SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಲಂಡನ್ನಿನಲ್ಲಿ ನೀತಾ ಅಂಬಾನಿಯಿಂದ ಭಾರತದ ನಾರಿ ಶಕ್ತಿ, ಯುವ ಶಕ್ತಿ, ಕ್ರೀಡಾ ಶಕ್ತಿ ಜಾಹೀರು


08 nita-ambani-sports-london
ಲಂಡನ್:
 ಇಂಗ್ಲೆಂಡ್ ರಾಜಧಾನಿಯಲ್ಲಿ ಅ. 10ರವರೆಗೆ ನಡೆಯುತ್ತಿರುವ ದಿ ಬ್ಯುಸಿನೆಸ್ ಸ್ಪೋರ್ಟ್ಸ್ ಶೃಂಗ ಸಭೆಯಲ್ಲಿ  2019 ಅಕ್ಟೋಬರ್ 08ರ ಮಂಗಳವಾರ  ನೀತಾ ಅಂಬಾನಿ ಅವರು ಭಾಷಣ ಮಾಡಿದರು.

“ಬಿಲಿಯನ್ ಡ್ರೀಮ್ಸ್: ದಿ ಇಂಡಿಯಾ ಆಪರ್ಚುನಿಟಿ” ವಿಷಯದ ಕುರಿತು ಮಾತನಾಡಿದ ರಿಲಾಯನ್ಸ್ ಫೌಂಡೇಶನ್ ಮುಖ್ಯಸ್ಥೆ ನೀತಾ ಅಂಬಾನಿ ಅವರು ಭಾರತದ ಕ್ರೀಡಾ ಶಕ್ತಿ, ನಾರಿ ಶಕ್ತಿ ಮತ್ತು ಯುವ ಶಕ್ತಿಯ ಬಗ್ಗೆ ಹೊಸ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.

‘ನಮಸ್ಕಾರ’ ಎಂದು ಭಾಷಣ ಆರಂಭಿಸಿದ ನೀತಾ ಅವರು, ತಮಗೆ ಈ ವೇದಿಕೆ ಏರಲು ಅವಕಾಶ ಮಾಡಿಕೊಟ್ಟ ಆಯೋಜಕರಿಗೆ ಧನ್ಯವಾದ ಅರ್ಪಿಸಿದರು. “ಇವರು ನನ್ನನ್ನು ಭಾರತದ ಕ್ರೀಡೆಯ ಮೊದಲ ಮಹಿಳೆ ಎಂದು ಪರಿಗಣಿಸಿದ್ದು ನನ್ನ ಪಾಲಿನ ಗೌರವ. ನಾನಿಲ್ಲಿ ಬಂದಿರುವುದು ಭಾರತದ ಎಲ್ಲಾ ಮಹಿಳೆಯರಿಗೂ ಗೌರವದ ವಿಷಯವಾಗಿದೆ. ಭಾರತದಲ್ಲಿರುವ ಎಲ್ಲಾ ಮಹಿಳೆಯರ ಸಬಲೀಕರಣ ಮಾಡುವುದು ನನ್ನ ಧ್ಯೇಯ ಮತ್ತು ಗುರಿಯಾಗಿದೆ” ಎಂದು ಹೇಳಿದರು.

ರಿಲಾಯನ್ಸ್ ಫೌಂಡೇಶನ್ ಸಂಸ್ಥೆ ಬಹಳಷ್ಟು ವರ್ಷಗಳಿಂದ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಜೋಡಿಸಿಕೊಂಡಿದೆ. ಫೌಂಡೇಶನ್​ನ ಮುಖ್ಯಸ್ಥೆಯಾಗಿ ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್ ಎಂಬ ಬೃಹತ್ ಸಂಸ್ಥೆಯ ನಿರ್ದೇಶಕಿಯಾಗಿ ನೀತಾ ಅಂಬಾನಿ  ಅವರು ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.  ಭಾರತದಲ್ಲಿ ರಿಲಾಯನ್ಸ್ ತೊಡಗಿಸಿಕೊಂಡಿರುವ ಹಲವು ಕ್ರೀಡೆಗಳಲ್ಲಿ ಫುಟ್ಬಾಲ್ ಮತ್ತು ಬ್ಯಾಸ್ಕೆಟ್​ಬಾಲ್ ಕೂಡಾ ಸೇರಿವೆ. ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ಟೂರ್ನಿಗಳಲ್ಲಿ ಒಂದಾಗಿರುವ  ಎನ್​ಬಿಎ ಬ್ಯಾಸ್ಕೆಟ್​ಬಾಲ್ ಭಾರತದಲ್ಲಿ ಜನಪ್ರಿಯಗೊಳ್ಳುವಂತೆ ಮಾಡುವಲ್ಲಿ  ರಿಲಾಯನ್ಸ್ ಫೌಂಡೇಶನ್​ನ ಪ್ರಯತ್ನ ಗಣನೀಯವಾದುದು.

ಅಮೆರಿಕದ ಎನ್​ಬಿಎ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವ ರಿಲಾಯನ್ಸ್ ಫೌಂಡೇಶನ್ ಜೂನಿಯರ್ ಎನ್​ಬಿಎ ಪ್ರೋಗ್ರಾಮ್ ಹಮ್ಮಿಕೊಂಡಿದೆ. ಕ್ರಿಕೆಟ್ ಅತ್ಯಂತ ಜನಪ್ರಿಯವಿರುವ ಭಾರತದಲ್ಲಿ ಬ್ಯಾಸ್ಕೆಟ್​ಬಾಲ್ ಕ್ರೀಡೆಯನ್ನು ಒಂದಷ್ಟು ಮಟ್ಟಕ್ಕೆ ಪ್ರಜ್ವಲಿಸುವಂತೆ ಮಾಡಿದೆ. 20 ರಾಜ್ಯಗಳ 34 ನಗರಗಳಲ್ಲಿ ಇಂದು 1.1 ಕೋಟಿ ಮಕ್ಕಳು ಜೂನಿಯರ್ ಎನ್​ಬಿಎ ಪ್ರೋಗ್ರಾಮ್ ಅಡಿ ತರಬೇತಿ ಪಡೆಯುತ್ತಿದ್ದಾರೆ.

ಕಳೆದ ವಾರವಷ್ಟೇ ಅಮೆರಿಕದ ಎನ್​ಬಿಎ ತಂಡಗಳಾದ ಇಂಡಿಯಾನಾ ಪೇಸರ್ಸ್ ಮತ್ತು ಸ್ಯಾಕ್ರಮೆಂಟೋ ಕಿಂಗ್ಸ್ ಭಾರತದಲ್ಲಿ ಪ್ರದರ್ಶನ ಪಂದ್ಯಗಳನ್ನ ಆಡಿದ್ದವು. ಇದನ್ನ ಆಯೋಜಿಸಿದ ಶ್ರೇಯಸ್ಸು ರಿಲಾಯನ್ಸ್ ಫೌಂಡೇಶನ್​ಗೆ ಸೇರಬೇಕು. ಈ ಪಂದ್ಯಗಳನ್ನು ಜಿಯೋ ಟಿವಿ ಆ್ಯಪ್​ನಲ್ಲಿ ಲೈವ್ ಆಗಿ ಸ್ಟ್ರೀಮ್ ಮಾಡಲಾಗಿತ್ತು.

ನೀತಾ ಅಂಬಾನಿ ಅವರು ಕ್ರೀಡೆಯ ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದಾರೆ. ಶಾಲೆಯ ಪಠ್ಯದಲ್ಲಿ ಕ್ರೀಡೆಗೆ ಒತ್ತುಕೊಡಬೇಕೆಂದು ಅವರು ಕರೆ ನೀಡಿದ್ದಾರೆ. ರಿಲಾಯನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ಸ್ ಮೂಲಕ ದೇಶಾದ್ಯಂತ 5 ಸಾವಿರ ಶಿಕ್ಷಣ ಸಂಸ್ಥೆಗಳಲ್ಲಿ ಇವತ್ತು ಕ್ರೀಡೆಗೆ ಉತ್ತೇಜನ ಸಿಗುತ್ತಿರಲು ನೀತಾ ಅವರ ಪಾತ್ರವೂ ಇದೆ ಎನ್ನಲಾಗಿದೆ.

2016ರಲ್ಲಿ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಗೆ ಆಯ್ಕೆಯಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ರಿಲಾಯನ್ಸ್ ಸಂಸ್ಥೆಯೇ ನಿರ್ವಹಿಸುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಅಧ್ಯಕ್ಷೆಯಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ಧಾರೆ. ಐಪಿಎಲ್​ನ ಪ್ರಮುಖ ಭಾಗವಾಗಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮಾಲೀಕರೂ ಅವರಾಗಿದ್ದಾರೆ.

October 8, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, News, Spardha, Sports, World |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ