸಹ ‘ಮಹಾಭಾರತ’ದಿಂದ ಹುಟ್ಟಿಕೊಂಡಿವೆ, ಆದರೆ ಅವೆಲ್ಲವೂ ಹೆಚ್ಚಾಗಿ ಅದರ ಪುರುಷರಿಂದ ಹುಟ್ಟಿಕೊಂಡವುಗಳು. ಈ ಪಾತ್ರವನ್ನು ಹೊಸ ದೃಷ್ಟಿಕೋನದಿಂದ ಹೇಳುವುದು ಆಸಕ್ತಿದಾಯಕವಷ್ಟೇ ಅಲ್ಲ ಮಹತ್ವ ಪೂರ್ಣ ಕೂಡಾ”ಎಂದು ದೀಪಿಕಾ ಹೇಳಿದ್ದಾರೆ.

‘ಮಹಾಭಾರತ’ವನ್ನು ಸರಣಿಗಳಾಗಿ ನಿರ್ಮಿಸಲಾಗುವುದು.  ಮೊದಲನೆಯದು 2021ರ ದೀಪಾವಳಿ ವೇಳೆಗೆ  ಬಿಡುಗಡೆಯಾಗಲಿದೆ.

‘ಮಹಾಭಾರತ ನಮಗೆಲ್ಲರಿಗೂ ಗೊತ್ತು. ಆದರೆ ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ನಾಯಕಿಯರಲ್ಲಿ ಒಬ್ಬರಾದ ದ್ರೌಪದಿಯ ದೃಷ್ಟಿಕೋನದಿಂದ ‘ಮಹಾಭಾರತ’ವನ್ನು ನಿರೂಪಿಸುವುದು  ನಮ್ಮ ಚಿತ್ರದ ಅನನ್ಯತೆಯಾಗಿದೆ’ ಎಂದು ಮಾಂಟೆನಾ ಹೇಳುತ್ತಾರೆ.

‘ಜೊತೆಗೆ ದೀಪಿಕಾ ಅವರು ಇಂದು ಅತಿದೊಡ್ಡ ಭಾರತೀಯ ನಟಿ ಮಾತ್ರವಲ್ಲ, ಆದರೆ ಈ ನಿರೂಪಣೆಯನ್ನು ಗಡಿಯಾಚೆಗೂ ಒಯ್ಯಬಲ್ಲವರು. ಅವರು ಅಲ್ಲದೇ ಇದ್ದಿದ್ದರೆ,  ನಾವು ಈ ಚಿತ್ರವನ್ನು ಅಂತಹ ಮಹತ್ವಾಕಾಂಕ್ಷೆಯ ಪ್ರಮಾಣದಲ್ಲಿ ನಿರ್ಮಿಸುತ್ತಿರಲಿಲ್ಲ’ ಎಂದೂ ಮಾಂಟೆನಾ  ಹೇಳಿದರು.

October 25, 2019 Posted by | ಕರ್ನಾಟಕ, ಭಾರತ, ಮನರಂಜನೆ, ರಾಜ್ಯ, ಸಿನಿಮಾ, culture, Entertrainment, Flash News, General Knowledge, India, Nation, News, Spardha | , , | Leave a comment

ಅಮಿತಾಭ್ ಬಚ್ಚನ್ ಮುಡಿಗೆ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಗರಿ

24 amitabh bachchan
ನವದೆಹಲಿ
: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನದ ಸಾಧನೆಗಾಗಿ ಕೇಂದ್ರ ಸರ್ಕಾರವು ಕೊಡುವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಈ ಬಾರಿ ಬಾಲಿವುಡ್ ಚಿತ್ರರಂಗದ ಬಿಗ್ ಬಿ ಅಮಿತಾಭ್ ಬಚ್ಚನ್ ಆಯ್ಕೆಯಾದರು.

ಬಚ್ಚನ್  ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಬಗ್ಗೆ  2019 ಸೆಪ್ಟೆಂಬರ್  24ರ ಮಂಗಳವಾರ ಟ್ವೀಟ್ ಮಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, “ಎರಡು ತಲೆಮಾರುಗಳನ್ನು ರಂಜಿಸಿದ ಮತ್ತು ಸ್ಫೂರ್ತಿಯ ಸೆಲೆ, ಬೆಳ್ಳಿಪರದೆಯ ದಂತಕಥೆ ಅಮಿತಾಭ್ ಬಚ್ಚನ್ ಅವರು ಅವಿರೋಧವಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಡೀ ದೇಶ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ಇದು ಖುಷಿ ಕೊಡುವ ಸಂಗತಿ. ಅಮಿತಾಭ್ ಜಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದರು.

ಸಿನಿಮಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ಭಾರತೀಯ ಸಿನಿಮಾ ರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಲ್ಲಿ ಭಾರತ ಸರ್ಕಾರವು 1969ರಿಂದ ಪ್ರಶಸ್ತಿ ನೀಡುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

ಪ್ರಶಸ್ತಿಯು ಸ್ವರ್ಣ ಕಮಲ ಪದಕ, ಶಾಲು ಹಾಗೂ 10 ಲಕ್ಷ ರೂ.ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ನಟಿ ದೇವಿಕಾ ರಾಣಿ ಅವರಿಗೆ 1969ರಲ್ಲಿ 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೊತ್ತ ಮೊದಲ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ವಿಶೇಷ ಎಂದರೆ ಇದೇ ವರ್ಷ ಅಮಿತಾಭ್ ಚೊಚ್ಚಲ ಸಿನಿಮಾ ಮೃಣಾಲ್ ಸೇನ್‍‍ರ ‘ಭುವನ್ ಶೋಮ್‌’ನಲ್ಲಿ ನಿರೂಪಕರಾಗಿ ಪರಿಚಿತರಾಗಿದ್ದರು. ಬಳಿಕ ತಮ್ಮ ವಿಶಿಷ್ಟ ಧ್ವನಿ ಹಾಗೂ ಅತ್ಯದ್ಭುತ ಡೈಲಾಗ್ ಡೆಲಿವರಿ ಮೂಲಕ ಅಪಾರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಸಂಪಾದಿಸಿದರು ಅಮಿತಾಭ್.

ಎಪ್ಪತ್ತರ ದಶಕದಲ್ಲಿ ಝಂಜೀರ್, ದೀವಾರ್ ಮತ್ತು ಶೋಲೆಯಂತಹ ಚಿತ್ರಗಳಲ್ಲಿನ ಅಮೋಘ ಅಭಿನಯದ ಮೂಲಕ ಆ್ಯಂಗ್ರಿ ಯಂಗ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದವರು ಅಮಿತಾಭ್.

ಐದು ದಶಕಗಳ ತಮ್ಮ ವೃತ್ತಿ ಬದುಕಿನಲ್ಲಿ ಮರೆಯಲಾಗದ, ಅಚ್ಚಳಿಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ  ಅವರು ನಾಲ್ಕು ಸಲ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು.

ಭಾರತೀಯ ಚಿತ್ರರಂಗದ ದಿಗ್ಗಜರಾದ ವರನಟ ಡಾ.ರಾಜ್ ಕುಮಾರ್, ವಿನೋದ್ ಖನ್ನಾ, ಮನೋಜ್ ಕುಮಾರ್, ಶಶಿ ಕಪೂರ್, ಗುಲ್ಜಾರ್, ಸೌಮಿತ್ರ ಚಟರ್ಜಿ, ಕೆ ಬಾಲಚಂದರ್, ಡಿ ರಾಮಾನಾಯ್ಡು, ಮನ್ನಾ ಡೇ, ಶ್ಯಾಮ್ ಬೆನಗಲ್, ಆಡೂರ್ ಗೋಪಾಲಕೃಷ್ಣನ್, ಮೃಣಾಲ್ ಸೇನ್, ಯಶ್ ಚೋಪ್ರಾ, ಆಶಾ ಭೋಸ್ಲೆ, ಬಿ.ಆರ್ ಚೋಪ್ರಾ, ಸೇರಿದಂತೆ ಮುಂತಾದ ಹಲವಾರು ದಿಗ್ಗಜರು ಈ ಗೌರವಕ್ಕೆ ಪಾತ್ರರಾಗಿದ್ದರು.

ದಾದಾಸಾಹೇಬ್ ಫಾಲ್ಕೆ ಗೌರವಕ್ಕೆ ಪಾತ್ರರಾಗಿರುವ ಅಮಿತಾಭ್ ಬಚ್ಚನ್‌‍ರನ್ನು ಬಾಲಿವುಡ್ ಸೆಲೆಬ್ರಿಟಿಗಳಾದ ಕರಣ್ ಜೋಹಾರ್, ಅನಿಲ್ ಕಪೂರ್ ಟ್ವಿಟರ್‌‌ನಲ್ಲಿ ಅಭಿನಂದಿಸಿದರು.

ಕಳೆದ ವರ್ಷ 65ನೇ ರಾಷ್ಟ್ರೀಯ ಪ್ರಶಸ್ತಿ ಸಂದರ್ಭದಲ್ಲಿ ನಟ ವಿನೋದ್ ಖನ್ನಾ ಅವರಿಗೆ ಮರಣೋತ್ತರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅಮಿತಾಭ್ ಬಚ್ಚನ್ ಇದುವರೆಗೆ ತಮ್ಮ ವೃತ್ತಿ ಬದುಕಿನಲ್ಲಿ ನಾಲ್ಕು ಬಾರಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2015ರಲ್ಲಿ ತೆರೆಕಂಡ ‘ಪಿಕು’ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಕೊನೆಯದಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ದಕ್ಕಿತ್ತು.

ಸದ್ಯಕ್ಕೆ ಅಭಿತಾಭ್ ಅವರು ಕಿರುತೆರೆಯ ಜನಪ್ರಿಯ ಗೇಮ್ ಶೋ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 11 ನಿರೂಪಕರಾಗಿದ್ದಾರೆ. ಜೊತೆಗೆ ಬದ್ಲಾ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

September 24, 2019 Posted by | Award, ಭಾರತ, ರಾಷ್ಟ್ರೀಯ, ವಿಮಾನ, Cinema, Education, Flash News, General Knowledge, India, Nation, Spardha | , , , , , , , , | Leave a comment

ಫಾರ್ಚೂನ್‌ ಇಂಡಿಯಾ ಅತಿ ಪ್ರಭಾವಿ ಮಹಿಳೆಯರ ಪಟ್ಟಿಗೆ ಅನುಷ್ಕಾ ಶರ್ಮ

22 Anushka-Sharma
ನವದೆಹಲಿ
: ನಿಯತಕಾಲಿಕೆ ಫಾರ್ಚೂನ್‌ ಇಂಡಿಯಾ ತಯಾರಿಸಿರುವ “2019ನೇ ಸಾಲಿನ ಭಾರತದ 50 ಅತಿ ಪ್ರಭಾವಿ ಮಹಿಳೆಯರ ಪಟ್ಟಿ’ಯಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮ (31) ಸ್ಥಾನ ಪಡೆದರು.

ತಮ್ಮ 25ನೇ ವಯಸ್ಸಿನಲ್ಲೇ ಕ್ಲೀನ್‌ ಸ್ಲೇಟ್‌ ಫಿಲ್ಮ್ಸ್ ಎಂಬ ಸಂಸ್ಥೆ ಹುಟ್ಟುಹಾಕಿದ್ದ ಅನುಷ್ಕಾ, ಈವರೆಗೆ ಅದರಿಂದ ಮೂರು ಪುಟ್ಟ ಬಜೆಟ್‌ನ ಚಿತ್ರಗಳನ್ನು ತಯಾರಿಸಿದ್ದಾರೆ. ನೆಟ್‌ಫ್ಲಿಕ್ಸ್‌ ಜತೆಗೆ ಒಪ್ಪಂದ ಮಾಡಿಕೊಂಡು ಟೆಲಿ ಚಲನಚಿತ್ರ, ವೆಬ್‌ಸರಣಿಗಳನ್ನು ನಿರ್ಮಿಸಿದ್ದಾರೆ.

“ನಶ್‌’ ಎಂಬ ತಮ್ಮದೇ ಆದ ಸಿದ್ಧ ಉಡುಪು ತಯಾರಿಕಾ ಸಂಸ್ಥೆಯನ್ನು ಸ್ಥಾಪಿಸಿರುವ ಅವರು, ಮೈಂತ್ರಾ, ಲ್ಯಾವಿ, ನಿವಿಯಾ ಹಾಗೂ ಎಲ್‌ 18ನಂಥ ಪ್ರತಿಷ್ಠಿತ ಕಂಪನಿಗಳ ಪ್ರಚಾರ ರಾಯಭಾರಿಯೂ ಆಗಿದ್ದಾರೆ.

ಹೀಗೆ, ವಾಣಿಜ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿರುವುದರ ಜತೆಗೆ, ಸಾಂಸ್ಕೃತಿಕ ಪ್ರತಿನಿಧಿಯಂತೆ ಜನರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನೂ ಗಳಿಸಿರುವ ಕಾರಣಕ್ಕಾಗಿ ಅನುಷ್ಕಾರನ್ನು ಈ ಪಟ್ಟಿಗೆ ಆಯ್ಕೆ ಮಾಡಲಾಗಿದೆ ಎಂದು ಫಾರ್ಚೂನ್‌ ಇಂಡಿಯಾ ಹೇಳಿತು.

September 22, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Cinema, Consumer Issues, Finance, Flash News, General Knowledge, India, Nation, News, Spardha, World | , , | Leave a comment

ಬಾಲಿವುಡ್‌ ನಟಿ ಆಲಿಯಾ ಭಟ್‌ ಮುಡಿಗೆ ‘ಐಫಾ‘ ಪ್ರಶಸ್ತಿ

19 alia-bhatt-
ನವದೆಹಲಿ
: 20ನೇ ಸಾಲಿನ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ; ‘ಐಫಾ’) ಪ್ರಶಸ್ತಿಗಳನ್ನು 2019 ಸೆಪ್ಟೆಂಬರ್ 19ರ ಗುರುವಾರ ನೀಡಲಾಗಿದ್ದು ಆಲಿಯಾ ಭಟ್‌ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು..

ನಟ ವಿಕ್ಕಿ ಕೌಶಲ್‌ ಹಾಗು ಆಲಿಯಾ ಭಟ್‌ ಅಭಿನಯದ ರಾಝಿ ಸಿನಿಮಾ ಉತ್ತಮ ಚಿತ್ರ ಪಶಸ್ತಿ ಪಡೆದುಕೊಂಡಿತು.

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಬಾಲಿವುಡ್‌ ನಟ ಜಗದೀಪ್‌ ಜೆಫ್ರಿ ಅವರಿಗೆ ಜೀವಮಾನ ಶ್ರೇಷ್ಠ ಪಶಸ್ತಿ ನೀಡಿ ಗೌರವಿಸಲಾಯಿತು.

ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಾಲಿವುಡ್‌ ಚಿತ್ರರಂಗದ ಸಾಧಕರಿಗೆ ಐಫಾ ಪ್ರಶಸ್ತಿಗಳನ್ನು ನೀಡ ಗೌರವಿಸಲಾಯಿತು. ಆಲಿಯಾ ಭಟ್‌, ರಣವೀರ್ ಸಿಂಗ್‌, ಅದಿತಿ ರಾವ್‌ ಹೈದರಿ, ಸಾರಾ ಆಲಿ ಖಾನ್‌ ಐಫಾ ಪ್ರಶಸ್ತಿಗಳನ್ನು ಪಡೆದ ಪ್ರಮುಖರು. ಈ ಸಮಾರಂಭದಲ್ಲಿ ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಮಾಧುರಿ ದೀಕ್ಷಿತ್‌, ಪ್ರೀತಿ ಜಿಂಟಾ, ರಿತೇಶ್‌ ದೇಶ್‌ಮುಖ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

ಐಫಾ ಪ್ರಶಸ್ತಿ ಪಡೆದವರ ವಿವರ

* ಅತ್ಯುತ್ತಮ ಚಿತ್ರ: ರಾಝಿ

* ಅತ್ಯುತ್ತಮ ಕಥೆ: ಅಂಧಾಧುನಾ

* ಅತ್ಯುತ್ತಮ ನಟಿ: ಆಲಿಯಾ ಭಟ್‌ (ರಾಝಿ)

*ಅತ್ಯುತ್ತಮ ನಟ: ರಣವೀರ್‌ ಸಿಂಗ್‌ (ಪದ್ಮಾವತಿ)

*ಅತ್ಯುತ್ತಮ ನಿರ್ದೇಶಕ: ಶ್ರೀರಾಮ್‌ ರಾಘವನ್‌ (ಅಂಧಾಧುನಾ)

*ಅತ್ಯುತ್ತಮ ಪೋಷಕ ನಟಿ: ಅದಿತಿ ರಾವ್‌ ( ಪದ್ಮಾವತಿ)

*ಅತ್ಯುತ್ತಮ ಪೋಷಕ ನಟ: ವಿಕ್ಕಿ ಕೌಶಲ್‌ (ಸಂಜು)

* ಪಾದರ್ಪಣೆಯ ಉತ್ತಮ ನಟಿ: ಸಾರಾ ಆಲಿ ಖಾನ್‌

* ಪಾದರ್ಪಣೆಯ ಉತ್ತಮ ನಟ: ಇಶಾನ್ ಖಟ್ಟೆರ್‌

* ಅತ್ಯುತ್ತಮ ಗೀತ ರಚನೆ: ಅಮಿತಾಬ್‌ ಬಚನ್‌ (ದಡಕ್‌)

* ಜೀವಮಾನ ಶ್ರೇಷ್ಠ ಪ್ರಶಸ್ತಿ: ಜಗದೀಪ್‌ ಜಫ್ರಿ

September 19, 2019 Posted by | ಭಾರತ, Cinema, Entertrainment, Flash News, General Knowledge, India, Nation, News, Spardha | , , | Leave a comment

ಕನ್ನಡದ ಹಿರಿಯ ನಟಿ ಪದ್ಮಾದೇವಿ ನಿಧನ

19 Padmadevi_in_Kisan_Kanyaಬೆಂಗಳೂರು: ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ `ಭಕ್ತಧ್ರುವ’ (1934)ದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಎಸ್. ಕೆ. ಪದ್ಮಾದೇವಿ 2019 ಸೆಪ್ಟೆಂಬರ್ 19ರ ಗುರುವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

‘ಸಂಸಾರನೌಕೆ’ (1936) ಪದ್ಮಾದೇವಿಗೆ ಹೆಸರು ತಂದು ಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಿದ್ದರು. ಒಂದು ಹಾಡನ್ನು ಸ್ವತಃ ಇವರೇ ವೀಣೆ ನುಡಿಸಿಕೊಂಡು ಹಾಡಿದ್ದು ವಿಶೇಷ.

‘ವಸಂತಸೇನ’, ‘ಭಕ್ತ ಸುಧಾಮ’, ‘ಜಾತಕ ಫಲ’ ಚಿತ್ರಗಳಲ್ಲಿಯೂ ನಟಿಸಿದರು. ‘ಭಕ್ತಸುಧಾಮ’ದಲ್ಲಿ ಮಧುಗಿರಿ ಮೀನಾಕ್ಷಿ ಎಂದು ಹೆಸರು ಬದಲಾಯಿಸಿಕೊಂಡರು. ಎರಡು ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.

‘ಮುಕ್ತಿ’, ‘ಅಮರ ಮಧುರ ಪ್ರೇಮ’, ‘ಸಂಕ್ರಾಂತಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆಕಾಶವಾಣಿಯಲ್ಲಿ ಅನೇಕ ವರ್ಷಗಳು ಕೆಲಸ ಮಾಡಿದ ಪದ್ಮಾದೇವಿಯವರು ಆ ಮಾಧ್ಯಮದಲ್ಲಿ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದರು.

ಮೂಲತಹ ಬೆಂಗಳೂರಿನವರಾದ ಪದ್ಮಾದೇವಿ ಅವರು ಬಳ್ಳಾರಿ ರಾಘವಾಚಾರ್ಯರ ಮೂಲಕ ರಂಗಭೂಮಿ ಪ್ರವೇಶಿಸಿದವರು. ಹೆಚ್.ಎಲ್.ಎನ್.ಸಿಂಹ ಅವರ ನಾಟಕ ಕಂಪೆನಿಯಲ್ಲಿ ನಟಿಯಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ಸ್ವಂತ ನಾಟಕ ಸಂಸ್ಥೆಯನ್ನು ಕಟ್ಟಿದರು. ಸಿನಿಮಾ ಕ್ಷೇತ್ರಕ್ಕಿಂತ ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದರು.

ಪದ್ಮಾದೇವಿ ಅವರ ಮೊಮ್ಮಗ ಸಿಂಗಪುರದಲ್ಲಿ ನೆಲೆಸಿದ್ದು, ಅವರು ಬಂದ ಬಳಿಕ ಅಂತ್ಯಕ್ರಿಯೆ ನಡೆಸಲು ಕುಟುಂಬದ ಸದಸ್ಯರು ತೀರ್ಮಾನಿಸಿದ್ದಾರೆ. ಬುಧವಾರ ರಾತ್ರಿಯಷ್ಟೇ ಪದ್ಮಾದೇವಿ ವಿಡಿಯೊ ಕಾಲ್‌ನಲ್ಲಿ ಮೊಮ್ಮಗನೊಂದಿಗೆ ಮಾತನಾಡಿದ್ದರು.

September 19, 2019 Posted by | ಕರ್ನಾಟಕ, ರಾಜ್ಯ, Cinema, Entertrainment, Flash News, General Knowledge, News, Spardha | , | Leave a comment

ಕಾಂಗ್ರೆಸ್‌ಗೆ  ಉರ್ಮಿಳಾ ಮಾತೋಂಡ್ಕರ್ ಗುಡ್ ಬೈ

10 Urmila-Matondkar.jpg1ಮುಂಬೈ: ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಪಕ್ಷದ ಜೊತೆಗಿನ ತಮ್ಮ ತನ್ನ ಅಲ್ಪ ಕಾಲದ ಸಖ್ಯಕ್ಕೆ 2019 ಸೆಪ್ಟೆಂಬರ್ 10ರ ಮಂಗಳವಾರ ವಿದಾಯ ಹೇಳಿದರು.

ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಸೇರಿದ್ದ ಉರ್ಮಿಳಾ, ಐದು ತಿಂಗಳ ಕಾಂಗ್ರೆಸ್ ರಾಜಕಾರಣದ ನಂತರ ಹೊರನಡೆದರು.

ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉರ್ಮಿಳಾ ಮಾತೋಂಡ್ಕರ್  ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಭಾರಿ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.

ಪಕ್ಷದ ಒಳ ರಾಜಕೀಯದಿಂದ ಸಂಪೂರ್ಣ ನಿರಾಶಳಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉರ್ಮಿಳಾ ಮಾತೋಂಡ್ಕರ್ ಹೇಳಿದರು.

ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಕ್ಷದಲ್ಲಿನ ಆಂತರಿಕ ರಾಜಕೀಯಕ್ಕೆ ಬೇಸತ್ತು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಆಂತರಿಕ ರಾಜಕೀಯದ ಬಗ್ಗೆ ಮೇ ೧೬ರಂದು ಮುಂಬೈ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ ದೇವರಾ ಅವರಿಗೆ ಪತ್ರ ಬರೆದ ಉರ್ಮಿಳಾ ಅವರು, ಪಕ್ಷದಲ್ಲಿ ತಮ್ಮನ್ನು ಕಡೆಗಡಿಣಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

೪೫ರ ಹರೆಯದ  ಈ ನಟಿ, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉತ್ತರ ಮುಂಬೈಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಪಕ್ಷದಲ್ಲಿನ ದ್ರೋಹದ ಬಗ್ಗೆ ಕೂಡ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಧ್ವನಿ ಎತ್ತಿದ್ದರು.

ತಮ್ಮ ಗೌರವ ಹಾಗೂ ಗೌಪ್ಯ ಸಂವಹನಗಳು ಮಾಧ್ಯಮದಲ್ಲಿ ಸೋರಿಕೆಯಾಗಿದೆ.  ದ್ರೋಹದ ಕಾರ್ಯ ನಡೆಯುತ್ತಿದೆ ಎಂದ್ಮುವರು ಉಲ್ಲೇಖಿಸಿದ್ದರು.

’ನನ್ನ ರಾಜಕೀಯ ಮತ್ತು ಸಾಮಾಜಿಕ ಸೂಕ್ಷ್ಮತೆಗಳನ್ನು ಪಕ್ಷದ ಆಂತರಿಕ ರಾಜಕೀಯದ ವಿರುದ್ಧ ಹೋರಾಡಲು ಸಾಧನವಾಗಿ ಬಳಸಿಕೊಳ್ಳಲು ಇಷ್ಟವಿಲ್ಲ. ಮುಂಬೈ ಜನರಿಗಾಗಿ ನನ್ನ ಕೆಲಸ ಮುಂದುವರೆಯಲಿದೆ ಎಂದು ತಿಳಿಸಿದರು.

’ನನ್ನ ಪ್ರತಿಭಟನೆಗಳ ಹೊರತಾಗಿಯೂ, ಪಕ್ಷವು ನನ್ನ ಬಗೆಗೆ ಕಾಳಜಿ ವಹಿಸಲಿಲ್ಲ. ನಾನು ಅಧ್ಯಕ್ಷರಿಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಲಾಗಿದ್ದ ನನ್ನ ಸೋಲಿಗೆ ಕಾರಣರಾಗಿದ್ದ ಕೆಲವು ವ್ಯಕ್ತಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬದಲಿಗೆ ಹೊಸ ಹುದ್ದೆಗಳನ್ನು ನೀಡಲಾಯಿತು’ ಎಂದು ಉರ್ಮಿಳಾ ಹೇಳಿದರು.

ಕಳೆದ ಮೇ ತಿಂಗಳ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಇವರು ಕಾಂಗ್ರೆಸ್ ಸೇರಿದ್ದರು.

September 10, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, Nation, News, Politics, Spardha | , , , | Leave a comment

‘ಸ್ನೇಹ ಸಂಪತ್ತು’ ಬಿಡುಗಡೆಯಾಯಿತು..

‘ಸ್ನೇಹ ಸಂಪತ್ತು’ ಬಿಡುಗಡೆಯಾಯಿತು..

‘ಸ್ನೇಹದ ತಿರುಳು’ ಹಿಡಿದಿಟ್ಟಿರುವ ಈ ಪುಸ್ತಕದ ಹೆಸರು ‘ಸ್ನೇಹ ಸಂಪತ್ತು.’  9 ಮೇ 2010ರ ಭಾನುವಾರ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜಿನ ‘ಗಾಂಧಿ ನೆಹರೂ ರಂಗಮಂದಿರದಲ್ಲಿ ಚಿತ್ರನಟಿ ಭಾರತಿ ವಿಷ್ಣು ವರ್ಧನ್ ಅವರು ಈ ಪುಸ್ತಕವನ್ನು ಬಿಡುಗಡೆ ಮಾಡಿದಾಗ ಅಲ್ಲಿ ಧ್ವನಿವರ್ಧಕದಲ್ಲಿ ಮೊಳಗಿದ ಸಂಗೀತ ಬಿಟ್ಟಿರೆ ಇದ್ದುದು ನೀರವ ಮೌನ.

ಲೇಖಕ ಎಂ. ನರಸಿಂಹ ಮೂರ್ತಿ ಅವರು ವಿಷ್ಣು ಗೆಳೆಯರ ಬಳಗವನ್ನು ಸಂಪರ್ಕಿಸಿ ಅವರು ಹೇಳಿದ ಅನುಭವಗಳ ಆಧಾರದಲ್ಲಿ ರಚಿಸಿದ ಈ ಕೃತಿ ಕನ್ನಡದ ಖ್ಯಾತ ನಟ ದಿವಂಗತ ವಿಷ್ಣು ವರ್ಧನ್ ಅವರ ವೈಯಕ್ತಿಕ ಬದುಕಿನ ಹಲವಾರು ಮುಖಗಳನ್ನು ತೆರೆದಿಡುತ್ತದೆ. ಕೆಲ ತಿಂಗಳುಗಳ ಹಿಂದೆ ಅಗಲಿದ ವಿಷ್ಣು ವರ್ಧನ್ ಅವರ ವೈಯಕ್ತಿಕ ಜೀವನದ ಬಗ್ಗೆ ಬಂದ ಬಹುಶಃ ಮೊದಲ ಪುಸ್ತಕ ಇದು.

ಸಭಾಂಗಣದಲ್ಲಿ ನೆರೆದಿದ್ದ ಸಂಪತ್ ಕುಮಾರ ಯಾನೆ ವಿಷ್ಣು ವರ್ಧನ್ ಗೆಳೆಯರ ಬಳಗ, ಅಭಿಮಾನಿಗಳ ಬಳಗ ಸಮಾರಂಭದ ಬಳಿಕ ಭಾರತಿ ವಿಷ್ಣು ವರ್ಧನ್ ಅವರಿಂದ ಪುಸ್ತಕದಲ್ಲಿ ‘ಆಟೋಗ್ರಾಫ್’ ಪಡೆದುಕೊಂಡು ಈ ಸಮಾರಂಭದ ನೆನಪಿನ ಕ್ಷಣವನ್ನು ತಮ್ಮ ತಮ್ಮ ಪುಸ್ತಕಗಳಲ್ಲಿಯೇ ಭದ್ರ ಪಡಿಸಿಕೊಂಡರು.

ಭಾರತಿ ವಿಷ್ಣು ವರ್ಧನ್ ಮತ್ತು ಚಿತ್ರನಟ ಸುಂದರರಾಜ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ವಿಷ್ಣು ವರ್ಧನ್ ಅವರೊಂದಿಗೆ ಇದ್ದ ಹಲವಾರು ಗೆಳೆಯರು, ಗೆಳತಿಯರು, ಚಿತ್ರ ನಟ, ನಟಿಯರು ತಮ್ಮ ಪ್ರೀತಿ,ಅನುಭವಗಳನ್ನು ಈ ಕೃತಿಯೊಳಗೆ ದಾಖಲಿಸುವ ಮೂಲಕ  ನಿಜಕ್ಕೂ ಸ್ನೇಹ ಸಾರ್ಥಕ್ಯ ಮೆರೆದಿದ್ದಾರೆ. ಅವರ ನೆನಪು, ನಿಮ್ಮೆಲ್ಲರ ಸ್ನೇಹ ಸಂಪತ್ತು ಚಿರಾಯುವಾಗಿರಲಿ’ ಎಂದು ಹಾರೈಸಿದರು.

ವಿಷ್ಣು ವರ್ಧನ್ ಕನ್ನಡ ಚಿತ್ರರಂಗದಲ್ಲೇ ಅತ್ಯಂತ ಸುಂದರ, ಆಕರ್ಷಕ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಸಂತಸ, ದುಃಖ ಪ್ರತಿಯೊಂದನ್ನೂ ಹಂಚಿಕೊಳ್ಳಬಯಸುತ್ತಿದ್ದ ಅವರು ‘ಸ್ನೇಹಲೋಕ’ವನ್ನು ನಿರ್ಮಿಸಿದ್ದರು’ ಎಂದು ನೆನಪು ಮಾಡಿಕೊಂಡರು ಸುಂದರರಾಜ್.

ದೂರದರ್ಶನ ಕೇಂದ್ರದ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಶಿ, ನಟ ಕೂದವಳ್ಳಿ ಚಂದ್ರಶೇಖರ್, ಖ್ಯಾತ ಇತಿಹಾಸ ತಜ್ಞ ನಂಜರಾಜ ಅರಸು, ಕೃತಿಯ ಲೇಖಕ ಎಂ.ನರಸಿಂಹಮೂರ್ತಿ, ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ಲೀಲಾವತಿ, ಸಂಸ್ಥೆಯ ಗೌರವ ಅಧ್ಯಕ್ಷ ಆನಂದ್ ಇನ್ನಿತರರು ಉಪಸ್ಥಿತರಿದ್ದರು.

ನ್ಯಾಷನಲ್ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಗಿರಿನಗರದ ಮಾಧ್ಯಮ ಕ್ರಿಯೇಷನ್ಸ್  ಜಂಟಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.

May 10, 2010 Posted by | Book World, Entertrainment, News, Spardha, Uncategorized | , , , | Leave a comment

ಸಾಹಸ ಸಿಂಹನ ‘ಸ್ನೇಹ ಸಂಪತ್ತು..’!

ಸಾಹಸ ಸಿಂಹನ ‘ಸ್ನೇಹ ಸಂಪತ್ತು..’!

ಇಷ್ಟೆಲ್ಲ ಪೀಠಿಕೆ ಯಾರ ಬಗೆಗೆ ಅಂದರೆ ‘ಸಂಪತ್ ಕುಮಾರ್’ ಬಗ್ಗೆ. ಹಾಗಂದು ಬಿಟ್ಟರೆ ಯಾರೋ ಏನೋ ಅಂದುಕೊಳ್ಳುವ ಮಂದಿ ಬಹಳ. ಅಲ್ಲಲ್ಲ, ಈ ಪೀಠಿಕೆ ‘ಸಾಹಸ ಸಿಂಹ’ ಬಗ್ಗೆ ಅಂತ ಹೇಳಿದರೆ ಹಲವರ ಕಿವಿ ನೆಟ್ಟಗಾಗುತ್ತದೆ! ಇದು ವಿಷ್ಣು ವರ್ಧನ್ ಬಗ್ಗೆ ಅಂತ ಅರ್ಥವಾಗಿ ಬಿಡುತ್ತದೆ.

ನೆತ್ರಕೆರೆ ಉದಯಶಂಕರ

ಸ್ಫುರದ್ರೂಪಿ. ಎಂತಹವರನ್ನೂ ಆಕರ್ಷಿಸುವ ವ್ಯಕ್ತಿತ್ವ. ಅದಕ್ಕೆ ತಕ್ಕಂತೆಯೇ ಮಹಾ ತುಂಟ. ಜೊತೆಗಿದ್ದವರೊಂದಿಗೆ ಚೇಷ್ಟೆ. ಅಷ್ಟೇ ಸ್ನೇಹಮಯ ಒಡನಾಟ, ಕಲಾವಿದರನ್ನು ಕಂಡರ ಅಪ್ಪಟ ಅಭಿಮಾನ. ಕಷ್ಟದಲ್ಲಿ ಇದ್ದವರನ್ನು ಕಂಡರೆ ಎಡಗೈಗೆ ಗೊತ್ತಾಗದಂತೆ ಬಲಗೈಯಿಂದ ದಾನ ಮಾಡುವ ಕಾಳಜಿ.

ಇಷ್ಟೆಲ್ಲ ಪೀಠಿಕೆ ಯಾರ ಬಗೆಗೆ ಅಂದರೆ ‘ಸಂಪತ್ ಕುಮಾರ್’ ಬಗ್ಗೆ. ಹಾಗಂದು ಬಿಟ್ಟರೆ ಯಾರೋ ಏನೋ ಅಂದುಕೊಳ್ಳುವ ಮಂದಿ ಬಹಳ. ಅಲ್ಲಲ್ಲ, ಈ ಪೀಠಿಕೆ ‘ಸಾಹಸ ಸಿಂಹ’ ಬಗ್ಗೆ ಅಂತ ಹೇಳಿದರೆ ಹಲವರ ಕಿವಿ ನೆಟ್ಟಗಾಗುತ್ತದೆ! ಇದು ವಿಷ್ಣು ವರ್ಧನ್ ಬಗ್ಗೆ ಅಂತ ಅರ್ಥವಾಗಿ ಬಿಡುತ್ತದೆ.

ಹೌದು. ಬೆಳ್ಳಿ ಪರದೆಯ ಮೇಲೆ ಮೂಡಿ ಬಂದು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿರುವ ವಿಷ್ಣುವರ್ಧನ್ ಬಗ್ಗೆ ಎಲ್ಲರಿಗೂ ಗೊತ್ತು ಆದರೆ ವಿಷ್ಣು ವರ್ಧನ್ ಅವರ ವೈಯಕ್ತಿಕ ಬದುಕಿನ ಬಗ್ಗೆ?

ವಿಷ್ಣು ಅವರ ವೈಯಕ್ತಿಕ ಬದುಕಿನ ಬಗ್ಗೆ ಬಹುಶಃ ಇದೇ ಮೊತ್ತ ಮೊದಲ ಬಾರಿಗೆ ಕೃತಿಯೊಂದು ಬಿಡುಗಡೆಯಾಗುತ್ತಿದೆ. ಈ ಪುಸ್ತಕದ ಹೆಸರೇ ‘ಸ್ನೇಹ ಸಂಪತ್ತು’.

ಪರಿಸರ ಕಾಳಜಿಯ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಸಂಬಂಧಪಟ್ಟಂತೆ ಹಲವಾರು ಸಾಕ್ಷ್ಯ ಚಿತ್ರಗಳನ್ನು ತಯಾರಿಸಿದ, ಕರ್ನಾಟಕದ ಕುಸ್ತಿ ಪಟುಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಒಂದಲ್ಲ ಮೂರು ಪುಸ್ತಕಗಳನ್ನು ರೋಚಕವಾಗಿ ಬರೆದ ಎಂ. ನರಸಿಂಹ ಮೂರ್ತಿ ಈ ಬಾರಿ ‘ಸಾಹಸ ಸಿಂಹ’ನ ವೈಯಕ್ತಿಕ ಬದುಕಿಗೆ ಕೈಹಾಕಿದ್ದಾರೆ. ಈ ಬಗ್ಗೆ ಅಧ್ಯಯನ ಮಾಡಿ ಓದುಗರ ಎದುರು ಮುಂದಿಡುವ ಪ್ರಯತ್ನ ಮಾಡಿದ್ದಾರೆ.

ಡಾ. ರಾಜ್ ಕುಮಾರ್ ಅವರ ಬಳಿಕ ಕನ್ನಡದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿ ೨೦೦ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮುಂದೆ ‘ವೀರಾಧಿವೀರ’, ‘ಸಾಹಸ ಸಿಂಹ’ ‘ಯಜಮಾನ’  ಎಂಬಿತ್ಯಾದಿ ಹಲವಾರು ‘ರೂಪ’ ಧರಿಸಿ ಸ್ಮೃತಿ ಪಟಲದಲ್ಲಿ ಉಳಿದಿರುವ ಸಂಪತ್ ಕುಮಾರ್ ಯಾನೆ ವಿಷ್ಣು ವರ್ಧನ್ ಅವರ ವೈಯಕ್ತಿಕ ಬದುಕು ಕೂಡಾ ಸಿನಿಮಾದಷ್ಟೇ ಹೇಗೆ ರೋಚಕವಾಗಿತ್ತು ಎಂಬುದನ್ನು ಚಿತ್ರಿಸುವ ಯತ್ನವನ್ನು ‘ಸ್ನೇಹ ಸಂಪತ್ತು’ ಮಾಡಿದೆ ಎನ್ನುತ್ತಾರೆ ನರಸಿಂಹ ಮೂರ್ತಿ.

ವಿಷ್ಣು ವರ್ಧನ್ ಅವರ ಕಾಲೇಜು ದಿನಗಳು, ಕಾಲೇಜು ಪರಿಸರ, ಎಲ್ಲರೊಂದಿಗೆ ಬೆರೆಯುವ ಅವರ ವ್ಯಕ್ತಿತ್ವ, ಅವರು ಸಿನಿಮಾ ರಂಗಕ್ಕೆ ಬಂದ ೭೦ರ ದಶಕದಲ್ಲಿ ಕನ್ನಡ ಚಿತ್ರರಂಗದ ಸ್ಥಿತಿಗತಿ, ಆ ಸಂದರ್ಭದಲ್ಲಿ ಬಂದ ‘ನಾಗರ ಹಾವು’ ಸಿನಿಮಾದ ವಿಶೇಷತೆ, ಇದರಲ್ಲಿನ ವಿಷ್ಣು ನಟನೆ ಇವುಗಳ ಬಗೆಗೆಲ್ಲ ಪುಸ್ತಕ ಕೈಯಾಡಿಸಿದೆ.

ನಟನೆಯ ಹೊರತಾಗಿ ವಿಷ್ಣು ಬದುಕು ಹೇಗಿತ್ತು? ಸ್ನೇಹಿತರ ಜೊತೆಗೆ ಸ್ನೇಹ ಜೀವಿ ಆಗಿದ್ದುದು ಹೇಗೆ?, ಮಾನವೀಯತೆಯ ಜೊತೆಗೇ ತಮ್ಮ ಚೇಷ್ಟೆ, ಆತ್ಮೀಯ ಒಡನಾಟಗಳಿಂದ ಎಲ್ಲರನ್ನೂ ಸೆಳೆಯುತ್ತಿದ್ದುದು ಹೇಗೆ ಎಂಬುದರ ಬಗ್ಗೆ ಒಂದೆಡೆಯಾದರೆ, ಅವರ ವಿಚಾರ ಮಂಥನ, ಅವರ ವಿಚಾರಗಳ ವ್ಯಾಪಕತೆ ಎಷ್ಟಿತ್ತು ಎಂಬ ವಿಷಯಗಳನ್ನು ಇನ್ನೊಂದೆಡೆ ನೈಜ ಅರ್ಥದಲ್ಲಿ ದೃಶ್ಯೀಕರಿಸಲು ‘ಕಡ್ಡಿ ಪೈಲ್ವಾನ’ ನರಸಿಂಹಮೂರ್ತಿ ಯತ್ನಿಸಿದ್ದಾರೆ.

ಕೃತಿ ಬಿಡುಗಡೆ: ನ್ಯಾಷನಲ್ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ, ಬಸವನಗುಡಿ ಮತ್ತು ಮಾಧ್ಯಮ ಕ್ರಿಯೇಷನ್ಸ್ ಗಿರಿನಗರ ಸಹಯೋಗದಲ್ಲಿ, ಬಸವನಗುಡಿಯ ನ್ಯಾಷನಲ್ ಪದವಿ ಕಾಲೇಜು ಗಾಂಧಿ ನೆಹರು ರಂಗಮಂದಿರದಲ್ಲಿ ಮೇ ೯ರ ಭಾನುವಾರ ಸಂಜೆ ೬ ಗಂಟೆಗೆ ನಡೆಯುವ ಸಮಾರಂಭದಲ್ಲಿ ಶ್ರೀಮತಿ ಭಾರತಿ ವಿಷ್ಣು ವರ್ಧನ್ ಈ ಕೃತಿಯನ್ನು ಲೋಕಾರ್ಪಣೆ ಮಾಡುವರು.

ಸಮಾರಂಭದ ಅಧ್ಯಕ್ಷತೆ: ಡಿ.ಎನ್. ಆನಂದ, ನ್ಯಾಷನಲ್ ಎಜುಕೇಷನ್ ಸೊಸೈಟಿ ಕರ್ನಾಟಕ ಇದರ ಪ್ರಭಾರ ಅಧ್ಯಕ್ಷರು. ಮುಖ್ಯ ಅತಿಥಿಗಳು: ಲೋಕಸಭಾ ಸದಸ್ಯ ಅನಂತ್ ಕುಮಾರ್, ದೂರ ದರ್ಶನ ಕೇಂದ್ರ ಬೆಂಗಳೂರು ಹಿರಿಯ ನಿರ್ದೇಶಕ ಡಾ. ಮಹೇಶ ಜೋಶಿ, ಎಂ.ಕೆ. ಸುಂದರ ರಾಜ್, ಕೂಡವಳ್ಳಿ ಚಂದ್ರಶೇಖರ್.

May 8, 2010 Posted by | Book World, culture, Entertrainment, News, Spardha, Uncategorized | , , , | 2 Comments

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ