SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕಲ್ಕಿ ಭಗವಾನ್ ಆಶ್ರಮಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ


18 Kalki Bhagavan
ಚೆನ್ನೈ
: ಸ್ವಯಂ ಘೋಷಿತ ‘ದೇವಮಾನವ’ ಕಲ್ಕಿ ಭಗವಾನ್‌‌  ಅವರಿಗೆ ಸೇರಿದ ಆಂಧ್ರ ಪ್ರದೇಶದ ವರದೈಪಾಲಂ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನ ಅಧ್ಯಾತ್ಮ ಮತ್ತು ವೇದಾಂತ ಬೋಧನೆ ಹಾಗೂ ತರಬೇತಿ ಕೇಂದ್ರಗಳ ಮೇಲೆ ಆದಾಯ ತೆರಿಗೆ ಇಲಾಖೆ 2019 ಅಕ್ಟೋಬರ್ 18ರ ಶುಕ್ರವಾರ ದಾಳಿ ನಡೆಸಿತು.

ಅಕ್ಟೋಬರ್ 16 ಬುಧವಾರವೇ ಈ ದಾಳಿ ಆರಂಭವಾಗಿದ್ದು ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ವರದೈಪಾಲಂನಲ್ಲಿರುವ 40 ಪ್ರಮುಖ ಪ್ರದೇಶಗಳಲ್ಲಿ ದಾಳಿ ಮುಂದುವರೆಯಿತು.

ಸ್ವಯಂ ಘೋಷಿತ ‘ದೇವಮಾನವ’ ಕಲ್ಕಿ ಭಗವಾನ್‌‌ ಮತ್ತು ಅವರ ಮಗ ಕೃಷ್ಣ ಅವರ ಮಾಲೀಕತ್ವದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದುವರೆಗೆ ರೂ.  43.9 ಕೋಟಿ ನಗದು ಹಾಗೂ ಡಾಲರ್‌ ರೂಪದಲ್ಲಿದ್ದ 18 ಕೋಟಿ ಮತ್ತು ರೂ 26 ಕೋಟಿ ಮೌಲ್ಯದ 88 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಲಾಗಿದೆ ಎನ್ನುವ ಖಚಿತ ಮಾಹಿತಿ ಪಡೆದು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿನ ಆಶ್ರಮಗಳು ಸೇರಿದಂತೆ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಈ ದಾಳಿ ನಡೆಸಲಾಗಿತ್ತು.

ಈ ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾದ  ದಾಖಲೆಗಳ ಅನ್ವಯ ಸುಮಾರು ರೂ.500 ಕೋಟಿ ತೆರಿಗೆಯನ್ನು ವಂಚಿಸಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿದವು.

ಕೆಲವು ಉದ್ಯಮಗಳಲ್ಲಿ ಅಪಾರ ಹಣವನ್ನು ಕೃಷ್ಣ ಹೂಡಿಕೆ ಮಾಡಿದ್ದು, ಇವುಗಳ ಮೂಲಕವೇ ತೆರಿಗೆ ವಂಚಿಸಲಾಗಿದೆ ಎನ್ನುವ ಅನುಮಾನ ಮೂಡಿದೆ. ತಂದೆಯ ಆಶ್ರಮದ ಹಣವನ್ನು ತನ್ನ ಕಂಪನಿಗಳಿಗೆ ಈತ ವರ್ಗಾಯಿಸಿದ್ದರೆನ್ನಲಾಯಿತು..

‘ಕಲ್ಕಿ ಭಗವಾನ್‌ ಮಾಲೀಕತ್ವ ಹೊಂದಿರುವ ಆಶ್ರಮದಿಂದ ಅಪಾರ ಪ್ರಮಾಣದಲ್ಲಿ ನಗದು ಮತ್ತು ಚಿನ್ನ ವಶಪಡಿಸಿಕೊಳ್ಳಲಾಗಿದೆ. ದಾಖಲೆಗಳನ್ನು ಆಶ್ರಮ ಮತ್ತು ಇತರ ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಲ್ಕಿ ಭಗವಾನ್‍ಗೆ ಸೇರಿದ ಆಶ್ರಮಗಳು, ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ವಿದೇಶಿ ಕರೆನ್ಸಿಗಳು ಸೇರಿದಂತೆ 33 ಕೋಟಿ ರೂ. ನಗದು ವಶಪಡಿಸಿಕೊಂಡರು.

October 18, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Spardha | , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ