SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

೨೦೧೦ರಿಂದೀಚೆಗೆ ಕನಿಷ್ಠ ಮಟ್ಟಕ್ಕೆ ರೆಪೋದರ, ಜಿಡಿಪಿ ಗುರಿಯೂ ಇಳಿಕೆ

04 RBI-shanktikant das
ಆರ್ಥಿಕತೆಗೆ  ಬಲ  ತುಂಬಲು  ರಿಸರ್ವ್  ಬ್ಯಾಂಕ್  ಕ್ರಮ

ಮುಂಬೈ:  ಕುಂಠಿತಗೊಂಡಿರುವ ಭಾರತದ ಆರ್ಥಿಕತೆಗೆ ಬಲ ತುಂಬಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2019 ಅಕ್ಟೋಬರ್ 4ರ ಶುಕ್ರವಾರ ಈ ವರ್ಷದಲ್ಲಿ ಸತತ ಐದನೇ ಬಾರಿಗೆ ಬ್ಯಾಂಕ್ ಬಡ್ಡಿದರಗಳನ್ನು ಇಳಿಸುವುದರ ಜೊತೆಗೆ ೨೦೧೯-೨೦ರ  ಹಣಕಾಸು ವರ್ಷದ ಸಮಗ್ರ ಆಂತರಿಕ ಉತ್ಪನ್ನ (ಜಿಡಿಪಿ) ಗುರಿಯನ್ನು ಶೇಕಡಾ ೬.೯ರಿಂದ ಶೇಕಡಾ ೬.೧ಕ್ಕೆ ಇಳಿಸಿತು.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ೬ ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೋ ದರವನ್ನು ೨೫ ಮೂಲ ಆಂಶಗಳಷ್ಟು ಅಂದರೆ ಶೇಕಡಾ ೫.೧೫ಕ್ಕೆ ಇಳಿಸುವ ಸರ್ವಾನುಮತದ ತೀರ್ಮಾನ ಕೈಗೊಂಡಿತು. ರಿವರ್ಸ್ ರೆಪೋ ದರವನ್ನು ಶೇಕಡಾ ೪.೯ಕ್ಕೆ ಇಳಿಸಲಾಯಿತು.

ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು ಬಡ್ಡಿ ದರಗಳನ್ನು ಇಳಿಸಿದ್ದು ಇದು ಸತತ ೫ನೇ ಸಲವಾಗಿದ್ದು, ಇದು ಆರ್‌ಬಿಐ ಪ್ರಸ್ತುತ ವರ್ಷಕ್ಕಾಗಿ ಈವರೆಗೆ ಪ್ರಕಟಿಸಿರುವ ೧೧೦ ಸಂಚಿತ ಅಥವಾ ಒಟ್ಟುಗೂಡಿದ (ಕ್ಯುಮುಲೇಟಿವ್) ಮೂಲ ಅಂಶಗಳಿಗೆ ಹೊಸ ಸೇರ್ಪಡೆಯಾಗಿದೆ. ಪರಿಣಾಮವಾಗಿ ರೆಪೋ ದರವು ಈಗ ೨೦೧೦ರ ಮಾರ್ಚ್‌ನಿಂದೀಚೆಗೆ ಅತ್ಯಂತ ಕನಿಷ್ಠ ಪ್ರಮಾಣಕ್ಕೆ ಇಳಿಯಿತು.

ಹಣದುಬ್ಬರ ನಿರೀಕ್ಷೆಗಳ ಹಿನ್ನೆಲೆಯಲ್ಲಿ ನಿರೀಕ್ಷಿಸಿದ್ದಂತೆಯೇ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಇಳಿಸಿದೆ. ಕುಂಟುತ್ತಿರವ ಆರ್ಥಿಕತೆಗೆ ಮರುಚೇತನ ನೀಡುವ ಸಲುವಾಗಿ ನೀತಿ ನಿರೂಪಕರು ಒತ್ತು ನೀಡಬಹುದು ಎಂಬ ನಿರೀಕ್ಷೆಯ ಮಧ್ಯೆ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಬೆಳವಣಿಗೆಗೆ ಪುನಶ್ಚೇತನ ಸಾಧ್ಯವಾವುಗುದರ ಜೊತೆಗೆ ಹಣದುಬ್ಬರವು ಮಿತಿಯ ಒಳಗೆ ಉಳಿಯಲು ಎಷ್ಟು ಸಮಯ ಬೇಕಾಗುತ್ತದೋ ಅಷ್ಟು ಸಮಯದವರೆಗೂ ಇಂತಹ ನಿಲುವನ್ನು ಮುಂದುವರೆಸುವುದಾಗಿ ಹಣಕಾಸು ನೀತಿ ಸಮಿತಿಯು ಹೇಳಿತು.

ತನ್ನ ಹಿಂದಿನ ಸಭೆಯಲ್ಲಿ ಹಣಕಾಸು ನೀತಿ ಸಮಿತಿಯು, ಬೇಡಿಕೆಗೆ ಒತ್ತು ಸಿಗುವಂತೆ ಮಾಡಲು ಮಾನದಂಡ ಸಾಲದರವನ್ನು (ರೆಪೋ ದರ)  ೩೫ ಮೂಲ ಅಂಶದಷ್ಟು ಅಂದರೆ ಶೇಕಡಾ ೫.೪೦ರಷ್ಟಕ್ಕೆ ಏರಿಸಿತ್ತು. ಆದರೆ ಈ ಕ್ರಮಗಳು ಈವರೆಗೂ ಉದ್ದೇಶಿತ ಪರಿಣಾಮವನ್ನು ಬೀರುವಲ್ಲಿ ವಿಫಲವಾಗಿದ್ದವು.

ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲಿ, ಆರು ವರ್ಷದಲ್ಲೇ ಅತ್ಯಂತ ಕೆಳಮಟ್ಕಕ್ಕೆ ಅಂದರೆ ಶೇಕಡಾ ೫ಕ್ಕೆ ಸಮಗ್ರ ಆಂತರಿಕ ಉತ್ಪನ್ನ (ಜಿಡಿಪಿ) ಇಳಿದ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಕೂಡಾ ಕಾರ್ಪೋರೇಟ್ ತೆರಿಗೆ ಕಡಿತ, ವಿದೇಶೀ ಹೂಡಿಕೆದಾರರ ಮೇಲೆ ವಿಧಿಸಲಾದ ಹೆಚ್ವುವರಿ ಮೇಲ್ತೆರಿಗೆ (ಸರ್ಚಾರ್ಜ್) ರದ್ದು ಸೇರಿದಂತೆ ಸರಣಿ ಕ್ರಮಗಳನ್ನು ಪ್ರಕಟಿಸಿತ್ತು.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ನಿರೀಕ್ಷೆಗಿಂತ ತುಂಬಾ ಕೆಳಕ್ಕೆ ಅಂದರೆ ಶೇಕಡಾ ೫ ಇಳಿದಿರುವುದು ತಮಗೆ ಅಚ್ಚರಿ ಉಂಟು ಮಾಡಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದರು. ’ನಾವು ಶೇಕಡಾ ೫.೮ ಜಿಡಿಪಿ ಗುರಿ ಇಟ್ಟುಕೊಂಡಿದ್ದೆವು ಮತ್ತು ಪ್ರತಿಯೊಬ್ಬರು ಜಿಡಿಪಿಯು ಶೇಕಡಾ ೫.೫ಕ್ಕಿಂತ ಕೆಳಕ್ಕೆ ಇಳಿಯದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದು ಶೇಕಡಾ ೫ಕ್ಕೆ ಇಳಿದದ್ದು ಆಶ್ಚರ್‍ಯ ಎಂದು ಅವರು ಅವರು ಹೇಳಿದ್ದರು.

ಹಣಕಾಸು ನೀತಿ ಸಮಿತಿಯು ತನ್ನ ಆಗಸ್ಟ್ ತಿಂಗಳ ಸಭೆಯಲ್ಲಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಶೇಕಡಾ ೭ರಿಂದ ಶೇಕಡಾ ೬.೯ಕ್ಕೆ ಇಳಿಯಬಹುದು ಎಂದು ನಿರೀಕ್ಷಿಸಿತ್ತು. ಜಿಡಿಪಿ ಬೆಳವಣಿಗೆ ಮುಂಬರುವ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ ೭.೪ರಿಂದ ಶೇಕಡಾ ೭.೨ಕ್ಕೆ ಇಳಿಯಬಹುದು ಎಂದು ಸಮಿತಿಯು ಶುಕ್ರವಾರ ಭವಿಷ್ಯ ನುಡಿಯಿತು.

ಹಣಕಾಸು ನೀತಿ ಸಮಿತಿ ಸಭೆಗಿಂತ ಮೊದಲು ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (ಎಫ್‌ಎಸ್‌ಡಿಸಿ)  ಉಪ ಸಮಿತಿಯು ಹಾಲಿ ಸ್ಥೂಲ ಆರ್ಥಿಕ ಸ್ಥಿತಿಗತಿಯನ್ನು ಅವಲೋಕಿಸಿತು.  ಇದಕ್ಕೆ ಮುನ್ನ ಆರ್‌ಬಿಐ ಗವರ್ನರ್ ಅವರು ಸರ್ಕಾರಕ್ಕೆ ಕಡಿಮೆ ಹಣಕಾಸು ಅವಕಾಶಗಳಿವೆ ಎಂದು ಹೇಳುವ ಮೂಲಕ ಆರ್ಥಿಕತೆಗೆ ಬಲ ತುಂಬಲು ಕೇಂದ್ರಿಯ ಬ್ಯಾಂಕ್ ಹೆಚ್ಚಿನ ಹಣಕಾಸು ಪ್ರೋತ್ಸಾಹ ನೀಡಬಹುದು ಎಂಬ ಆಶಾ ಭಾವನೆಯನ್ನು ಮೂಡಿಸಿದ್ದರು.

ಕಾರ್ಪೋರೇಟ್ ತೆರಿಗೆ ಕಡಿತ ಮತ್ತು ವಿವಿಧ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಕಡಿತದ ಪರಿಣಾಮವಾಗಿ ಸರ್ಕಾರದ ಹಣಕಾಸು ನೆರವು ಅವಕಾಶಗಳು ಕೂಡಾ ಕುಂಠಿತಗೊಂಡಿವೆ. ಸರ್ಕಾರದ ಕಂದಾಯ ಸಂಗ್ರಹ ಕೂಡಾ ಮುಂಗಡಪತ್ರ ಅಂದಾಜಿಗಿಂತ ಕೆಳಕ್ಕೆ ಇಳಿದಿದೆ.

ಖಾಸಗಿ ಅಂತಿಮ ಬಳಕೆ ವೆಚ್ಚವು ೧೮ ತ್ರೈಮಾಸಿಕಗಳಲ್ಲೇ ಅತ್ಯಂತ ಕಡಿಮೆಯಾಗಿರುವುದನ್ನು ಹಣಕಾಸು ನೀತಿ ಸಮಿತಿಯು ಗಮನಿಸಿದೆ. ನಿರ್ಮಾಣ ಚಟುವಟಿಕೆ ಸ್ಥಗಿತದಿಂದಾಗಿ ಸೇವಾ ಕ್ಷೇತ್ರದಲ್ಲಿನ ಬೆಳವಣಿಗೆಯೂ ಸ್ಥಗಿತಗೊಂಡಿದೆ ಎಂದು ಹಣಕಾಸು ನೀತಿ ಸಮಿತಿಯ ಹೇಳಿಕೆ ತಿಳಿಸಿದೆ.

‘ಒಟ್ಟಾರೆಯಾಗಿ ಕೃಷಿ ಕ್ಷೇತ್ರದ ಭವಿಷ್ಯ ಗಮನಾರ್ಹವಾಗಿ ಉಜ್ವಲಗೊಂಡಿದೆ. ಈ ಕ್ಷೇತ್ರವು ಉದ್ಯೋಗ ಸೃಷ್ಟಿ ಮತ್ತು ಆದಾಯಕ್ಕೆ ಇಂಬು ನೀಡಲಿದೆ. ಇದರೊಂದಿಗೆ ದೇಶೀ ಬೇಡಿಕೆಯೂ ಚೇತರಿಸಲಿದೆ ಎಂದು ಸಮಿತಿ ಹೇಳಿತು.

ಚಿಲ್ಲರೆ ಹಣದುಬ್ಬರವು ೧೦ ತಿಂಗಳ ಅವಧಿಯಲ್ಲೇ ಆಗಸ್ಟ್ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿತ್ತು. ಆದರೂ ಇದು ಸತತ ೧೩ನೇ ತಿಂಗಳಲ್ಲೂ ಭಾರತೀಯ ರಿಸರ್ವ್ ಬ್ಯಾಂಕಿನ ಶೇಕಡಾ ೪ರ ಮಧ್ಯಮಾವಧಿ ಗುರಿಗಿಂತ ಸಾಕಷ್ಟು ಕೆಳಮಟ್ಟದಲ್ಲೇ ಇದೆ ಎಂದು ಹೇಳಿರುವ ಸಮಿತಿ, ಕೆಲವೊಂದು ಅಸ್ಥಿರ ಜಾಗತಿಕ ರಾಜಕೀಯ ಮತ್ತು ಚಂಚಲವಾದ ಜಾಗತಿಕ ವ್ಯಾಪಾರವು ವಿಶ್ವಾದ್ಯಂತ ಬೇಡಿಕೆಯನ್ನು ದುರ್ಬಲಗೊಳಿಸಿರುವುದು ದರ ಕಡಿತಕ್ಕೆ ಕೆಲವು ಕಾರಣಗಳು ಎಂದು ತಿಳಿಸಿತು.

ದುರ್ಬಲ ದೇಶೀ ಬೇಡಿಕೆ ಮತ್ತು ಜಾಗತಿಕ ವ್ಯಾಪಾರೀ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ಕುಂಠಿತಗೊಂಡಿರುವ ರಫ್ತು ಅವಕಾಶಗಳ ಪರಿಣಾಮವಾಗಿ ಬೆಳವಣಿಗೆ ಕುಂಠಿತಗೊಂಡಿದ್ದು, ಸರ್ಕಾರವು ಇತ್ತೀಚೆಗೆ ಪ್ರಕಟಿಸಿದ ಕ್ರಮಗಳು ಖಾಸಗಿ ಬಳಕೆ ಮತ್ತು ಖಾಸಗಿ ಹೂಡಿಕೆ ಚಟುವಟಿಕೆಯನ್ನು ಬಲಪಡಿಸಲು ನೆರವಾಗಲಿದೆ ಎಂದು ಸಮಿತಿ ಹೇಳಿತು.

October 4, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, Consumer Issues, Finance, Flash News, General Knowledge, India, Nation, News, Spardha | | Leave a comment

ಕಿರು ಬಂಡವಾಳ ಸಂಸ್ಥೆಗಳ ಸಾಲ ಮಿತಿ ರೂ. ೧.೨೫ ಲಕ್ಷಕ್ಕೆ ಏರಿಸಿದ ಆರ್‌ಬಿಐ

04 Micro-Finance-Company
ಮುಂಬೈ
: ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಸಾಲ ಲಭ್ಯತೆಯನ್ನು ಸುಧಾರಿಸುವ ಸಲುವಾಗಿ ಕಿರು ಬಂಡವಾಳ ಸಂಸ್ಥೆಗಳ ಸಾಲ ನೀಡಿಕೆ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್  2019 ಅಕ್ಟೋಬರ್ 4ರ ಶುಕ್ರವಾರ ಹಿಂದಿನ  ೧ ಲಕ್ಷ ರೂಪಾಯಿಗಳಿಂದ ೧.೨೫ ಲಕ್ಷ ರೂಪಾಯಿಗಳಿಗೆ ಏರಿಸಿತು.

ಬ್ಯಾಂಕಿಂಗೇತರ ಹಣಕಾಸು ಕಂಪೆನಿಗಳು – ಕಿರು ಬಂಡವಾಳ ಸಂಸ್ಥೆಗಳ (ಎನ್‌ಬಿಎಫ್‌ಸಿ – ಎಂಎಫ್‌ಐಗಳು) ಸಾಲ ಪಡೆಯುವವರ ಮನೆ ಆದಾಯ ಮಿತಿಯನ್ನು ಕೂಡಾ ಈಗಿನ ೧ ಲಕ್ಷ ರೂಪಾಯಿಗಳಿಂದ ೧.೨೫ ಲಕ್ಷ ರೂಪಾಯಿಗೆ, ನಗರ ಅರೆ-ನಗರ ಪ್ರದೇಶಗಳಲ್ಲಿ ೧.೬೦ ಲಕ್ಷದಿಂದ ೨ ಲಕ್ಷ ರೂಪಾಯಿಗಳಿಗೆ ಏರಿಸಲೂ ಆರ್‌ಬಿಐ ನಿರ್ಧರಿಸಿತು.

ಆರ್ಥಿಕ ಮಿರಮಿಡ್ಡಿನ ತಳದಲ್ಲಿರುವವರಿಗೆ ಹಣಕಾಸು ನೆರವು ಒದಗಿಸುವಲ್ಲಿ  ಕಿರು ಬಂಡವಾಳ ಸಂಸ್ಥೆಗಳ ಮಹತ್ವದ ಪಾತ್ರವನ್ನು ಪರಿಗಣಿಸಿ, ಬೆಳೆಯುತ್ತಿರುವ ಆರ್ಥಿಕತೆಗೆ ತಮ್ಮ ಪಾಲು ಸಲ್ಲಿಸಲು ಅವರಿಗೆ ಸಾಧ್ಯವಾಗುವಂತೆ ಮಾಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ ಎಮದು ಹೇಳಿಕೆ ತಿಳಿಸಿತು.

ಸಾಲ ಅರ್ಹತೆ ಮಿತಿಯನ್ನು ಈ ಹಿಂದೆ ೨೦೧೫ರಲ್ಲಿ ಪರಿಷ್ಕರಿಸಲಾಗಿತ್ತು. ಸಾಲ ಅರ್ಹತೆ ಮತ್ತು ಸಾಲ ಮಿತಿ ಪರಿಷ್ಕರಣೆ ಕುರಿತ ವಿಸ್ತೃತವಾದ ಮಾರ್ಗದರ್ಶಿ ಸೂತ್ರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರೀಯ ಬ್ಯಾಂಕ್ ಹೇಳಿತು.

೨೦೧೦ರ ಆಂಧ್ರಪ್ರದೇಶ ಕಿರು ಬಂಡವಾಳ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ರಂಗಕ್ಕೆ ಸಂಬಂಧಿಸದ ಸಮಸ್ಯೆಗಳ ಬಗ್ಗೆ ಅಧ್ಯಯನಕ್ಕಾಗಿ  ವೈ.ಎಚ್. ಮಾಲೆಗಮ್ ಅಧ್ಯಕ್ಷತೆಯ ರಿಸರ್ವ್  ಬ್ಯಾಂಕಿನ ಕೇಂದ್ರೀಯ ಮಂಡಳಿ ಉಪ ಸಮಿತಿಯುನ್ನು ರಚಿಸಲಾಗಿತ್ತು.

ಈ ಸಮಿತಿಯ ಶಿಫಾರಸುಗಳನ್ನು ಆಧರಿಸಿ, ಎನ್‌ಬಿಎಫ್‌ಸಿ-ಎಂಎಫ್‌ಐಗಳಿಗಾಗಿ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲು ನಿರ್ಧರಿಸಲಾಗಿತ್ತು. ಎನ್‌ಬಿಎಫ್‌ಸಿ-ಎಂಎಫ್‌ಐಗಳಿಗಾಗಿ ವಿಸ್ತೃತ ನಿಯಂತ್ರಣ ಚೌಕಟ್ಟನ್ನು ೨೦೧೧ರ ಡಿಸೆಂಬರಿನಲ್ಲಿ ರೂಪಿಸಲಾಗಿತ್ತು.

October 4, 2019 Posted by | ಆರ್ಥಿಕ, Commerce, Consumer Issues, Finance, Flash News, General Knowledge, India, Nation, News, Spardha | | Leave a comment

ರೂ. ೬,೫೦೦ ಕೋಟಿ ವಂಚನೆ: ಪಿಎಂಸಿ ಬ್ಯಾಂಕಿನ ಅಮಾನತಾದ ಎಂಡಿ ಬಂಧನ

04 PMC-Bank-Joy-Thomas-Mumbai-Police
ಮುಂಬೈ:
ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕಿನಿಂದ (ಪಿಎಂಸಿ) ಅಮಾನತುಗೊಂಡಿರುವ ವ್ಯವಸ್ಥಾಪಕ ನಿರ್ದೇಶಕ  (ಎಂಡಿ) ಜೋಯ್ ಥಾಮಸ್ ಅವರನ್ನು ೬,೫೦೦ ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ  2019 ಅಕ್ಟೋಬರ್  04ರ ಶುಕ್ರವಾರ ಬಂಧಿಸಲಾಗಿದೆ ಎಂದು ಮುಂಬೈಯ ಆರ್ಥಿಕ ಅಪರಾಧ ದಳ ತಿಳಿಸಿತು.

ಪಿಎಂಸಿ ಮಂಡಳಿಯ ಮಾಜಿ  ಸದಸ್ಯ ಮತ್ತು ಎಚ್‌ಡಿಐಎಲ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

ಮುಂಬೈ ಮತ್ತು ಸುತ್ತಮುತ್ತಣ ಪ್ರದೇಶಗಳಲ್ಲಿ ಎಚ್‌ಡಿಐಎಲ್‌ನ ಪ್ರವರ್ತಕರು ಮತ್ತು ಬ್ಯಾಂಕಿನ ಮಾಜಿ ಅಧ್ಯಕ್ಷರಿಗೆ ಸಂಪರ್ಕವಿರುವ ೬ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ  ಶೋಧ ನಡೆಸಿತು.

ಎಚ್‌ಡಿಐಎಲ್‌ನ ಹಿರಿಯ ಕಾರ್ಯ ನಿರ್ವಾಹಕರಾದ  ರಾಕೇಶ್ ವಧವಾನ್ ಮತ್ತು ಸಾರಂಗ್ ವಧವಾನ್ ಅವರನ್ನು ಪೊಲೀಸರು ಅಕ್ಟೋಬರ್ ೯ರ ವರೆಗೆ ಬಂಧನದಲ್ಲಿರಿಸಿದ್ದರು.

ದಿವಾಳಿಯಾಗಿರುವ ಎಚ್‌ಡಿಐಎಲ್‌ಗೆ ಪಿಎಂಸಿ ಬ್ಯಾಂಕ್ ಶೇ. ೭೫ ರಷ್ಟು ಸಾಲವನ್ನು ನೀಡಿತ್ತು. ಎಚ್‌ಡಿಐಎಲ್ ಪ್ರವರ್ತಕರು ಸಾಲ ಪಡೆಯುವುದಕ್ಕಾಗಿ  ೨೧,೦೦೦ ನಕಲಿ ಖಾತೆಗಳನ್ನು ಸೃಷ್ಟಿಸಿದ್ದರು ಎಂಬ ಆರೋಪವಿತ್ತು.

ರಿಯಲ್ ಎಸ್ಟೇಟ್ ಸಂಸ್ಠೆಯಾದ ಎಚ್‌ಡಿಐಎಲ್‌ಗೆ ಸಾಲ ನೀಡಿದ್ದರೂ ವಾರ್ಷಿಕ ವರದಿಯಲ್ಲಿ ಪಿಎಂಸಿ ಈ ಬಗ್ಗೆ ಉಲ್ಲೇಖಿಸಿರಲಿಲ್ಲ. ಎಚ್‌ಡಿಐಎಲ್ ದಿವಾಳಿಯಾಗುತ್ತಿದ್ದರೂ ಪಿಎಂಸಿ ಬ್ಯಾಂಕ್  ಸಾಲ ಕೊಡುತ್ತಲೇ ಇತ್ತು ಎಂದು ತನಿಖಾಧಿಕಾರಿಗಳು ಹೇಳಿದರು.

October 4, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Finance, Flash News, General Knowledge, India, Nation, News, Spardha | , , , | Leave a comment

ಭಾರತದ ವಿರುದ್ಧ ಜಿಹಾದ್: ಇಮ್ರಾನ್ ಖಾನ್‌ಗೆ ತಿರುಗೇಟು

04 Imran-Khan-MEA-spokesperson-Raveesh-Kumar
ನವದೆಹಲಿ
: ಭಾರತದ ವಿರುದ್ಧ ಜಿಹಾದ್ ನಡೆಸುವಂತೆ ಮತ್ತು  ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದತ್ತ ಸಾಗುವಂತೆ ಜನರಿಗೆ ಕರೆಕೊಟ್ಟ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ’ತಾವು ಹೊಂದಿದ ಹುದ್ದೆಗೆ ಸೂಕ್ತವಾದ ಮಾತುಗಳನ್ನು ಆಡಿಲ್ಲ’ ಎಂಬುದಾಗಿ ಹೇಳುವ ಮೂಲಕ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ 2019 ಅಕ್ಟೋಬರ್ 04ರ  ಶುಕ್ರವಾರ ಪ್ರಬಲ ಎದಿರೇಟು ನೀಡಿತು.

ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫ್ಫರಾಬಾದಿನಲ್ಲಿ 2019 ಸೆಪ್ಟೆಂಬರ್ ೧೩ರಂದು ಭಾಷಣ ಮಾಡಿದ್ದ ಇಮ್ರಾನ್ ಖಾನ್ ತನ್ನ ಕರೆಯ ಮೇರೆಗೆ ಭಾರತದ ಗಡಿ ನಿಯಂತ್ರಣ ರೇಖೆಯತ್ತ ಸಾಗಲು ಸಜ್ಜಾಗಿರುವಂತೆ ಜನರಿಗೆ ಕರೆ ಕೊಟ್ಟಿದ್ದರು.

‘ನಾನು ಹೇಳುವವರೆಗೆ ಗಡಿ ನಿಯಂತ್ರಣ ರೇಖೆಯ ಕಡೆಗೆ ಹೋಗಬೇಡಿ. ನೀವು ಯಾವಾಗ ಹೋಗಬಹುದು ಎಂದು ನಾನು ಹೇಳುತ್ತೇನೆ. ಈಗ ನೀವು ಹೋಗಬಾರದು’ ಎಂದು  ಖಾನ್ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಕರೆ ಕೊಟ್ಟಿದ್ದರು.’

‘ಇಂತಹ ಬೇಜವಾಬ್ದಾರಿ ಮತ್ತು ಪ್ರಚೋದನಕಾರಿ ಮಾತುಗಳನ್ನು ಕಟು ಪದಗಳಿಂದ ನಾವು ಖಂಡಿಸುತ್ತೇವೆ. ಅವರಿಗೆ ಅಂತಾರಾಷ್ಟ್ರೀಯ ಬಾಂಧವ್ಯಗಳು ಹೇಗಿರುತ್ತವೆ, ಮತ್ತು ಹೇಗೆ ಕೆಲಸ ಮಾಡುತ್ತವೆ ಎಂಬುದೇ ಗೊತ್ತಿಲ್ಲ. ಆದರೆ ಇದಕ್ಕಿಂತಲೂ ಹೆಚ್ಚು ಗಂಭೀರವಾದದ್ದು ಏನೆಂದರೆ ಭಾರತದ ವಿರುದ್ಧ ’ಜಿಹಾದ್’ ಯಾತ್ರೆ ನಡೆಸುವಂತೆ ಅವರು ಬಹಿರಂಗ ಕರೆ ಕೊಟ್ಟಿದ್ದು’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ ಕುಮಾರ್ ಹೇಳಿದರು.

‘ಗಡಿ ದಾಟಲು ಜನರಿಗೆ ಅವರು ಕೊಟ್ಟ ಕರೆ ಇನ್ನೊಂದು ರಾಷ್ಟ್ರದ ಸಾರ್ವಭೌಮತ್ತ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುತ್ತದೆ. ಇದು ಅವರು ಹೊಂದಿರುವ ಹುದ್ದೆಗೆ ಸೂಕ್ತವಾದ ಹೇಳಿಕೆಯಲ್ಲ’ ಎಂದು ರವೀಶ ಕುಮಾರ್ ನುಡಿದರು.

ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿ ಮಾಡುವ ತಮ್ಮ ಯತ್ನಗಳ ಹಿನ್ಲೆಲೆಯಲ್ಲಿ ಪಾಕಿಸ್ತಾನಿ ಪ್ರಧಾನಿ ಮಾಡಿದ್ದ ಭಾಷಣದ ವಿರುದ್ಧ ವಿದೇಶಾಂಗ ಸಚಿವಾಲಯ ಈ ಕಠಿಣ ದಾಳಿ ನಡೆಸಿತು.

ಟರ್ಕಿ ಮತ್ತು ಮಲೇಶ್ಯಾದ ನಾಯಕರು, ವಿಶೇಷವಾಗಿ ಮಲೇಶ್ಯಾದ ಪ್ರಧಾನಿ ಮಹತಿಯಾರ್ ಮೊಹಮ್ಮದ್ ನೀಡಿದ ಭಾರತ ವಿರೋಧಿ ಹೇಳಿಕೆ ಕೂಡಾ ವಾಸ್ತವವಾಗಿ ತಪ್ಪಾಗಿದ್ದು, ಪಕ್ಷಪಾತದ ಹೇಳಿಕೆಯಾಗಿದೆ ಎಂದು ರವೀಶ ಕುಮಾರ್ ನುಡಿದರು.

October 4, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Politics, Prime Minister, Spardha, World | , , , , , | Leave a comment

ಹಿಂದೂ ಮಹಾಸಾಗರ ವಲಯ ರಾಷ್ಟ್ರಗಳ ಸಹಕಾರ

04 national-security-advisor-center-doval
ಆರ್ಥಿಕ ಸಮೃದ್ಧಿ, ರಕ್ಷಣೆಗಾಗಿ ಹೊಸ ಕಲ್ಪನೆ ಮುಂದಿಟ್ಟ ದೋವಲ್

ಪಣಜಿ: ಆರ್ಥಿಕ ಸಮೃದ್ಧಿ, ಮೂಲಸವಲತ್ತು ವೃದ್ಧಿ ಮತ್ತು ಭದ್ರತೆಯ ಸಲುವಾಗಿ ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳ ಸಹಕಾರ ಸಾಧನೆಯ ಕಲ್ಪನೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು 2019 ಅಕ್ಟೋಬರ್  04ರ ಶುಕ್ರವಾರ ಇಲ್ಲಿ ನಡೆದ ೧೦ ರಾಷ್ಟ್ರಗಳ ನೌಕಾ ಮುಖ್ಯಸ್ಥರ ಸಮ್ಮೇಳನದಲ್ಲಿ ಮುಂದಿಟ್ಟರು.

‘ಭಾರತವು ತನ್ನ ಸುತ್ತಮುತ್ತಣ ದೇಶಗಳ ಆರ್ಥಿಕ ಅಭಿವೃದ್ಧಿ ಮತ್ತು ರಕ್ಷಣೆಗೆ ನೆರವಾಗಲು ತನ್ನ ಗಾತ್ರ ಮತ್ತು ತಂತ್ರಜ್ಞಾನಗಳ ಸದ್ಭಳಕೆಯನ್ನು ಮಾಡಲು ಇಚ್ಛಿಸುತ್ತದೆ’ ಎಂದು ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳ ೨ನೇ ಗೋವಾ ಕಡಲ ತಡಿಯ ರಾಷ್ಟ್ರಗಳ ನೌಕಾ ಮುಖ್ಯಸ್ಥರ ಸಮ್ಮೇಳನದಲ್ಲಿ ದೋವಲ್ ಹೇಳಿದರು. ಭಾರತೀಯ ನೌಕಾಪಡೆಯು ಈ ಸಮ್ಮೇಳನಕ್ಕೆ ಆತಿಥ್ಯ ನೀಡಿತು.

ತನ್ನ ಗಾತ್ರ ಮತ್ತು ಕೆಲವೊಂದು ಭೌಗೋಳಿಕ ಅನುಕೂಲಗಳನ್ನು ಭಾರತ ಹೊಂದಿದೆ. ಮತ್ತು ಸಮಾನ ಗುರಿ ಸಾಧನೆಗಾಗಿ ಕೆಲವೊಂದು ಕ್ರಮಗಳನ್ನು ಈಗಾಗಲೇ ಆರಂಭಿಸಿದೆ ಎಂದು ದೋವಲ್ ನುಡಿದರು.

ಭಾರತಕ್ಕೆ ತಂತ್ರಜ್ಞಾನ ಮತ್ತು ಮೂಲ ಸವಲತ್ತುಗಳನ್ನು ನಿರ್ಮಿಸುವ ಶಕ್ತಿ ಇದೆ. ಪ್ರದೇಶದ ರಾಷ್ಟ್ರಗಳ ಅನುಕೂಲಕ್ಕಾಗಿ ಇದನ್ನು ಬಳಸಲು ನಾವು ಇಚ್ಛಿಸುತ್ತೇವೆ. ನೆರೆಯ ರಾಷ್ಟ್ರಗಳಿಗೆ ನಾವು ಈಗಾಗಲೇ ನೌಕಾಯಾನ ಎಚ್ಚರಿಕೆಗಳು ಮತ್ತು ಹೈಡ್ರೋಗ್ರಾಫಿಕ್ ಸರ್ವೆ ಅನುಕೂಲಗಳನ್ನು ಒದಗಿಸಿದ್ದೇವೆ ಎಂದು ದೋವಲ್ ಹೇಳಿದರು.

‘ನಮ್ಮ ನೆರೆ ಹೊರೆ ಮೊದಲು ನೀತಿಯಡಿಯಲ್ಲಿ ಇದು ನಮ್ಮ ಬದ್ಧತೆಯಾಗಿದೆ. ಭಯೋತ್ಪಾದನೆ, ಸಂಘಟಿತ ಅಪರಾಧ, ಮಾದಕ ದ್ರವ್ಯ,  ಶಸ್ತ್ರಾಸ್ತ್ರ ಕಳ್ಳ ಸಾಗಣೆ ವಿರುದ್ಧದ ಹೋರಾಟದಲ್ಲಿ ನಿಮ್ಮೆಲ್ಲರ ಜೊತೆಗೂ ಸಹಕರಿಸಲು ನಾವು ಬಯಸುತ್ತೇವೆ’ ಎಂದು ದೋವಲ್  ನುಡಿದರು.

‘ಆದರೆ ಭಾರತ ಹಲವು ಕ್ಷೇತ್ರಗಳಲ್ಲಿ ಹಿಂದುಳಿದೆ. ಈ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಮತ್ತು ಬೆಳೆಯಲು ನಾವು ಬಯಸುತ್ತೇವೆ. ಆದರೆ ಈ ಮಾರ್ಗದಲ್ಲಿ ರಾಷ್ಟ್ರದ ಅನುಕೂಲಗಳನ್ನು ಗರಿಷ್ಠಗೊಳಿಸುವುದು ಮಾತ್ರವಲ್ಲ ನಮ್ಮ ನೆರೆಹೊರೆಯ ರಾಷ್ಟ್ರಗಳಿಗೂ ಅವುಗಳಿಂದ ಹೆಚ್ಚಿನ ಅನುಕೂಲ ಆಗಬೇಕು ಎಂದು ಭಾರತ ಬಯಸುತ್ತದೆ’ ಎಂದು ಅವರು ಹೇಳಿದರು.

ಏನಿದ್ದರೂ  ಈ ಯೋಜನೆ ಪರಸ್ಪರ ಸಹಕಾರಕ್ಕಾಗಿ ಮಾತ್ರ. ನೌಕಾ ಮೈತ್ರಿಕೂಟ ರಚನೆಗಾಗಿ ಅಲ್ಲ ಎಂದು ದೋವಲ್ ಸ್ಪಷ್ಟ ಪಡಿಸಿದರು.

‘ನಾವು ಯಾವುದೇ ಮೈತ್ರಿಕೂಟದ ಭಾಗವಾಗುವುದಿಲ್ಲ ಎಂಬುದಾಗಿ ನಿಮಗೆ ಸ್ಪಷ್ಟ ಪಡಿಸಲು ಬಯಸುತ್ತೇನೆ. ನಮ್ಮ ಸಹಕಾರವು ಯಾವುದೇ ರಾಷ್ಟ್ರದ ವಿರುದ್ಧ ಅಲ್ಲ. ನಮ್ಮ ಸಹಕಾರವು ಪ್ರತಿಯೊಂದು ರಾಷ್ಟ್ರ ಮತ್ತು ಪ್ರದೇಶದ ಸಮೃದ್ಧಿಗಾಗಿ ಬದಲಾವಣೆ ತರುವ ನಿಟ್ಟಿನಲ್ಲಿ ಬೆಳಕು ಚೆಲ್ಲುವ ನೈಜ ಗುರಿಯನ್ನು ಹೊಂದಿದೆ’ ಎಂದು ಅವರು ಹೇಳಿದರು.

‘ಮಾಡಬೇಕಾದ ಹಲವಾರು ಕೆಲಸಗಳಿವೆ, ಆದರೆ ನಮ್ಮಲ್ಲಿ ಯಾರೂ ಏಕಾಂಗಿಯಾಗಿ ಅವುಗಳನ್ನು ಮಾಡುವ ಸಾಮರ್ಥ್ಯ ಹೊಂದಿಲ್ಲ. ಪರಸ್ಪರ ಸಹಕರಿಸುವ ಮೂಲಕ ನಾವು ಅವುಗಳನ್ನು ಸಾಧಿಸಬಹುದು. ಇದಕ್ಕೆ ಹೆಚ್ಚಿನ ಅವಕಾಶವಿದೆ, ಏಕೆಂದರೆ ನಾವೆಲ್ಲರೂ ಸಮೀಪದ ಬಾಂಧವ್ಯಗಳನ್ನು ಹೊಂದಿದ್ದೇವೆ. ನಮ್ಮ ನಡುವೆ ಯಾವುದೇ ಆಯಕಟ್ಟಿನ ಪ್ರದೇಶದ ಘರ್ಷಣೆ ಇಲ್ಲ. ಒಂದು ರಾಷ್ಟ್ರಕ್ಕೆ ಅನುಕೂಲವಾಗುವ ವಿಚಾರವು ಉಳಿದ ರಾಷ್ಟ್ರಗಳ ಹಿತಕ್ಕೂ ಕಾಣಿಕೆ ಸಲ್ಲಿಸುತ್ತದೆ ಎಂದು ನಾವು ಪರಿಗಣಿಸುತ್ತೇವೆ’ ಎಂದು ದೋವಲ್ ನುಡಿದರು.

ಕಡಲತಡಿಯ ರಾಷ್ಟ್ರಗಳ ಸಮ್ಮೇಳನಕ್ಕೆ ನೌಕಾ ಸಿಬ್ಬಂದಿ ಮುಖ್ಯಸ್ಥ ಕರಮ್‌ಬೀರ್ ಸಿಂಗ್ ಆತಿಥ್ಯ ನೀಡಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದ ಕಡಲ ತಡಿಯ ಮಾಲ್ದೀವ್ಸ್, ಬಾಂಗ್ಲಾದೇಶ, ಮಲೇಶ್ಯಾ, ಶ್ರೀಲಂಕಾ, ಕೀನ್ಯಾ, ಇಂಡೋನೇಷ್ಯಾ, ಸಿಂಗಾಪುರ, ಸಿಚೆಲ್ಲಸ್, ಮಾರಿಷಸ್, ಮ್ಯಾನ್ಮಾರ್ ಮತ್ತು ಇತರ ರಾಷ್ಟ್ರಗಳ ನೌಕಾ ಮುಖ್ಯಸ್ಥರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಇದಕ್ಕೆ ಮುನ್ನ ನೌಕಾ ಸಿಬ್ಬಂದಿ ಮುಖ್ಯಸ್ಥ ಕರಮ್ ಬೀರ್ ಸಿಂಗ್ ಅವರು ತಮ್ಮ ಆಶಯ ಭಾಷಣದಲ್ಲಿ ಹಿಂದೂ ಮಹಾಸಾಗರ ಪ್ರದೇಶದ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಈ ರಾಷ್ಟ್ರಗಳ ನೌಕಾಪಡೆಗಳು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು.

‘ಹವಾಮಾನ ಬದಲಾವಣೆ, ಸಮುದ್ರ ಮಟ್ಟದ ಏರಿಕೆ, ನೈಸರ್ಗಿಕ ವಿಕೋಪಗಳು ಸ್ಪಷ್ಟವಾದ ಆಪಾಯಗಳನ್ನು ಒಡ್ಡುತ್ತಿವೆ. ಕಡಲ ಭಯೋತ್ಪಾದನೆ, ಮಾದಕ ದ್ರವ್ಯ ಕಳ್ಳ ಸಾಗಣೆ,  ಅಕ್ರಮ ಅನಿಯಂತ್ರಿತ ಮೀನುಗಾರಿಕೆ, ಬೇಟೆಯಾಡುವಿಕೆ, ಕಳ್ಳಸಾಗಣೆ ಇತ್ಯಾದಿ ನೌಕಾಪಡೆಗಳಿಗೆ ನಿರಂತರ ಸವಾಲು ಎಸೆಯುತ್ತಿವೆ’ ಎಂದು ಸಿಂಗ್ ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಮೂರನೇಯದಾಗಿ, ನಾವು ಏಕಾಂಗಿ ರಾಷ್ಟ್ರವಾಗಿ ಇವುಗಳ ವಿರುದ್ಧ ಏನು ಮಾಡಲೂ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಮುದ್ರಗಳ ವೈಶಾಲ್ಯದ ಜೊತೆಗೆ ನಮ್ಮ ವೈಯಕ್ತಿಕ ಸಂಪನ್ಮೂಲಗಳ ಕೊರತೆಯೂ ಕಾಡುತ್ತದೆ. ಯಾವುದೇ ರಾಷ್ಟ್ರವೂ ಏಕಾಂಗಿಯಾಗಿ ಈ ಸವಾಲುಗಳನ್ನು ನಿಭಾಯಿಸಬಲ್ಲಷ್ಟು ಪೂರ್ಣ ಪ್ರಮಾಣದ ಸಂಪತ್ತು, ಆರ್ಥಿಕತೆ ಮತ್ತು ತಜ್ಞರನ್ನು ಹೊಂದಿಲ್ಲ. ಬೆದರಿಕೆಗಳ ಸ್ವರೂಪದ ಹಿನ್ನೆಲೆಯಲ್ಲಿ ಇದು ನಿರ್ಣಾಯಕ ಎಂದು ಅವರು ನುಡಿದರು.

October 4, 2019 Posted by | ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Finance, Flash News, General Knowledge, India, Nation, News, Spardha | , | Leave a comment

ದೆಹಲಿಯ ಐಜಿಐ ಸೇರಿದಂತೆ ೩೦ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

03 airport security
ಜೈಶ್-ಇ-ಮೊಹಮ್ಮದ್ ದಾಳಿ ಬೆದರಿಕೆ, ರಾಜಧಾನಿಗೆ ನುಸುಳಿದ ೪ ಉಗ್ರರು

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ್ದಕ್ಕೆ ಪ್ರತೀಕಾರದ ದಾಳಿ ನಡೆಸುವುದಾಗಿ ಜೈಶ್-ಇ-ಮೊಹಮ್ಮದ್ (ಜೆಇಎಂ) ಬೆದರಿಕೆ ಹಾಕಿದ್ದನ್ನು ಅನುಸರಿಸಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶಾದ್ಯಂತ ೩೦ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು  2019 ಅಕ್ಟೋಬರ್ 03ರ ಗುರುವಾರ ಇಲ್ಲಿ ತಿಳಿಸಿದರು.

ಇದರ ಜೊತೆಗೆ ನಾಲ್ವರು ಭಯೋತ್ಪಾದಕರು ಅಪಾರ ಶಸ್ತ್ರಾಸ್ತ್ರಗಳೊಂದಿಗೆ ದೆಹಲಿಗೆ ನುಗ್ಗಿದ್ದಾರೆ ಎಂಬ ಮಾಹಿತಿ ದೆಹಲಿ ಪೊಲೀಸರ ವಿಶೇಷ ಸೆಲ್‌ಗೆ  ಲಭಿಸಿದ್ದು, ರಾಜಧಾನಿಯಾದ್ಯಂತ ಜನನಿಬಿಡ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ  ಬೆಳಗ್ಗೆ ನಡೆದ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗಿದೆ. ’ನಾವು ಕಟ್ಟೆಚ್ಚರದಿಂದ ಇದ್ದೇವೆ. ಸರ್ವ ರೀತಿಯ ಉಗ್ರ ನಿಗ್ರಹ ಕ್ರಮ ಕೈಗೊಳ್ಳಲಾಗಿದೆ. ಭಯ ಪಡಬೇಕಾದ ಅಗತ್ಯವಿಲ್ಲ’ ಎಂದು ಕೇಂದ್ರ ದೆಹಲಿ ಡಿಸಿಪಿ ಎಸ್.ರಾಂಧವ ಹೇಳಿದರು.

ಜೈಶ್-ಇ-ಮೊಹಮ್ಮದ್ ಸಂಘಟನೆಯ ಶಂಶೇರ್ ವಾನಿ ಎಂಬ ವ್ಯಕ್ತಿ ಹಿಂದಿಯಲ್ಲಿ ಟೈಪ್ ಮಾಡಲಾದ ಪತ್ರವೊಂದರಲ್ಲಿ ಈ ಬೆದರಿಕೆ ಹಾಕಿದ್ದಾನೆ ಎಂದು ನಾಗರಿಕ ವಿಮಾನಯಾನ ಭದ್ರತಾ ದಳದ (ಬ್ಯೂರೋ ಆಫ್ ಸಿವಿಲ್ ಏವಿಯೇಶನ್ ಸೆಕ್ಯುರಿಟಿ) ಅಧಿಕಾರಿಗಳು ಹೇಳಿದರು.

’ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸವಲತ್ತು ಒದಗಿಸಿದ್ದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ್ದಕ್ಕೆ ರಾಷ್ಟ್ರದ ಪ್ರಮುಖ ನಾಯಕರು, ರಾಜಕಾರಣಿಗಳನ್ನು ಗುರಿಯಾಗಿಟ್ಟುಕೊಂಡು ಸೇಡು ತೀರಿಸಲಾಗುವುದು’ ಎಂದು ಪತ್ರದಲ್ಲಿ ಭಯೋತ್ಪಾದಕ ಸಂಸ್ಥೆ ಬೆದರಿಕೆ ಹಾಕಿತು.

ಬೆದರಿಕೆ ಹಿನ್ನೆಲೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್‌ಎಫ್) ದೆಹಲಿ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಿತು.

’ಟರ್ಮಿನಲ್‌ಗಳ ಒಳಗೆ ಶಸ್ತ್ರ ಸಜ್ಜಿತರಾದ ಸಾದಾ ದುಸ್ತಿನಲ್ಲಿ ಯೋಧರನ್ನು ನಿಯೋಜಿಸಲಾಗಿದೆ. ಶ್ವಾನದಳ, ಬಾಂಬ್ ಪತ್ತೆ ದಳಗಳನ್ನು ಕೂಡಾ ಪಾರ್ಕಿಂಗ್ ಮತ್ತು ಮುಂಭಾಗದ ಪ್ರದೇಶ ಸೇರಿದಂತೆ ವಿಮಾನ ನಿಲ್ದಾಣದ ಮೂಲೆ ಮೂಲೆಯಲ್ಲೂ ಬಳಸಲಾಗುತ್ತಿದೆ’ ಎಂದು ಅನಾಮಧೇಯರಾಗಿ ಇರಬಯಸಿದ ಹಿರಿಯ ಸಿಐಎಸ್‌ಎಫ್ ಅಧಿಕಾರಿಯೊಬ್ಬರು ಹೇಳಿದರು.

ವಿಮಾನ ನಿಲ್ದಾಣವನ್ನು ಪ್ರವೇಶಿಸುವ ಪ್ರತಿಯೊಂದು ವಾಹನದ ತಪಾಸಣೆಯನ್ನು ತೀವ್ರಗೊಳಿಸಲಾಗಿದ್ದು, ಕಾವಲುಗೋಪುರಗಳಲ್ಲಿ ಕಣ್ಗಾವಲು ಹೆಚ್ಚಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಂದು ಅಧಿಕಾರಿ ನುಡಿದರು. ಇಂತಹುದೇ ಕ್ರಮಗಳನ್ನು ದೇಶಾದ್ಯಂತ ಅತಿಸೂಕ್ಷ್ಮ (ಹೈಪರ್ ಸೆನ್ಸಿಟಿವ್) ವಿಮಾನ ನಿಲ್ದಾಣಗಳಲ್ಲಿ ಸಿಐಎಸ್ ಎಫ್ ಕೈಗೊಂಡಿದೆ ಎಂದು ಅಧಿಕಾರಿ ಹೇಳಿದರು.

ದೇಶಾದ್ಯಂತ ೩೦ ನಗರಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವುದಾಗಿ ಜೈಶ್ ಪತ್ರ ಬೆದರಿಕೆ ಹಾಕಿದೆ.

‘ಇಂತಹ ಬೆದರಿಕೆಯ ಹಿನ್ನೆಲೆಯಲ್ಲಿ ನಾವು ನಗರದಲ್ಲಿ ಭದ್ರತೆಯನ್ನು ಗಮನಾರ್ಹವಾಗಿ ಹೆಚ್ಚಿಸಿದ್ದೇವೆ. ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇತ್ಯಾದಿ ಜನ ನಿಬಿಡ ಸ್ಥಳಗಳಲ್ಲಿ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಣ್ಣಿಡಲಾಗಿದೆ’ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ನುಡಿದರು.

ಭಯೋತ್ಪಾದನೆ ನಿಗ್ರಹ ’ಪರಾಕ್ರಮ’ ವ್ಯಾನುಗಳನ್ನು ಹಗಲೂ -ರಾತ್ರಿ ಜಾಗೃತ ಸ್ಥಿತಿಯಲ್ಲಿ ಇರಿಸಲಾಗಿದೆ. ಹಗಲು ಮತ್ತು  ರಾತ್ರಿ ಪಹರೆಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

೮ರಿಂದ ೧೦ ಮಂದಿ ಜೈಶ್ ಉಗ್ರರು ನಗರಕ್ಕೆ ಪ್ರವೇಶಿಸಿ ವಾಯುನೆಲೆಗಳ ಮೇಲೆ ಆತ್ಮಹತ್ಯಾ ದಾಳಿ ನಡೆಸುವ ಹಂಚಿಕೆ ಹೂಡಿದ್ದಾರೆ ಮತ್ತು ನವರಾತ್ರಿ ಹಬ್ಬದ ವೇಳೆಯಲ್ಲಿ ನಗರದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಜಿಸಿದ್ದಾರೆ ಎಂಬ ಮಾಹಿತಿಯನ್ನು ಅನುಸರಿಸಿ ದೆಹಲಿ ಪೊಲೀಸರು ಬುಧವಾರವೂ ನಗರದಲ್ಲಿ ಕಟ್ಟೆಚ್ಚರ ವಹಿಸಿದ್ದರು.

ದೆಹಲಿಯ ವಿಶೇಷ ಸೆಲ್ ಪೊಲೀಸರು ರಾಜಧಾನಿಯ ಹಲವಾರು ಕಡೆಗಳಲ್ಲಿ ಶೋಧ ಕಾರ್‍ಯಗಳನ್ನು ನಡೆಸಿದ್ದಾರೆ. ಬುಧವಾರ ರಾತ್ರಿ ೯ ಸ್ಥಳಗಳಲ್ಲಿ ದಾಳಿ ನಡೆಸಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಂಧಿತರು ಇಬ್ಬರು ವಿದೇಶೀಯರು ಎಂದು ಹೇಳಲಾಗಿದೆ.

October 4, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Politics, Spardha, World | , , , | Leave a comment

ಒಬ್ಬರ ಬಳಿಕ ಒಬ್ಬರಂತೆ ಕಾಶ್ಮೀರಿ ನಾಯಕರ ಬಿಡುಗಡೆ

ವಿಶ್ಲೇಷಣೆಯ ಬಳಿಕ ಕ್ರಮ: ರಾಜ್ಯಪಾಲರ ಸಲಹೆಗಾರರ ಸ್ಪಷ್ಟನೆ

03 farooq-khanಜಮ್ಮು: ಎರಡು ತಿಂಗಳುಗಳಿಂದ ಬಂಧನದಲ್ಲಿ ಇರುವ ಕಾಶ್ಮೀರದ ನಾಯಕರನ್ನು ವಿಶ್ಲೇಷಣೆಯ ಬಳಿಕ ಒಬ್ಬರ ಬಳಿಕ ಒಬ್ಬರಂತೆ ಬಿಡುಗಡೆ ಮಾಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಸಲಹೆಗಾರರು  2019 ಅಕ್ಟೋಬರ್  03ರ ಗುರುವಾರ ಇಲ್ಲಿ ತಿಳಿಸಿದರು.

‘ಹೌದು, ವಿಶ್ಲೇಷಣೆಯ ಬಳಿಕ ಒಬ್ಬರ ಬಳಿಕ ಒಬ್ಬರಂತೆ ಅವರನ್ನು ಬಿಡುಗಡೆ ಮಾಡಲಾಗುವುದು’ ಎಂದ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರ ಸಲಹೆಗಾರ ಫರೂಖ್ ಖಾನ್ ಅವರು ಹೇಳಿದರು. ಜಮ್ಮು ಪ್ರದೇಶದ ನಾಯಕರನ್ನು ಬಿಡುಗಡೆ ಮಾಡಿದ ಬಳಿಕ ಕಾಶ್ಮೀರಿ ನಾಯಕರನ್ನು ಬಿಡುಗಡೆ ಮಾಡಲಾಗುವುದೇ ಎಂಬುದಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಖ್ ಅಬ್ದುಲ್ಲ ಮತ್ತು ಒಮರ್ ಅಬ್ದುಲ್ಲ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಜಮ್ಮು-ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸಿನ ನಾಯಕ ಸಜ್ಜದ್ ಗನಿ ಲೋನ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಆಗಸ್ಟ್ ೫ರಿಂದ ಗೃಹ ಬಂಧನದಲ್ಲಿ ಇದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯ ಚಟುವಟಿಕೆ ಹೆಚ್ಚಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾನ್ ಅವರು ’ಯಾವುದೇ ಭಯೋತ್ಪಾದಕ ಹೆದರಿಕೆಗಾಗಿ ಇದನ್ನು ಮಾಡಿದ್ದಲ್ಲ. ಮುಂಜಾಗರೂಕತಾ ಕ್ರಮವಾಗಿ ಭದ್ರತಾ ಚಟುವಟಿಕೆಯನ್ನು ಹೆಚ್ಚಿಸಲಾಗಿದೆ’ ಎಂದು ಸ್ಪಷ್ಟ ಪಡಿಸಿದರು.

‘ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಮುಂಜಾಗರೂಕತಾ ಕ್ರಮಗಳನ್ನು ಆಡಳಿತವು ಕೈಗೊಂಡಿದೆ. ಪೊಲೀಸ್, ಸೇನೆ, ಬಿಎಸ್‌ಎಫ್ ಸೇರಿದಂತೆ ಎಲ್ಲ ಪಡೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದ್ದು, ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡುವ ಕಾರ್‍ಯ ಮುಂದುವರೆದಿದೆ’ ಎಂದು ಅವರು ನುಡಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ಕೇಂದ್ರ ಸರ್ಕಾರವು ರದ್ದು ಪಡಿಸಿದ ಬಳಿಕ ಆಗಸ್ಟ್ ೫ರಿಂದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಕಾಂಗ್ರೆಸ್ ಮತ್ತು ಜಮ್ಮು-ಕಾಶ್ಮೀರ ನ್ಯಾಷನಲ್ ಪ್ಯಾಂಥರ್‍ಸ್ ಪಕ್ಷದಂತಹ  (ಜೆಕೆಎನ್‌ಪಿಪಿ) ಹಲವಾರು ರಾಜಕೀಯ ಪಕ್ಷಗಳ ನಾಯಕರನ್ನು ಮುಂಜಾಗರೂಕತಾ ಕ್ರಮವಾಗಿ ಬಂಧಿಸಲಾಗಿತ್ತು.

ಇದಕ್ಕೆ ಒಂದು ದಿನ ಮುಂಚಿತವಾಗಿ, ಆಗಸ್ಟ್ ೪ರಂದು ಕಣಿವೆಯಾದ್ಯಂತ ಇಂಟರ್ ನೆಟ್, ದೂರವಾಣಿ ಮತ್ತು ಟೆಲಿವಿಷನ್ ಸೇವೆಗಳನ್ನು ಸರ್ಕಾರವು ಕಡಿತಗೊಳಿಸಿತ್ತು. ವಿಶೇಷ ಸ್ಥಾನಮಾನ ರದ್ದು ಕ್ರಮದ ವಿರುದ್ಧ ಯಾವುದೇ ಪ್ರತಿಭಟನೆಗಳು ನಡೆಯದಂತೆ ಈ ಕ್ರಮ ಕೈಗೊಳ್ಳಲಾಗಿತ್ತು.

October 4, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha | | Leave a comment

ಕರ್ತಾರಪುರ ಕಾರಿಡಾರ್ ಉದ್ಘಾಟನೆ: ಪಾಕಿಸ್ತಾನಕ್ಕೆ ಮನಮೋಹನ್ ಸಿಂಗ್ ಭೇಟಿ

03 modi-manmohan-kartarpur-corridor
ಭಾರತದಲ್ಲಿನ ಸಮಾರಂಭಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಕರ್ತಾರಪುರ ಸಾಹಿಬ್ ಕಾರಿಡಾರ್ ಉದ್ಘಾಟನಾ ಸಮಾರಂಭಕ್ಕಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದು, ಭಾರತದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪಾಲ್ಗೊಳ್ಳಲಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಈ ಸಂಬಂಧ ನೀಡಿರುವ ಆಹ್ವಾನವನ್ನು ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ವೀಕರಿಸಿದ್ದಾರೆ. ಪಂಜಾಬ್ ರಾಜ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಅಮರೀಂದರ್ ಸಿಂಗ್ ಅವರು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಮನವಿ ಮಾಡಿದ್ದರು.

ಅಮರೀಂದರ್ ಸಿಂಗ್ ಅವರು ದೆಹಲಿಯಲ್ಲಿನ ಮನಮೋಹನ್ ಸಿಂಗ್ ಅವರ ಮನೆಗೆ ಭೇಟಿ ನೀಡಿ ನವೆಂಬರ್ ೯ರಂದು ಗಡಿಯಾಚೆ ನಡೆಯಲಿರುವ ಕರ್ತಾರಪುರ ಸಾಹಿಬ್ ಉದ್ಘಾಟನಾ ಸಮಾರಂಭದ ಸಲುವಾಗಿ ಶಸ್ತ್ರಧಾರಿ ಸಿಕ್ಖರಿಂದ ಕರ್ತಾರಪುರಕ್ಕೆ ಸಾಗಲಿರುವ ಮೊದಲ ಸರ್ವ ಪಕ್ಷ ’ಜಾಥಾ’ದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಮಾಜಿ ಪ್ರಧಾನಿಯವರು ಆಹ್ವಾನವನ್ನು ಸ್ವೀಕರಿಸಿದರು ಎಂದು ಪಂಜಾಬ್ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ರವೀನ್ ಥುಕ್ರಾಲ್ ಅವರು ಟ್ವೀಟ್ ಮಾಡಿದರು. ಇದಕ್ಕೆ ಮೊದಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಬೇಕಾಗುತ್ತದೆ. ಶ್ರೀ ಗುರು ನಾನಕ್ ದೇವ್ ಅವರ ೫೫೦ನೇ ಪ್ರಕಾಶ ಪರ್ಬ್ ಅಂಗವಾಗಿ ಸುಲ್ತಾನಪುರ ಲೋಧಿಯಲ್ಲಿ ನಡೆಯಲಿರುವ ಮುಖ್ಯ ಸಮಾರಂಭದಲ್ಲೂ ಮನಮೋಹನ್ ಸಿಂಗ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರು ಹೇಳಿದರು.

ಮನಮೋಹನ್ ಸಿಂಗ್ ಭೇಟಿ ಕಾಲದಲ್ಲಿ ಅಮರೀಂದರ್ ಸಿಂಗ್ ಅವರು ವಿಶೇಷ ಸರ್ವಪಕ್ಷ ಜಾಥಾಕ್ಕೆ ಪಾಕಿಸ್ತಾನದಲ್ಲಿರಯವ ಮೊದಲ ಸಿಖ್ ಗುರುವಿನ ಜನ್ಮಸ್ಥಾನವಾದ ನಂಕಾನ ಸಾಹಿಬ್‌ಗೆ ಈ ಚಾರಿತ್ರಿಕ ಸಂದರ್ಭದಲ್ಲಿ ಭೇಟಿ ನೀಡಲು ರಾಜಕೀಯ ಒಪ್ಪಿಗೆ ಪಡೆಯಲು ವೈಯಕ್ತಿಕವಾಗಿ ಪ್ರಭಾವ ಬೀರುವಂತೆ ಮಾಡುವಂತೆ ಮನವಿ ಮಾಡಿದರು.

೫೫೦ನೇ ಪ್ರಕಾಶ ಪರ್ಬ್ ’ಪಥ್’ ಸಂದರ್ಭದಲ್ಲಿ ಅಕ್ಟೋಬರ್ ೩೦ರಿಂದ ನವೆಂಬರ್ ೩ರವರೆಗೆ ’ಪಥ್’ (ಧಾರ್ಮಿಕ ಗ್ರಂಥದ ಪಠಣ) ಸಂಘಟಿಸುವ ಸಲುವಾಗಿ ೨೧ ಮಂದಿಯ ತಂಡವೊಂದಕ್ಕೆ ನಂಕಾನ ಸಾಹಿಬ್‌ಗೆ ತೆರಳಲು ಅವಕಾಶ ನೀಡಬಹುದು. ನಂತರ ಅದೇ ದಿನ ಅಮೃತಸರ (ವಾದ್ಗಾ) ಮೂಲಕ ಸುಲ್ತಾನಪುರ ಲೋಧಿಗೆ ’ನಗರ ಕೀರ್ತನೆ’ ಒಯ್ಯಬಹುದು ಎಂದು ಮುಖ್ಯಮಂತ್ರಿ ಹೇಳಿದರು.

ಪಂಜಾಬಿನ ಕಪೂರ್ತಲಾ ಜಿಲ್ಲೆಯಿಂದ ಸುಲ್ತಾನಪುರ ಲೋಧಿಗೆ ನವೆಂಬರ್ ೪ರಂದು ’ನಗರ ಕೀರ್ತನೆ’ ಆಗಮಿಸಲಿದೆ.

ನಂಕಾನ ಸಾಹಿಬ್ ನಿಯೋಗದ ಭೇಟಿ ಮತ್ತು ಪಾಕಿಸ್ತಾನದಿಂದ ಪಂಜಾಬಿಗೆ ’ನಗರ ಕೀರ್ತನ’ ತರಲು ಔಪಚಾರಿಕ ಒಪ್ಪಿಗೆಗಾಗಿ ಮುಖ್ಯಮಂತ್ರಿಯವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರವನ್ನು ಕೂಡ ಬರೆದಿದ್ದಾರೆ ಎಂದು ಅಧಿಕೃತ ವಕ್ತಾರರು ಹೇಳಿದರು.

ನವೆಂಬರ್ ೫ರಿಂದ ನವೆಂಬರ್ ೧೫ರವರೆಗೆ ಗುರು ನಾನಕ್ ದೇವ್ ಅವರ ೫೫೦ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯದಲ್ಲಿ ನಡೆಸಲು ರಾಜ್ಯ ಸರ್ಕಾರವು ಯೋಜಿಸಿರುವ ಕಾರ್‍ಯಕ್ರಮಗಳ ವಿವರ ನೀಡಿದ ಮುಖ್ಯಮಂತ್ರಿ, ಉದ್ಘಾಟನಾ ಸಮಾರಂಭಕ್ಕೆ ಮುನ್ನ ಸಂಪ್ರದಾಯದಂತೆ ಡೇರಾ ಬಾಬಾ ನಾನಕ್‌ನಲ್ಲಿ ಭಕ್ತರ ಸಂಕ್ಷಿಪ್ತ ಸಭೆ ನಡೆಯಲಿದೆ,  ನವೆಂಬರ್ ೧ರಂದು ಸುಲ್ತಾನಪುರ ಲೋಧಿಯಲ್ಲಿ ಬೆಳಗ್ಗೆ ೧೧ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಸರ್ವ ಪಕ್ಷ ಸಭೆಯನ್ನು ಸಂಘಟಿಸಲು ಪಂಜಾಬ್ ಸರ್ಕಾರ ಉದ್ದೇಶಿಸಿದೆ ಎಂದು ವಿವರಿಸಿದರು.

ಭಕ್ತರ ಈ ಸಭೆಗೆ ಸಂಪೂರ್ಣ ಸಂಚಾರ ಮತ್ತು ಭದ್ರತಾ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸಮಾರಂಭವನ್ನು ಸರ್ವರಿಗೂ ಸ್ಮರಣೀಯ ಅನುಭವವನ್ನಾಗಿಸುವ ಸಲುವಾಗಿ ಪ್ರಧಾನಿ ಮತ್ತು ರಾಷ್ಟ್ರಪತಿಯವರಿಗೆ ತಮ್ಮ ಸರ್ಕಾರವು ಆತ್ಮೀಯ ಆಹ್ವಾನವನ್ನು ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮನಮೋಹನ್ ಸಿಂಗ್ ಅವರ ಪಾಕಿಸ್ತಾನ ಭೇಟಿಯು ಪಾಕಿಸ್ತಾನದ ಆಹ್ವಾನಕ್ಕೆ ಅನುಗುಣವಾಗಿ ನಡೆಯುತ್ತಿರುವುದಲ್ಲ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ಸೋಮವಾರ ಪಾಕಿಸ್ತಾನವು ಮನಮೋಹನ್ ಸಿಂಗ್ ಅವರಿಗೆ ಕರ್ತಾರಪುರ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡುವುದಾಗಿ ಹೇಳಿದ್ದರು.

ಕರ್ತಾರಪುರ ಕಾರಿಡಾರ್ ಉದ್ಘಾಟನೆಯು ಪಾಕಿಸ್ತಾನದ ಪಾಲಿಗೆ ಅತ್ಯಂತ ಮಹತ್ವ ಹಾಗೂ ಮೌಲ್ಯಯುತ ಕಾರ್‍ಯಕ್ರಮವಾಗಿದೆ. ವಿಸ್ತೃತ ಮಾತುಕತೆ ಮತ್ತು ಸಮಾಲೋಚನೆಗಳ ಬಳಿಕ ನಾವು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಆಹ್ವಾನಿಸಲು ನಿರ್ಧರಿಸಲಾಯಿತು ಎಂದು ಖುರೇಶಿ ಹೇಳಿದ್ದರು.

ಏನಿದ್ದರೂ, ಔಪಚಾರಿಕ ಆಮಂತ್ರಣವನ್ನು ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿರಲಿಲ್ಲ. ಅಂತಹ ಯಾವುದೇ ಆಹ್ವಾನದ ಬಗ್ಗೆ ಮಾಹಿತಿ ಇಲ್ಲ, ಬಂದರೆ ಸ್ವೀಕರಿಸುವುದೂ ಇಲ್ಲ ಎಂದು ಹೇಳಿದ ಮನಮೋಹನ್ ಸಿಂಗ್ ಅವರ ಕಚೇರಿ, ಪ್ರಧಾನಿಯಾಗಿದ್ದ ೧೦ ವರ್ಷಗಳ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ ಎಂದು ಹೇಳಿತ್ತು.

October 4, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, culture, Festival, Flash News, General Knowledge, India, Nation, News, Pakistan, Prime Minister, Spardha, Temples, Temples, ದೇವಾಲಯಗಳು, World | , , | Leave a comment

ಪ್ಯಾರಿಸ್; ಚೂರಿಯಿಂದ ಇರಿದು ನಾಲ್ವರು ಪೊಲೀಸ್ ಅಧಿಕಾರಿಗಳ ಹತ್ಯೆ, ಹಂತಕ ಗುಂಡಿಗೆ ಬಲಿ

03 police officers killed paris
ಪ್ಯಾರಿಸ್
(ಫ್ರಾನ್ಸ್): ಪೊಲೀಸ್ ಕೇಂದ್ರ ಕಚೇರಿಗೆ ನುಗ್ಗಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಚೂರಿಯಿಂದ ಇರಿದು ಕೊಂದಿರುವ ಘಟನೆ ಫ್ರಾನ್ಸಿನ ಪ್ಯಾರಿಸ್ ನಗರದಲ್ಲಿ 2019 ಅಕ್ಟೋಬರ್ 3ರ ಗುರುವಾರ ನಡೆದಿದ್ದು,ಬಳಿಕ ಪೊಲೀಸ್ ಗುಂಡೇಟಿಗೆ ಹಂತಕ ಬಲಿಯಾದ  ಎಂದು ವರದಿ ತಿಳಿಸಿತು.

ಕೇಂದ್ರ ಪ್ಯಾರಿಸ್ಸಿನ ಪೊಲೀಸ್ ಕೇಂದ್ರ ಕಚೇರಿಗೆ ನುಗ್ಗಿದ ಹಂತಕ ಪೊಲೀಸ್ ಅಧಿಕಾರಿಗಳನ್ನು ಇರಿದು ಹತ್ಯೆಗೈದ. ಆತ ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ಬಹಿರಂಗಪಡಿಸಲಿಲ್ಲ. ಕೂಡಲೇ ನೋಟ್ರೆ-ಡಾಮೆ ಕ್ಯಾಥೆಡ್ರಲ್ ಹಾಗೂ ಇನ್ನಿತರ ಪ್ರಮುಖ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕಾರ್ಯಾಚರಣೆ ನಡೆಸಿರುವುದಾಗಿ ಎಎಫ್ ಪಿ ವರದಿ ಮಾಡಿತು.

ಕೋರ್ಟ್ ಯಾರ್ಡ್ ಬಿಲ್ಡಿಂಗ್ ಸಮೀಪ ಹಂತಕನನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದರು. ಘಟನೆಯಿಂದ ಕಂಗಾಲಾದ ಜನರು ಭೀತಿಗೊಳಗಾಗಿ ಕೂಗಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಎಎಫ್ ಪಿಗೆ ತಿಳಿಸಿದರು.

October 4, 2019 Posted by | ವಿಶ್ವ/ ಜಗತ್ತು, Flash News, General Knowledge, News, Spardha, World | | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ