SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಭಾರತದ  ಮುಂದಿನ ಮುಖ್ಯ ನ್ಯಾಯಮೂರ್ತಿ  ಶರದ್  ಅರವಿಂದ ಬೋಬ್ಡೆ: ಸಿಜೆಐ ಗೊಗೋಯಿ ಶಿಫಾರಸು


18 justice bobde and gogoi
ನವದೆಹಲಿ
: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.

2018 ಅಕ್ಟೋಬರ್ 3ರಂದು ದೇಶದ 46ನೇ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದ ನ್ಯಾಯಮೂರ್ತಿ  ರಂಜನ್ ಗೊಗೋಯಿ ನವೆಂಬರ್17ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ನ್ಯಾಯಮೂರ್ತಿಯ ಹೆಸರನ್ನು ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸುದ್ದಿ ಮೂಲಗಳು 2019 ಅಕ್ಟೋಬರ್ 18ರ ಶುಕ್ರವಾರ ತಿಳಿಸಿವೆ.

ಸುಪ್ರೀಂಕೋರ್ಟ್ ನಿಂದ ನಿವೃತ್ತಿಯಾಗಲಿರುವ  ಪ್ರತಿಯೊಬ್ಬ ಸಿಜೆಐ ಕೂಡಾ ಇದೇ  ಸಂಪ್ರದಾಯವನ್ನು  ಅನುಸರಿಸುತ್ತಾರೆ. ತಮ್ಮ ನಂತರ ಮುಂದಿನ ಸಿಜೆಐ ಯಾರಾಗಬೇಕು ಎಂಬ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವುದು ರೂಢಿ.

ಸಿಜೆಐ ರಂಜನ್ ಗೋಗೊಯಿ ನಂತರ ಸುಪ್ರೀಂಕೋರ್ಟ್ ನಲ್ಲಿ ಎರಡನೇ ಹಿರಿಯ  ನ್ಯಾಯಮೂರ್ತಿ ಆಗಿದ್ದಾರೆ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ.  ಅವರ ಹಿರಿತನದ ಆಧಾರದ ಮೇಲೆ ಮುಂದಿನ ನೂತನ ಸಿಜೆಐ ಆಗಿ ನೇಮಕ ಮಾಡುವಂತೆ ಗೋಗೋಯಿ ಅವರು ಕಾನೂನು ಸಚಿವಾಲಯಕ್ಕೆ ಶಿಫಾರಸು ಪತ್ರ ಬರೆದಿದ್ದಾರೆ.

ಹಾಲಿ ಸಿಜೆಐ ಶಿಫಾರಸು ಮಾಡಿದವರನ್ನೇ ಸಾಮಾನ್ಯವಾಗಿ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಪರಿಗಣಿಸುವ ಸಾಧ್ಯತೆ  ಇದೆ.

ಬೋಬ್ಡೆ ಯಾರು?

1956ರ ಏಪ್ರಿಲ್ 24ರಂದು ಎಸ್ ಎ ಬೋಬ್ಡೆ ಅವರು ಮಹಾರಾಷ್ಟ್ರದ  ನಾಗ್ ಪುರದಲ್ಲಿ ಜನಿಸಿದ್ದರು. ನಾಗಪುರ ವಿಶ್ವಿವಿದ್ಯಾಲಯದಲ್ಲಿ ವಿದ್ಯಾಭ್ಯಾಸದ ಬಳಿಕ 2000ನೇ ಇಸವಿಯಲ್ಲಿ ಬಾಂಬೆ ಹೈ ಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ  ನೇಮಕಗೊಂಡಿದ್ದರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ  ಮುಖ್ಯ ನ್ಯಾಯಮೂರ್ತಿಯಾಗಿ  ನೇಮಕಗೊಂಡಿದ್ದರು.

ನವೆಂಬರ್ 17ರಂದು ನಿವೃತ್ತಿ ಹೊಂದುವ ಮುನ್ನ ಸಿಜೆಐ ರಂಜನ್ ಗೊಗೋಯಿ ಅವರು ರಾಮಜನ್ಮಭೂಮಿ- ಬಾಬರಿ ಮಸೀದಿ  ವಿವಾದ ಪ್ರಕರಣದಲ್ಲಿ ತೀರ್ಪು ನೀಡಲಿದ್ದಾರೆ. ನಿನ್ನೆ ಈ ಪ್ರಕರಣದ  ವಾದ ಪ್ರತಿವಾದ ವಿಚಾರಣೆಗಳು ಮುಕ್ತಾಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಿದ್ದಾರೆ.

October 18, 2019 - Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, News, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ