SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

‘ಸಾಲಶೂರ’  ಇಮ್ರಾನ್ ಖಾನ್: ಒಂದೇ ವರ್ಷದಲ್ಲಿ 7,500  ಶತಕೋಟಿ ರೂ ಎರವಲು


09 imran-khan spardha web
ಇಸ್ಲಾಮಾಬಾದ್
: ಪಾಕಿಸ್ತಾನದ ಆಡಳಿತಾರೂಢ  ಇಮ್ರಾನ್ ಖಾನ್ ಸರ್ಕಾರವು ತನ್ನ ಅಧಿಕಾರಾವಧಿಯ ಮೊದಲ ವರ್ಷದಲ್ಲಿ ಹಣವನ್ನು ಎರವಲು ಪಡೆಯುವಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಿತು. ಅಧಿಕೃತ ಮಾಹಿತಿಯ ಪ್ರಕಾರ, ಪ್ರಸ್ತುತ ಸರ್ಕಾರದ ಒಂದು ವರ್ಷದ ಆಡಳಿತದಲ್ಲಿ ದೇಶದ ಒಟ್ಟು ಸಾಲವು 7,509  ಶತಕೋಟಿ (ಬಿಲಿಯನ್) ರೂಪಾಯಿಗಳಷ್ಟು  (ಪಾಕಿಸ್ತಾನಿ ಕರೆನ್ಸಿ) ಹೆಚ್ಚಳ ದಾಖಲಾಯಿತು.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನವು  ಈ ಸಾಲ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ಪಾಕಿಸ್ತಾನಿ ಮಾಧ್ಯಮಗಳು 2019 ಅಕ್ಟೋಬರ್ 09ರ ಬುಧವಾರ ವರದಿ ಮಾಡಿದವು.

ಆಗಸ್ಟ್ 2018  ಮತ್ತು ಆಗಸ್ಟ್ 2019 ರ ನಡುವೆ ಸರ್ಕಾರವು ವಿದೇಶೀ  ಮೂಲಗಳಿಂದ 2,804 ಶತಕೋಟಿ ( ಬಿಲಿಯನ್) ರೂಪಾಯಿ ಮತ್ತು ದೇಶೀಯ ಮೂಲಗಳಿಂದ 4,705 ಶತಕೋಟಿ (ಬಿಲಿಯನ್) ರೂಪಾಯಿಗಳನ್ನು ಎರವಲು ಪಡೆದಿದೆ ಎಂದು ವರದಿ ತಿಳಿಸಿತು.

ಸ್ಟೇಟ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಪಾಕಿಸ್ತಾನದ ಸರ್ಕಾರಿ ಸಾಲದಲ್ಲಿ ಶೇಕಡಾ 1.43 ರಷ್ಟು ಏರಿಕೆ ಕಂಡುಬಂದಿದೆ. ಫೆಡರಲ್ ಸರ್ಕಾರದ ಸಾಲವು ಪ್ರಸ್ತುತ ವರ್ಷ 32,240  ಶತಕೋಟಿ (ಬಿಲಿಯನ್)  ರೂಪಾಯಿಗಳಿಗೆ ತಲುಪಿದೆ, ಅದು ಕಳೆದ ವರ್ಷ ಆಗಸ್ಟಿನಲ್ಲಿ 24,732 ಶತಕೋಟಿ  (ಬಿಲಿಯನ್)  ರೂಪಾಯಿ ಆಗಿತ್ತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರದ ತೆರಿಗೆ ಸಂಗ್ರಹವು 960 ಶತಕೋಟಿ (ಬಿಲಿಯನ್)  ರೂಪಾಯಿಗಳಷ್ಟಾಗಿದೆ. ಸರ್ಕಾರವು ಹೊಂದಿದ್ದ ತೆರಿಗೆ ಸಂಗ್ರಹ ಗುರಿ 1 ಟ್ರಿಲಿಯನ್ ರೂಪಾಯಿಗಳು ಎಂದು ವರದಿಗಳು ತಿಳಿಸಿದವು.

October 9, 2019 - Posted by | ಆರ್ಥಿಕ, ಪಾಕಿಸ್ತಾನ, ಪ್ರಧಾನಿ, ವಿಶ್ವ/ ಜಗತ್ತು, Finance, Flash News, General Knowledge, News, Pakistan, Politics, Prime Minister, Spardha, World | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ