SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ವಿಶ್ವದ ಯಾವುದೇ ಸಮಸ್ಯೆ, ಸವಾಲಿಗೆ ಗಾಂಧಿ ಬೋಧನೆಯಲ್ಲಿ ಪರಿಹಾರ: ಪ್ರಧಾನಿ ಮೋದಿ


02 modi sabaramati ashram
ದೇಶಾದ್ಯಂತ ಮಹಾತ್ಮ ಗಾಂಧಿ ೧೫೦ನೇ ಜನ್ಮದಿನ:
ರಾಷ್ಟ್ಪಪತಿ ಕೋವಿಂದ್, ಪ್ರಧಾನಿ ಗೌರವಾರ್ಪಣೆ

ನವದೆಹಲಿ/ ಅಹ್ಮದಾಬಾದ್:  ’ವಿಶ್ವವು ಎದುರಿಸುತ್ತಿರುವ ಯಾವುದೇ ಸಮಸ್ಯೆಯನ್ನು ತೆಗೆದುಕೊಳ್ಳಿ, ಈ ಸವಾಲುಗಳಿಗೆ ಮಹಾತ್ಮ ಗಾಂಧಿ ಅವರ ಬೋಧನೆಗಳಲ್ಲಿ ಪರಿಹಾರವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಅಕ್ಟೋಬರ್ 02ರ ಬುಧವಾರ ಗುಜರಾತಿನ ಅಹ್ಮದಾಬಾದಿನಲ್ಲಿ ಹೇಳಿದರು.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನದ ಅಂಗವಾಗಿ ಅಹ್ಮದಾಬಾದಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಮಹಾತ್ಮಾಗಾಂಧಿ ಅವರ ಪ್ರತಿಮಗೆ ಹಾರಾರ್ಪಣೆ ಮಾಡಿ ಗೌರವಾರ್ಪಣೆ ಮಾಡಿದ ಪ್ರಧಾನಿ, ಆ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಸಬರಮತಿ ಆಶ್ರಮದ ಮಕ್ಕಳು ಮತ್ತು ಸ್ವಯಂಸೇವಕರ ಜೊತೆಗೆ ಸಂವಹನ ನಡೆಸಿದರು.

ಅಮೆರಿಕದ ಹ್ಯೂಸ್ಟನ್‌ನಲಿ ನಡೆದ ’ಹೌಡಿ ಮೋದಿ’ ಕಾರ್‍ಯಕ್ರಮದ ಸಂದರ್ಭದಲ್ಲಿ ವಿಶ್ವ ವೇದಿಕೆಯಲ್ಲಿ ಭಾರತಕ್ಕೆ ಇರುವ ಗೌರವದ ಮಿನುಗುನೋಟವನ್ನು ನಾವು ಕಂಡಿದ್ದೇವೆ. ಆ ಕಾರ್‍ಯಕ್ರಮದಲಿ ರಿಪಬ್ಲಿಕನ್ಸ್ ಮತ್ತು ಡೆಮಾಕ್ರಾಟ್ ನಾಯಕರು ಮಾತನಾಡಿದರು. ಅವರು ಅಲ್ಲಿಗೆ ಬಂದದ್ದೇ ವಿಶೇಷವಾಗಿತ್ತು’ ಎಂದು ಪ್ರಧಾನಿ ಮೋದಿ ಹೇಳಿದರು.

ವಿಶ್ವ ವೇದಿಕೆಯಲ್ಲಿ ಸಂಭವಿಸುತ್ತಿರುವ ಹಲವಾರು ಧನಾತ್ಮಕ ಬದಲಾವಣೆಗಳಲ್ಲಿ ಭಾರತ ಮುಂಚೂಣಿಯಲ್ಲಿರುವದನ್ನು ಜಗತ್ತು ಗಮನಿಸುತ್ತಿದೆ ಎಂದು ಅವರು ನುಡಿದರು.

‘ವಾಸ್ತವವಾಗಿ ಪ್ರತಿಯೊಬ್ಬರನ್ನೂ ಜೊತೆಯಲ್ಲಿ ಕರೆದೊಯ್ಯುವುದರಲ್ಲಿ ಭಾಋತ ನಂಬಿಕೆ ಇರಿಸಿದೆ. ಇದನ್ನೂ ಜಗತ್ತು ಗಮನಕ್ಕೆ ತೆಗೆದುಕೊಂಡಿದೆ’ ಎಂದು ಪ್ರಧಾನಿ ಹೇಳಿದರು.

 

ವಿಶ್ವಸಂಸ್ಥೆಯಲ್ಲಿ ಮಹಾತ್ಮ ಗಾಂಧಿ ಅವರು ೧೫೦ನೇ ಜನ್ಮದಿನೋತ್ಸವವು ಅತ್ಯಂತ ಕುತೂಹಲವನ್ನು ಮೂಡಿಸಿದೆ. ಜಗತ್ತು ಎದುರಿಸುವ ಯಾವುದೇ ಸವಾಲುಗಳಿಗೆ ಗಾಂಧಿ ಅವರ ಬೋಧನೆಗಳಲ್ಲಿ ಪರಿಹಾರ ಲಭಿಸುತ್ತದೆ ಎಂದು ಪ್ರಧಾನಿ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ನುಡಿದರು.

ರಾಷ್ಟ್ರವ್ಯಾಪಿ ಕಾರ್ಯಕ್ರಮ: ಜಾಥಾಗಳು, ಸ್ವಚ್ಛತಾ ಅಭಿಯಾನಗಳು, ರಕ್ತದಾನ ಶಿಬಿರಗಳು, ಭಜನೆಗಳ ಮೂಲಕ ದೇಶಾದ್ಯಂತ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನಾಚರಣೆಯನ್ನು  ಬುಧವಾರ ದೇಶಾದ್ಯಂತ ಆಚರಿಸಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆಯೇ ರಾಜಘಾಟ್‌ಗೆ ತೆರಳಿ ಮಹಾತ್ಮಾ ಗಾಂಧಿ ಅವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಕೇಂದ್ರ ಸಚಿವರಾದ ಪೀಯೂಶ್ ಗೋಯೆಲ್ ಮತ್ತು ಹರದೀಪ್ ಸಿಂಗ್ ಪುರಿ ಮತ್ತು ಬಿಜೆಪಿ ಕಾರ್‍ಯಾಧ್ಯಕ್ಷ ಜೆಪಿ ನಡ್ಡಾ ಅವರು ರಾಷ್ಟ್ರಪಿತನಿಗೆ ಪುಷ್ಪಾಂಜಲಿ ಸಲ್ಲಿಸಿದವರಲ್ಲಿ ಸೇರಿದ್ದರು.

ಬಿಜೆಪಿ ಅಧ್ಯಕ್ಷೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರೆ, ಕಾಂಗ್ರೆಸ್ ನಾಯಕರು ಪಕ್ಷದ ಹಂಗಾಮೀ ಅಧ್ಯಕ್ಷೆ ಸೋನಿಯಗಾಂಧಿ ನೇತೃತ್ವದಲ್ಲಿ ಪಕ್ಷದ ದೆಹಲಿ ಕಚೇರಿಯಿಂz ಗಾಂಧಿ ಸಂದೇಶ ಪಾದಯಾತ್ರೆ ನಡೆಸಿದರು.

ದೈನಂದಿನ ಬದುಕಿನಲ್ಲಿ ಗಾಂಧಿ ತತ್ವಗಳನ್ನು ಅನುಷ್ಠಾನಗೊಳಿಸುವಂತೆ ವೆಂಕಯ್ಯ ನಾಯ್ಡು ಅವರು ಈ ಸಂದರ್ಭದಲ್ಲಿ ಜನತೆಯನ್ನು ಆಗ್ರಹಿಸಿದರು.

‘ಮಹಾತ್ಮ ಅವರ ೧೫೦ನೇ ಜನ್ಮ ದಿನವನ್ನು ಗೌರವಪೂರ್ವಕವಾಗಿ ಆಚರಿಸುವುದರ ಜೊತೆಗೆ ನಮ್ಮ ದೈನಂದಿನ ಬದುಕಿನಲ್ಲಿ ಗಾಂಧಿ ತತ್ವಗಳನನು ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಆಂತರಿಕ ಬದುಕನ್ನು ಪರಿವರ್ತಿಸಿಕೊಳ್ಳಲು ನಾವು ಯತ್ನಿಸಬೇಕು’ ಎಂದು ಉಪರಾಷ್ಟ್ರಪತಿ ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದರು.

ಮಾನವತೆಗೆ ಚಿರಂತನವಾದ ಕೊಟ್ಟ ಕೊಡುಗೆಗಾಗಿ ರಾಷ್ಟ್ರವು ಅವರಿಗೆ ತನ್ನ ಕೃತಜ್ಞತೆ ವ್ಯಕ್ತ ಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

‘ಅವರ ಕನಸುಗಳನ್ನು ನನಸಾಗಿಸಲು ಮತ್ತು ಉತ್ತಮ ಭೂಗ್ರಹದ ಸೃಷ್ಟಿಗಾಗಿ ಕಠಿಣ ಶ್ರಮ ಮುಂದುವರೆಸಲು ನಾವು ಪ್ರತಿಜ್ಞೆ ಮಾಡುತ್ತೇವೆ’ ಎಂದು ಮೋದಿ ಅವರು ಟ್ವಿಟ್ಟರ್ ಸಂದೇಶದಲ್ಲಿ ಬರೆದರು.

ಗಾಂಧಿ ಅವರಿಗೆ ಸಂಬಂಧಿಸಿದ ಕಿರು ವಿಡಿಯೋ ಒಂದರಲ್ಲಿ ’ಮಹಾತ್ಮ ಗಾಂಧಿ ಅವರು ಶಾಂತಿಯ ಸಂದೇಶವೂ ಈಗಲೂ ಜಾಗತಿಕ ಸಮುದಾಯಕ್ಕೆ ಪ್ರಸ್ತುತವಾದದ್ದು’ ಎಂದು ಮೋದಿ ಹೇಳಿದರು.

‘ಗಾಂಧಿಯವರು ಎಚ್ಚರಿಕೆ ನೀಡಿದ ಏಳು ವಿಕೃತಗಳನ್ನು ಕೂಡಾ ಉಲ್ಲೇಖಿಸಿದ ಪ್ರಧಾನಿ ಶ್ರಮ ಪಡದ ಸಂಪತ್ತು, ಪ್ರಜ್ಞೆ ಇಲ್ಲದ ಖುಷಿ, ಚಾರಿತ್ರ್ಯ ಇಲ್ಲದ ಜ್ಞಾನ, ನೀತಿ ಇಲ್ಲದ ಭೇಟಿ, ಮಾನವೀಯತೆ ಇಲ್ಲದ ವಿಜ್ಞಾನ, ಸಮರ್ಪಣೆ ಇಲ್ಲದ ಧರ್ಮ, ನೀತಿಗಳಿಲ್ಲದ ರಾಜಕೀಯ ಇವೇ ಗಾಂಧಿಯವರು ಹೇಳಿದ್ದ ವಿಕೃತಗಳು ಎಂದು ಮೋದಿ ನುಡಿದರು.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷವು ನವದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ಸಂಘಟಿಸಿದ ’ಗಾಂಧಿ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿ ಪಕ್ಷ ಕಾರ್‍ಯಕರ್ತರೊಂದಿಗೆ ಸುಮಾರು ಒಂದು ಕಿಮೀ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ’ಮನ್ ಮೆ ಬಾಪು’ ಹೆಸರಿನಲ್ಲಿ ಸಂಘಟಿಸಲಾದ ಈ ಕಾರ್ಯಕ್ರಮದಲ್ಲಿ ಸ್ವಚ್ಛತೆ, ಖಾದಿ ಬಳಕೆ, ಅಹಿಂಸೆಯನ್ನು ಇತ್ಯಾದಿ ಗಾಂಧಿ ಆದರ್ಶಗಳ ಪ್ರಚಾರ ಮಾಡಲಾಯಿತು.

ರಾಜಘಾಟ್ ನಲ್ಲಿ ಗಾಂಧಿ ಜಯಂತಿ ಆಚರಣೆ ಸಂದರ್ಭದಲ್ಲಿ ಪಕ್ಷ ಕಾರ್‍ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ’ಬಿಜೆಪಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್ ಎಸ್ ಎಸ್) ರಾಷ್ಟ್ರದ  ಸಂಕೇತವನ್ನಾಗಿ ಮಾಡುವ ಸಲುವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಮೂಲೆಪಾಲು ಮಾಡುತ್ತಿದೆ ಎಂದು ಆಪಾದಿಸಿದರು.

ಬಿಜೆಪಿಯು ಮೊದಲ ಸತ್ಯದ ಹಾದಿಯಲಿ ಸಾಗುವುದನ್ನು ಕಲಿಯಬೇಕು, ಬಳಿಕ ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಜಘಾಟ್ ಗೆ ಪಕ್ಷವು ದೀನದಯಾಳು ಉಪಾಧ್ಯಾಯ ಮಾರ್ಗದಲ್ಲಿನ ದೆಹಲಿ ರಾಜ್ಯ ಕಾಂಗ್ರೆಸ್ ಕಚೇರಿ ರಾಜೀವ ಭವನದಿಂದ ಸಂಘಟಿಸಿದ ’ಗಾಂಧಿ ಸಂದೇಶ ಯಾತ್ರೆ’ಯ ನೇತೃತ್ವ ವಹಿಸಿದ್ದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಎಂದೂ ಸತ್ಯ, ಅಹಿಂಸೆ ಮತ್ತು ಸಾಮಾಜಿಕ ಸೌಹಾರ್ದದ ಮಾರ್ಗದಲ್ಲಿ ನಡೆಯದೇ ಇದ್ದವರು ಮಹಾತ್ಮ ಗಾಂಧಿಯವರ ೧೫೦ನೇ ಜನ್ಮದಿನ ಆಚರಿಸುತ್ತಿದ್ದಾರೆ ಎಂದು ಟೀಕಿಸುವ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಮಹಾತ್ಮಗಾಂಧಿ ಮತ್ತು ಲಾಲ್ ಬಹಾದುರ್ ಶಾಸ್ತಿ ಅವರ ಸಮಾಧಿಗಳಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು.

ಇಂಗ್ಲೆಂಡಿನಲ್ಲಿ ಭಜನೆ: ಬ್ರಿಟನ್ನಿನ ಹಲವಡೆಗಳಲ್ಲಿ ನಡೆಸಲಾದ ಸಮಾರಂಭಗಳಲ್ಲಿ ಮಹಾತ್ಮ ಗಾಂಧಿಯವರಿಗೆ ಪ್ರಿಯವಾದ ಭಜನೆಗಳನ್ನು ಹಾಡುವ ಮೂಲಕ ದಿವಂಗತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಟವಿಸ್ಟೋಕ್ ಚೌಕ ಮತ್ತು  ಲಂಡನ್ನಿನ ಸಂಸತ್ ಚೌಕದಲ್ಲಿ ನಡೆದ ಸಮಾರಂಭಗಳಲ್ಲಿ ಇಂಗ್ಲೆಂಡಿನ ಭಾರತೀಯ ಹೈ ಕಮೀಷನರ್ ರುಚಿ ಘನಶ್ಯಾಮ್ ಗೌರವಾರ್ಪಣೆ ಮಾಡಿದರು.

October 3, 2019 - Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Prime Minister, Spardha, World |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ