SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಭಾರತದಲ್ಲಿ ಮೊದಲ ಇಂಟರ್ ಸಿಟಿ ಹೆಲಿಕಾಪ್ಟರ್ ಸೇವೆ


16 helicopter service
ಮುಂಬೈ:
ಅಮೆರಿಕದ ಅತೀ ದೊಡ್ಡ ನಾಗರಿಕ ಹೆಲಿಕಾಪ್ಟರ್ ಸೇವಾ ಸಂಸ್ಥೆಯಾಗಿರುವ ಫ್ಲೈ ಬ್ಲೇಡ್ ಈಗ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ನಗರಗಳನ್ನು ಸಂಪರ್ಕಿಸುವ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಲಿದೆ. ಅಕ್ಟೋಬರ್ ಮಾಸಾಂತ್ಯದಲ್ಲಿ ಈ ವಿಶೇಷ ಸೇವೆ ಆರಂಭವಾಗಲಿದೆ.

ಫ್ಲೈ ಬ್ಲೇಡ್ ಸಂಸ್ಥೆಯ ಭಾರತದಲ್ಲಿನ ಬ್ಲೇಡ್ ಇಂಡಿಯಾ ವಿಭಾಗವು ಈ ಸೇವೆಯನ್ನು ಮೊತ್ತ ಮೊದಲಿಗೆ ಮಹಾರಾಷ್ಟ್ರದಲ್ಲಿ ಪರಿಚಯಿಸಲಿದೆ. ಇದು ಕೆಲಸ ಮಾಡಬೇಕಾದರೆ ನಾವು ಸಂಸ್ಥೆಯ ಮೊಬೈಲ್ ಆಪ್  ಅಥವಾ ವೆಬ್‌ಸೈಟ್‌ನಲ್ಲಿ ಟಿಕೇಟ್ ಬುಕ್ ಮಾಡಬೇಕು. ಹೆಲಿಕಾಪ್ಟರ್ ಸೇವೆಯ ಟಿಕೇಟ್ ಬುಕ್ಕಿಂಗ್ ಮತ್ತು ಸೇವಾ ವಿಧಾನ ವಿಮಾನಗಳ ಸೇವಾ ಮಾದರಿಯಲಿ ಇರುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರ್ದಿಷ್ಟ ಸಮಯದಲ್ಲಿ ಹೆಲಿಕಾಪ್ಟರ್ ಸಂಚರಿಸಲಿದೆ.

ಆರಂಭದಲ್ಲಿ ಪುಣೆ, ಮುಂಬೈ, ಮತ್ತು ಶಿರ್ಡಿ ನಗರಗಳನ್ನು ಸಂಸ್ಥೆಯು ಆಯ್ದುಕೊಂಡಿದ್ದು, ಸದ್ಯ ಈ ಮೂರು ನಗರದಲ್ಲಿ ಸೇವೆ ನೀಡಲಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಈ ಸೇವೆ ಆರಂಭಿಸುವ ಗುರಿ ಇತ್ತು. ಆದರೆ ಲೋಕಸಭಾ ಚುನಾವಣೆ ಕಾರಣ ಅದು ಈಡೇರಲಿಲ್ಲ ಎಂದು ಸಂಸ್ಥೆ ಹೇಳಿದೆ.

ಮೊದಲ ಪಯಣ ಎಲ್ಲಿಗೆ?

ತನ್ನ ಮೊದಲ ಸೇವೆಯನ್ನು ಪುಣೆಯಿಂದ ಪ್ರಾರಂಭಿಸಲಿದ್ದು, ೬ ಪ್ರಯಾಣಿಕರನ್ನು ಹೊತ್ತು ಹೆಲಿಕಾಪ್ಟರ್ ಮುಂಬೈಗೆ ಪಯಣಿಸಲಿದೆ. ಬಳಿಕ ಮುಂಬೈಯಿಂದ ಶಿರ್ಡಿಗೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಚಲಿಸಲಿದ್ದು, ಅಲ್ಲಿಂದ ಪುಣೆಗೆ ವಾಪಸಾಗಲಿದೆ. ಸಂಜೆ ಮುಂಬಯಿಗೆ ತೆರಳಿ ವಾಪಸಾಗಲಿದೆ. ವಾರದಲ್ಲಿ ೬ ದಿನಗಳು ಮಾತ್ರ ಸೇವೆ ನೀಡಲಿದ್ದು, ಭಾನುವಾರ ಸೇವೆ ಇರುವುದಿಲ್ಲ.

ಒಟ್ಟು ಎರಡು ಹೆಲಿಕಾಪ್ಟರುಗಳನ್ನು ಈ ಸೇವೆಗಾಗಿ ಬಳಸಲಾಗುತ್ತಿದೆ. ಪ್ರಯಾಣಿಕರು ತಮ್ಮ ಜತೆ ಒಟ್ಟು ೧೦ ಕೆ.ಜಿ.ಯಷ್ಟು ಮಾತ್ರ ಸರಕನ್ನು ಕೊಂಡೊಯ್ಯಬಹುದು ಎಂದು ಸಂಸ್ಥೆ ತಿಳಿಸಿತು.

October 16, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, Commerce, Flash News, General Knowledge, India, Nation, News, Spardha, Technology |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ